ನಕಲಿ ಸುದ್ದಿ ತಗ್ಗಿಸಲು ವಾಟ್ಸಾಪ್ ಹೊಸ ವೈಶಿಷ್ಟ್ಯ: ಸುದ್ದಿ ಅಸಲಿಯೋ, ನಕಲಿಯೋ ಪರೀಕ್ಷಿಸಿ..!
ನವದೆಹಲಿ, ಆಗಸ್ಟ್ 06: ನಕಲಿ ಸುದ್ದಿಗಳ ಫಾರ್ವಡ್ ಮೂಲಕ ಸಾಮಾಜಿಕ ಜಾಲತಾಣ ವಾಟ್ಸಾಪ್ ಯಾವಾಗಲೂ ಸುದ್ದಿಯಲ್ಲಿರುತ್ತೆ. ಆದರೆ, ಈ ನಕಲಿ ಸುದ್ದಿಗಳನ್ನು ಕಡಿಮೆ ಮಾಡಲು ವಾಟ್ಸಾಪ್ ಮುಂದಾಗಿದೆ. ಇದಕ್ಕಾಗಿಯೇ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.
ವಾಟ್ಸಾಪ್‌ನ ಈ ವೈಶಿಷ್ಟ್ಯವನ್ನು ಬಳಸಿ, ನೀವು ವಾಟ್ಸ್ ಆಪ್ ನಲ್ಲಿ ಫಾರ್ವರ್ಡ್ ಗೊಂಡ ಯಾವುದೇ ಸಂದೇಶವನ್ನು ನೇರವಾಗಿ ಗೂಗಲ್ ನಲ್ಲಿ ಸರ್ಚ್ ಮಾಡಬಹುದು ಮತ್ತು ಆ ಸುದ್ದಿಯ ವಾಸ್ತವತೆಯನ್ನು ನೀವು ಗೂಗಲ್ ಮೂಲಕ ಕಂಡುಹಿಡಿಯಬಹುದು.
ವಾಟ್ಸಾಪ್ ಇತ್ತೀಚೆಗಷ್ಟೇ ತನ್ನ ಹೊಸ ವೈಶಿಷ್ಟ್ಯ ಸರ್ಚ್ ದಿ ವೆಬ್ ಬಗ್ಗೆ ಮಾಹಿತಿ ನೀಡಿತ್ತು. ವಾಟ್ಸ್ ಆಪ್ ನಿರಂತರವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ಸುದ್ದಿಗಳನ್ನು ತಡೆಯುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದೆ. ಇದರದೇ ಒಂದು ಭಾಗವಾಗಿ ಇಂದಿನಿಂದ, ವಾಟ್ಸಾಪ್ ತನ್ನ ಬಳಕೆದಾರರಿಗೆ ಫಾರ್ವರ್ಡ್ ಸಂದೇಶವನ್ನು ಪರಿಶೀಲಿಸಲು ಗೂಗಲ್‌ನಲ್ಲಿ ಹುಡುಕುವ ಆಯ್ಕೆಯನ್ನು ನೀಡಿದೆ. ಇದರಿಂದ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು.

ಚಾಟ್‌ನಲ್ಲಿ ಬಳಕೆದಾರರು ಟ್ಯಾಪ್ ಮಾಡುವ ಮೂಲಕ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಎರಡು ಬಾರಿ ಪರಿಶೀಲಿಸಬೇಕಾಗುತ್ತದೆ. ಹೀಗಾಗಿಯೇ ವಾಟ್ಸಾಪ್‌ನಿಂದ ಈ ಹೊಸ ಅವಕಾಶ ನೀಡಿದೆ.
ವಾಟ್ಸ್ ಆಪ್ ನ ಈ ನೂತನ ವೈಶಿಷ್ಟ್ಯದ ವಿಶೇಷತೆ ಎಂದರೆ, ಇದಕ್ಕಾಗಿ ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ಬಂದ್ ಮಾಡುವ ಅವಶ್ಯಕತೆ ಇಲ್ಲ. ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಬಳಕೆದಾರರಿಗೆ ಫೇಕ್ ನ್ಯೂಸ ತಡೆಗಟ್ಟಲು ಬಳಕೆದಾರರು ತಮಗೆ ಫಾರ್ವರ್ಡ್ ಮಾಡಲಾಗಿರುವ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅದನ್ನು ಡಿಲೀಟ್ ಮಾಡಬಹುದಾಗಿದೆ. ಈ ರೀತಿ ಮಾಡುವುದರಿಂದ ಫೇಕ್ ನ್ಯೂಸ್ ಇತರರಿಗೆ ಹರಡುವುದು ತಪ್ಪಲಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications