EPFO: ಪಿಎಫ್‌ ಬಡ್ಡಿದರ ನಾಲ್ಕು ದಶಕಗಳ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ!

ನವದೆಹಲಿ, ಮಾರ್ಚ್ 12: ಉದ್ಯೋಗಿಗಳ 2021-22ರ ವರ್ಷದ ಭವಿಷ್ಯ ನಿಧಿ ಬಡ್ಡಿದರವನ್ನು ಶೇಕಡ 8.5ರಿಂದ ಶೇಕಡ 8.1ಕ್ಕೆ ಇಳಿಕೆ ಕಂಡಿದೆ. 2021-22 ರ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರವನ್ನು 2021-22 ಕ್ಕೆ ಅಸ್ತಿತ್ವದಲ್ಲಿರುವ ಶೇಕಡಾ 8.5 ರಿಂದ 8.1 ಕ್ಕೆ ಶನಿವಾರ ಕಡಿತಗೊಳಿಸಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

1977-78ರ ನಂತರದ ಅತ್ಯಂತ ಕಡಿಮೆ ದರ ಇದಾಗಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಸುಮಾರು ಐದು ಕೋಟಿ ಚಂದಾದಾರರನ್ನು ಹೊಂದಿದ್ದು, ಈ ಚಂದಾದಾರರಿಗೆ 2021-22ರತಮ್ಮ ಪಿಎಫ್‌ ಬಡ್ಡಿದರವು 8.1ಕ್ಕೆ ಆಗಿದೆ.

ಗುವಾಹಟಿಯಲ್ಲಿ ನಡೆದ ಇಪಿಎಫ್‌ಒ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

EPFO interest rate for 2021-22 lowered to 8.1% from 8.5%

ಮಂಡಳಿಯ ಶಿಫಾರಸನ್ನು ಶೀಘ್ರದಲ್ಲೇ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. 2020-21ರಲ್ಲಿ ಬಡ್ಡಿ ದರವು ಶೇಕಡಾ 8.5 ರಷ್ಟಿತ್ತು.

ಒಮ್ಮೆ ಹಣಕಾಸು ಸಚಿವಾಲಯವು ಮಂಡಳಿಯ ನಿರ್ಧಾರವನ್ನು ಅನುಮೋದಿಸಿದ ನಂತರ, ಇಪಿಎಫ್‌ಒ ತನ್ನ ಕ್ಷೇತ್ರ ಕಚೇರಿಗಳಿಗೆ 2021-22 ರ ಹೊಸ ದರದಲ್ಲಿ 8.1 ಶೇಕಡಾ ಬಡ್ಡಿ ಆದಾಯವನ್ನು ಚಂದಾದಾರರ ಖಾತೆಗಳಲ್ಲಿ ಕ್ರೆಡಿಟ್ ಮಾಡಲು ನಿರ್ದೇಶನ ನೀಡಲಿದೆ. ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2018-19ರಲ್ಲಿ 8.65 ಪ್ರತಿಶತ ಒದಗಿಸಲಾಗಿತ್ತು. ಆದರೆ 2019-20ಕ್ಕೆ ಏಳು ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಕೆ ಮಾಡಲಾಗಿತ್ತು. 2019-20ಕ್ಕೆ ಒದಗಿಸಲಾದ ಇಪಿಎಫ್ ಬಡ್ಡಿ ದರವು 2012-13ರ ನಂತರ ಅತ್ಯಂತ ಕಡಿಮೆಯಾಗಿದ್ದು, ಅದನ್ನು ಶೇ.8.5ಕ್ಕೆ ಇಳಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಪಿಎಫ್ ಬಡ್ಡಿದರ ಎಷ್ಟಿದೆ ತಿಳಿಯಿರಿ

2020-2021: ಶೇಕಡ 8.50
2019-2020: ಶೇಕಡ 8.50
2018-2019: ಶೇಕಡ 8.65
2017-2018: ಶೇಕಡ 8.55
2016-2017: ಶೇಕಡ 8.65
2015-2016: ಶೇಕಡ 8.80
2013-2015: ಶೇಕಡ 8.75
2012-2013: ಶೇಕಡ 8.50
2011-2012: ಶೇಕಡ 8.25
2010-2011: ಶೇಕಡ 9.50
2005-2006ರಿಂದ 2009-2010: ಶೇಕಡ 8.50

ಬಡ್ಡಿದರದ ಮೇಲೆ ತೆರಿಗೆ ಹೊರೆ

ಇನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಮಿನಿ ಬಜೆಟ್ ಮಂಡಿಸಿ ಕೇಂದ್ರ ಸರ್ಕಾರವು ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಹಲವು ಸೌಲಭ್ಯಗಳನ್ನು ಕಾರ್ಮಿಕರು, ರೈತರು, ಮಹಿಳೆಯರಿಗೆ ಘೋಷಿಸಿದ್ದರು. ಆದರೆ, ಭವಿಷ್ಯನಿಧಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಲ್ಲಿ ಕೇಂದ್ರ ಬಜೆಟ್ ಭಾಷಣದಲ್ಲಿ ನಿರ್ಮಲಾ ಅವರು ಮಂಡಿಸಿಲ್ಲ, ಬದಲಿಗೆ ಬಡ್ಡಿದರದ ಮೇಲೆ ತೆರಿಗೆ ವಿಧಿಸಿದ್ದಾರೆ. ನೌಕರರ ಭವಿಷ್ಯ ನಿಧಿ(ಇಪಿಎಫ್)ಯ ಮೊತ್ತದ ಬಡ್ಡಿ ಮೇಲೆ ತೆರಿಗೆ ವಿಧಿಸಲಾಗಿದೆ. ವಾರ್ಷಿಕ 2.5 ಲಕ್ಷ ರು ಅಥವಾ ಅದಕ್ಕಿಂತ ಅಧಿಕ ಮೊತ್ತದ ಪಿಎಫ್ ದೇಣಿಗೆ ಮೊತ್ತಕ್ಕೆ ಬರುವ ಬಡ್ಡಿ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಏಪ್ರಿಲ್ 1, 2021ರಿಂದ ಈ ನಿಯಮ ಜಾರಿಯಾಗುತ್ತಿದೆ ಎಂದು ಬಜೆಟ್ 2021ರ ಭಾಷಣದಲ್ಲಿ ನಿರ್ಮಲಾ ಅವರು ಪ್ರಸ್ತಾಪಿಸಿದರು.

ವಾರ್ಷಿಕವಾಗಿ 2 ಲಕ್ಷಕ್ಕಿಂತ ಕಡಿಮೆ ಮೊತ್ತದ ಆದಾಯ ಹೊಂದಿರುವ ನೌಕರರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ವಾರ್ಷಿಕ 2.5 ಲಕ್ಷ ರುಗು ಅಧಿಕ ಮೊತ್ತದ ದೇಣಿಗೆ ನೀಡುವ ಉದ್ಯೋಗಿಯ ದೇಣಿಗೆ ಬಡ್ಡಿ ಮೇಲೆ ಮಾತ್ರ ತೆರಿಗೆ ಬೀಳಲಿದ್ದು, ಉದ್ಯೋಗದಾತರ ಕೊಡುಗೆಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸ್ವಯಂ ಪ್ರೇರಿತ ಪಿಎಫ್(ವಿಪಿಎಫ್) ಮಾರ್ಗ ಬಳಸಿ ಹೆಚ್ಚು ವರಮಾನವುಳ್ಳ ಉದ್ಯೋಗಿಗಳು ತೆರಿಗೆ ಉಳಿಸುತ್ತಿದ್ದರು. ಇನ್ಮುಂದೆ ತೆರಿಗೆ ಪಾವತಿ ಅನಿವಾರ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+