ನಿವೃತ್ತಿ ದಿನವೇ ಉದ್ಯೋಗಿಗಳ ಕೈಗೆ ಪಿಂಚಣಿ ಮೊತ್ತ
ನವದೆಹಲಿ, ಜುಲೈ 20 : ಉದ್ಯೋಗಿಗಳು ನಿವೃತ್ತರಾಗುವ ದಿನದಂದೇ ಉದ್ಯೋಗಿಗಳ ಪಿಂಚಣಿ ಪ್ರಯೋಜನಗಳನ್ನು ಇತ್ಯರ್ಥಪಡಿಸಬೇಕು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ರಾಜ್ಯಸಭೆಗೆ ಈ ಬಗ್ಗೆ ಮಾಹಿತಿ ನೀಡಿ, ''ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ 1952 ಮತ್ತು ಪಿಂಚಣಿ ಯೋಜನೆ 1995ರ ಹಣ ಪಾವತಿ ಮತ್ತು ಪಿಂಚಣಿ ಸೌಲಭ್ಯಗಳನ್ನು ನಿವೃತ್ತರಾಗುವ ದಿನವೇ ಇತ್ಯರ್ಥಪಡಿಸಲು ಸೂಚಿಸಲಾಗಿದೆ' ಎಂದರು.

ಗ್ರಾಚುಟಿ ಬಗ್ಗೆ ವಿವರಿಸಿ, ಗ್ರಾಚುಟಿ ಪಾವತಿ ಕಾಯ್ದೆ 1972ರ ಅನ್ವಯ ಉದ್ಯೋಗದಾತರು, ಗ್ರಾಚುಟಿ ಮೊತ್ತವನ್ನು 30ದಿನದೊಳಗೆ ಉದ್ಯೋಗಿಗೆ ನೀಡತಕ್ಕದ್ದು ಎಂದು ಸಚಿವರು ಹೇಳಿದರು.
ಸುಮಾರು 48.85 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 55.51 ಲಕ್ಷ ಪಿಂಚಣಿದಾರರಿದ್ದಾರೆ. ಉದ್ಯೋಗಿಗಳು ನಿವೃತ್ತಿಯಾಗುವ ದಿನವೇ ಪೂರ್ತಿ ಸೆಟ್ಲ್ ಮೆಂಟ್ ಮಾಡುವ ಬಗ್ಗೆ ಕೇಂದ್ರ ಸರ್ಕಾರ 2014ರಲ್ಲೇ ಕ್ರಮ ಕೈಗೊಂಡಿದ್ದು, ನಿಧಾನಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ನಿವೃತ್ತಿ ದಿನವೇ ಇಪಿಎಫ್, ಪಿಂಚಿಣಿ, ಗ್ರಾಚುಟಿ ಮೊತ್ತವು ಉದ್ಯೋಗಿಗಳ ಕೈ ಸೇರುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.(ಪಿಟಿಐ)












Click it and Unblock the Notifications