• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಷೇರುಪೇಟೆಯಲ್ಲಿ ರಕ್ತಪಾತ: 3.3 ಲಕ್ಷ ಕೋಟಿ ನಷ್ಟಕ್ಕೆ 5 ಕಾರಣ

|

ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ ಕಳೆದ ಹತ್ತು ದಿನಗಳ ಕಾಲ ಏರಿಕೆ ಗತಿಯಲ್ಲಿದ್ದ ಷೇರುಪೇಟೆಯ ಸೂಚ್ಯಂಕದಲ್ಲಿ ಇಂದು ರಕ್ತಪಾತ(Blood bath)ವಾಗಿದೆ.

   ಸತತ ಏರಿಕೆ ನಂತರ ದೊಡ್ಡ ಬ್ರೇಕ್ ಕಂಡ Sensex | Oneindia Kannada

   ಸೆನ್ಸೆಕ್ಸ್ ಸೂಚ್ಯಂಕದಲ್ಲಿ1066.33 ಪಾಯಿಂಟ್ ಕುಸಿದು 39,728.21 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್ ಸೂಚ್ಯಂಕವು ಹೀಗೆ ಸಾವಿರಾರು ಅಂಕ ಕುಸಿದು ಸೆಕೆಂಡುಗಳಲ್ಲಿ ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ನಷ್ಟವಾದರೆ, ಏಷ್ಯಾ, ಯುರೋಪ್, ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿಯೂ ಕುಸಿತವಾದರೆ ಅದನ್ನು ಬ್ಲಡ್ ಬಾತ್ ಎನ್ನಲಾಗುತ್ತದೆ.

   ಅಕ್ಟೋಬರ್ 15ರಂದು ನಿಫ್ಟಿ 290.7 ಪಾಯಿಂಟ್ ಗಳ ಇಳಿಕೆಯಾಗಿ 11,680.35 ಅಂಶದೊಂದಿಗೆ ವ್ಯವಹಾರ ಮುಗಿಸಿತ್ತು. ಬ್ಯಾಂಕ್ ನಿಫ್ಟಿಯಲ್ಲೂ ಭರ್ಜರಿ ಕುಸಿತವಾತಿ 802.30 ಪಾಯಿಂಟ್, 23,072.40 ಪಾಯಿಂಟ್ ನಂತೆ ದಿನದ ಕೊನೆಗೆ ವ್ಯವಹಾರ ಮುಕ್ತಾಯ ಕಂಡಿದೆ.

   2018ರಲ್ಲಿ ಸುಮಾರು 1,274 ಅಂಕಗಳು ಒಮ್ಮೆಗೆ ಕುಸಿದು ಸೆಕೆಂಡುಗಳಲ್ಲಿ ಸರಿ ಸುಮಾರು 5.4 ಲಕ್ಷ ಕೋಟಿ ರು ನಷ್ಟವಾಗಿತ್ತು. ಇದಕ್ಕೆ ಹೋಲಿಸಿದರೆ ಇಂದು ನಷ್ಟದ ಪ್ರಮಾಣ ಕಡಿಮೆ ಎನ್ನಬಹುದು.

   ಐಟಿ, ಬ್ಯಾಂಕಿಂಗ್ ಷೇರುಗಳ ಏರಿಕೆ

   ಐಟಿ, ಬ್ಯಾಂಕಿಂಗ್ ಷೇರುಗಳ ಏರಿಕೆ

   ಕಳೆದ 10 ಟ್ರೇಡಿಂಗ್ ಸೆಷನ್ ಗಳಲ್ಲಿ ಐಟಿ ಷೇರುಗಳ ಮೌಲ್ಯ ಏರಿಕೆ ಇಂದಿನ ಈ ಏರಿಳಿತಕ್ಕೆ ಒಂದು ಕಾರಣ ಎನ್ನಬಹುದು. ಕಳೆದ ಒಂದು ತಿಂಗಳಲ್ಲಿ ಎನ್ಎಸ್ಇಯಲ್ಲಿ ಶೇ 12ರಷ್ಟು ಏರಿಕೆ ಕಂಡಿದ್ದ ಷೇರುಗಳು ಇಂದು ದಿಢೀರ್ ಆಗಿ ಶೇ 3ರಷ್ಟಕ್ಕೆ ಕುಸಿದಿದೆ. ಎಚ್ ಸಿಎಲ್ ಟೆಕ್, ಇನ್ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರಾ ಷೇರು ಕುಸಿತ ಕಂಡಿವೆ. ಬ್ಯಾಂಕ್ ಷೇರುಗಳು ನಿಫ್ಟಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿತ್ತು. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಅನೇಕ ಕಂಪನಿ ಷೇರುಗಳು ಶೇ 3.54ರಷ್ಟು ಇಳಿಕೆಯಾಯಿತು.

   ಯುಎಸ್ ಆರ್ಥಿಕ ಪ್ಯಾಕೇಜ್ ಭರವಸೆ ಹುಸಿ

   ಯುಎಸ್ ಆರ್ಥಿಕ ಪ್ಯಾಕೇಜ್ ಭರವಸೆ ಹುಸಿ

   ಯುಎಸ್ ನ ಖಜಾನೆ ಕಾರ್ಯದರ್ಶಿ ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೊಸಿ ಮತ್ತೊಂದು ಸುತ್ತಿನ ಆರ್ಥಿಕ ಪ್ಯಾಕೇಜ್ ಭರವಸೆ ಘೋಷಿಸುವ ಭರವಸೆ ಹುಸಿಯಾಗಿದ್ದರಿಂದ ವಿಶ್ವದೆಲ್ಲೆಡೆ ಷೇರುಪೇಟೆಯಲ್ಲಿ ತಲ್ಲಣವಾಗಿದೆ. ನವೆಂಬರ್ 3ರ ಯುಎಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಆರ್ಥಿಕ ಪ್ಯಾಕೇಜ್ ಅಂತಿಮಗೊಳಿಸಲು ಸಾಧ್ಯವಿಲ್ಲ ಎಂದು ಯುಎಸ್ ಖಜಾನೆ ಕಾರ್ಯದರ್ಶಿ ಎಂ ಸ್ಟೀಟನ್ ಕೂಡಾ ಘೋಷಿಸಿದ್ದಾರೆ.

   ಯುಎಸ್ ಚೀನಾ ನಡುವಿನ ಸಂಘರ್ಷ

   ಯುಎಸ್ ಚೀನಾ ನಡುವಿನ ಸಂಘರ್ಷ

   ಚೀನಾ ಮೂಲದ Ant ಸಮೂಹ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸುವಂತೆ ಟ್ರಂಪ್ ಆಡಳಿತಕ್ಕೆ ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಪ್ರಸ್ತಾವ ಸಲ್ಲಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆಲಿಬಾಬಾ ಕಂಪೆನಿ ಐಪಿಒಗೆ ತೆರಳುವ ಮುನ್ನ ಈ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದೆ ಎನ್ನಲಾಗುತ್ತಿದೆ. ಯುಎಸ್ ಹಾಗೂ ಚೀನಾ ನಡುವಿನ ಆರ್ಥಿಕ, ರಾಜತಾಂತ್ರಿಕ ಸಂಘರ್ಷ ವಾಲ್ ಸ್ಟ್ರೀಟ್ ಮೇಲೆ ಭಾರಿ ಪರಿಣಾಮ ಬೀರಿದೆ.

   ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಮಹಾಪತನ

   ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಮಹಾಪತನ

   ಭಾರತೀಯ ಷೇರುಪೇಟೆಯಲ್ಲಿ ಇಂದು ಎರಡನೇ ಅವಧಿಯಲ್ಲಿ ಮಹಾಪತನ ಆರಂಭವಾಗುತ್ತಿದ್ದಂತೆ ಯುರೋಪಿಯನ್ ಮಾರುಕಟ್ಟೆ ಇಳಿಮುಖದೊಂದಿಗೆ ಆರಂಭವಾಯಿತು. ಜರ್ಮನಿಯ ಡಿಎಎಕ್ಸ್ ಶೇ 3.02%, ಲಂಡನ್ನಿನ ಎಫ್ ಟಿ ಎಸ್ ಇ 100 ಶೇ 2.31ರಷ್ಟು, ಫ್ರಾನ್ಸಿನ ಸಿಎಸಿ 40 ಇಂಡೆಕ್ಸ್ ಕಳೆದುಕೊಂಡು ಶೇ 2.38ರಷ್ಟು ಹಾಗೂ ಯುಎಸ್ ಇಂಡೆಕ್ಸ್ ಫ್ಯೂಚರ್ಸ್ ಶೇ 1 ರಿಂದ 1.80ರಷ್ಟು ಕುಸಿತ ಕಂಡವು. ವಾಲ್ ಸ್ಟ್ರೀಟ್ ಆರಂಭವೂ ಕಳಪೆಯಾಗಿತ್ತು. ಏಷ್ಯಾದ ಇತರೆ ಮಾರುಕಟ್ಟೆಗಳ ಕತೆಯಲ್ಲೂ ವ್ಯತ್ಯಾಸ ವಿರಲಿಲ್ಲ.

   ಕೊವಿಡ್ 19 ಲಾಕ್ಡೌನ್

   ಕೊವಿಡ್ 19 ಲಾಕ್ಡೌನ್

   ಚಳಿಗಾಲದಲ್ಲಿ ಕೊವಿಡ್ 19 ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳಲಿದೆ ಎಂಬ ವರದಿ ಬೆನ್ನಲ್ಲೇ ಫ್ರಾನ್ಸ್ ಸೇರಿದಂತೆ ಅನೇಕ ಯುರೋಪಿಯನ್ ರಾಷ್ಟ್ರಗಳು ಕರ್ಫ್ಯೂ, ಲಾಕ್ಡೌನ್ ಹೇರಿಕೆಗೆ ಮುಂದಾಗಿವೆ. ಪ್ರತಿ ದಿನ 100,000 ಪ್ರಕರಣಗಳು ದಾಖಲಾಗುತ್ತಿದ್ದು, ಅಮೆರಿಕ ಹಾಗೂ ಭಾರತದಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಅಧಿಕವಾಗಿದೆ. ಯುರೋಪಿನ ಆರ್ಥಿಕ ಚಟುವಟಿಕೆಗೆ ನಿರ್ಬಂಧ ಹೇರಿದ್ದರಿಂದ ಷೇರುಪೇಟೆ ಮೇಲೆ ಪರಿಣಾಮವಾಗಿದೆ.

   English summary
   Indian equity markets broke their 10-day gaining streak and ended sharply lower on Thursday eroding over Rs 3.30 lakh crore of investors' wealth.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X