ವಾಟ್ಸಾಪ್ ಬ್ಯಾಂಕಿಂಗ್ ಬಾಗಿಲು ತೆರೆಯಲು ಸಿದ್ಧವಾಗಿದೆ!
ಬೆಂಗಳೂರು, ಮೇ 30: ಫೇಸ್ ಬುಕ್ ಒಡೆತನದ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಪ್ ಮೂಲಕ ಹಣ ವರ್ಗಾವಣೆ ಮುಂದಿನ ವಾರದಿಂದ ಸಾಧ್ಯವಾಗಬಹುದು. ಯುಪಿಐ (ಯುನಿಫೈಡ್ ಪೇಯ್‌ಮೆಂಟ್ ಇಂಟರ್‌ಫೇಸ್) ವರ್ಗಾವಣೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ಯಶ ಕೊಟ್ಟಿದ್ದು, ಭಾರತದೆಲ್ಲೆಡೆ ವಾಟ್ಸಾಪ್ ಬ್ಯಾಂಕಿಂಗ್ ವಿಸ್ತರಣೆ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ.
ವಿಚಾಟ್ ಹಾಗೂ ಹೈಕ್ ಮೆಸೆಂಜರ್‌ನಂತಹ ಇತರ ಕೆಲವು ಮೊಬೈಲ್ ಸಂದೇಶ ಅಪ್ಲಿಕೇಶನ್‌ಗಳು ಈಗಾಗಲೇ ಯುಪಿಐ ಆಧರಿಸಿದ ಪಾವತಿ ಸೇವೆ ಹೊಂದಿವೆ. ಆದರೆ, ವಾಟ್ಸಾಪ್ ಬ್ಯಾಕಿಂಗ್ ಗೆ ಗೂಗಲ್ ತೇಜ್, ಪೇಟಿಯಂ ನೇರ ಸ್ಪರ್ಧಿಗಳಾಗಿವೆ.
ಇದಕ್ಕಾಗಿ ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ವಾಟ್ಸಾಪ್ ಬ್ಯಾಂಕಿಂಗ್ ಜತೆ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳೊಂದಿಗೆ ವಾಟ್ಸ್‌ಆಪ್ ಸಹಭಾಗಿತ್ವವನ್ನು ಹೊಂದಲಿದೆ.

ಮೊಬೈಲ್ ಬಳಸಿ ಎರಡು ಬ್ಯಾಂಕ್‌ಗಳ ಖಾತೆಗಳ ನಡುವೆ ತಕ್ಷಣ ಹಣ ವರ್ಗಾವಣೆ ಮಾಡುವ ಯುಪಿಐಯನ್ನು ನ್ಯಾಶನಲ್ ಕಾರ್ಪೋರೇಶನ್ ಆಫ್ ಇಂಡಿಯಾ ಆರಂಭಿಸಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು ನಿಯಂತ್ರಿಸುತ್ತಿದೆ.
ವಾಟ್ಸಾಪ್ ಪೇಮೆಂಟ್ ಪ್ಲಾಟ್‌ಫಾರ್ಮ್(ರುಪಿ ಚಿನ್ಹೆ ನೀಡಲಾಗಿರುತ್ತದೆ) ಮೂಲಕ ಸಮೀಪದ ಮೊಬೈಲ್ ಫೋನ್ ಜತೆಗೆ ಸಂಪರ್ಕ ಸಾಧಿಸಿ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ. ಇಂಟರ್ನೆಟ್ ಇಲ್ಲದಿದ್ದರೂ ಮೈಕ್ರೋಫೋನ್ ಮತ್ತು ಸ್ಪೀಕರ್ ಮುಖಾಂತರ ಅಲ್ಟ್ರಾಸೌಂಡ್ ಕಿರಣಗಳನ್ನು ಬಳಸಿ ಹತ್ತಿರದ ಫೋನ್ ಜತೆಯೂ ಆಪ್ ಸಂಪರ್ಕ ಹೊಂದಬಹುದು ಎಂದು ವರದಿ ಬಂದಿದೆ.
ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಈಗ ಮೊಬೈಲ್ ಬ್ಯಾಂಕಿಂಗ್ ಕ್ಷೇತ್ರಕ್ಕೆ ಇಳಿಯುವ ಮೂಲಕ ಹೊಸ ಕ್ರಾಂತಿ ಉಂಟು ಮಾಡುವ ನಿರೀಕ್ಷೆ ಹುಟ್ಟುಹಾಕಿದೆ.












Click it and Unblock the Notifications