EPFO 3.0 Atm & Upi Withdrawal: ಪಿಎಫ್ ಹಣ ವಿತ್ ಡ್ರಾ ಇನ್ಮುಂದೆ ಸಿಕ್ಕಾಪಟ್ಟೆ ಸುಲಭ!
EPFO 3.0 Atm & Upi Withdrawal: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) - ಇಪಿಎಫ್‌ಒ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ತಂದಿದೆ. ದೇಶದಲ್ಲಿರುವ ಲಕ್ಷಾಂತರ ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ (PF) ಅಥವಾ ಪಿಎಫ್ ಹಣವನ್ನು ಇನ್ಮುಂದಿನ ದಿನಗಳಲ್ಲಿ ಅವರು ಎಟಿಎಂಗಳಿಂದಲೇ ವಿತ್ ಡ್ರಾ ಮಾಡಿಕೊಳ್ಳಬಹುದಾದ ಭರ್ಜರಿ ಅವಕಾಶವನ್ನು ನೀಡಲು ಮುಂದಾಗಿದೆ. ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ವಿತ್ ಡ್ರಾ ಮಾಡಿಕೊಳ್ಳುವಂತೆಯೇ ನಿಮ್ಮ ಪಿಎಫ್ ಹಣವನ್ನು ತೆಗೆದುಕೊಳ್ಳಬಹುದಾಗಿದೆ. ಹೌದು ಈ ಹೊಸ ನಿಯಮವು ಇದೇ ತಿಂಗಳಿನಿಂದ ಜಾರಿಗೆ ಬರಲಿದೆ ಇದಕ್ಕೆ ಸಂಬಂಧಿಸಿದ ಇನ್ನಷ್ಟು ಅಪ್ಡೇಟ್ಸ್ ನೋಡೋಣ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ಹೊಸ ಅಪ್ಡೇಟ್ಸ್‌ನ ಪ್ರಕಾರ, ನಿಮ್ಮ ಇಪಿಎಫ್ ಹಣವನ್ನು ಹಿಂಪಡೆದುಕೊಳ್ಳುವ ವಿಧಾನವನ್ನು ಅತ್ಯಂತ ಸುಲಭವಾಗಿಸಲಾಗಿದೆ. ಅಲ್ಲದೇ ಎಟಿಎಂನಿಂದಲೇ ನೀವು ಹಣ ವಿತ್ ಡ್ರಾ ಮಾಡಿಕೊಳ್ಳಬಹುದು. ಮೊದಲೆಲ್ಲವೂ ನೀವು ಹಣವನ್ನು ಹಿಂಪಡೆಯಲು ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿತ್ತು. ಅದಾದ ಮೇಲೆ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತಿತ್ತು. ಬ್ಯಾಂಕ್ ಖಾತೆಯಿಂದ ನೀವು ಆ ನಂತರ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಇರುತ್ತಿತ್ತು. ಆದರೆ ಇದೀಗ ನೀವು ನೇರವಾಗಿ ಎಟಿಎಂನಿಂದಲೇ ಹಣ ವಿತ್ ಡ್ರಾ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಹಾಗಾದರೆ ಹಣ ವಿತ್ ಡ್ರಾ ಮಾಡುವುದು ಹೇಗೆ ಹಾಗೂ ಅದಕ್ಕೆ ಏನೆಲ್ಲಾ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ..

ಪಿಎಫ್ ವಿತ್ ಡ್ರಾಗೆ ಸಂಬಂಧಿಸಿದಂತೆ ಹೊಸ ಡಿಜಿಟಲ್ ಅಪ್ಡೇಟ್ಸ್ ಬಂದಿದ್ದು. ಇದರ ಪ್ರಕಾರ, ಇಪಿಎಫ್‌ಒ 3.0 ಮೂಲಕ ಹಲವು ಹೊಸ ಬದಲಾವಣೆಗಳು ಆಗುತ್ತಿವೆ. ಉದ್ಯೋಗಿಗಳು ಅತ್ಯಂತ ಸುಲಭವಾಗಿ ಹಣ ವಿತ್ ಡ್ರಾ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಹೊಸ ಬದಲಾವಣೆಗಳನ್ನು ಮಾಡಲಾಗುತ್ತಿದೆ. ನಿಮ್ಮ ಪಿಎಫ್ ಹಣವನ್ನು ನೀವು ಯುಪಿಐ ಅಥವಾ ಎಟಿಎಂ ನಿಂದಲೂ ಸುಲಭವಾಗಿ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ಈ ರೀತಿ ವಿತ್ ಡ್ರಾ ಮಾಡಿಕೊಳ್ಳುವಾಗ ನೀವು 1 ಲಕ್ಷ ರೂಪಾಯಿಯ ವರೆಗೆ ಹಣ ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ ಎಂದು ಡಿಡಿ ನ್ಯೂಸ್ ವರದಿ ಮಾಡಿದೆ.
ಇನ್ನು ಇಪಿಎಫ್ ಕ್ಲೈಮ್‌ನಲ್ಲೂ ಹಲವು ಹೊಸ ಬದಲಾವಣೆಗಳನ್ನು ಮಾಡಲಾಗಿದೆ. ಶೇ 95 ರಷ್ಟು ಕ್ಲೈಮ್‌ಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇನ್ನುಳಿದ ಶೇ 5ರಷ್ಟು ಕ್ಲೈಮ್‌ಗಳು ವಿಳಂಬವಾಗುತ್ತಿವೆ ಎಂದು ಹೇಳಲಾಗಿದೆ. ಇದು ಇದೇ ತಿಂಗಳಿನಿಂದ ಜಾರಿಯಾಗಲಿರುವುದರಿಂದ ಜನ ತಮ್ಮ ಪಿಎಫ್ ಹಣ ವಿತ್ ಡ್ರಾ ಮಾಡಿಕೊಳ್ಳುವುದಕ್ಕೆ ತಿಂಗಳು ಗಟ್ಟಲೆ ಕಾಯಬೇಕಾದ ತಾಪತ್ರಯ ತಪ್ಪಲಿದೆ ಅಂತಲೇ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಅಪ್ಡೇಟ್ ನಿರೀಕ್ಷೆ ಮಾಡಲಾಗಿದ್ದು. ಇದೇ ವಾರದಲ್ಲಿ ಇಪಿಎಫ್‌ಒ ಮಾಹಿತಿ ನೀಡುವ ಸಾಧ್ಯತೆ ಇದೆ.
ಪಿಎಫ್ ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವುದು ಮುಂದಿನ ದಿನಗಳಲ್ಲಿ ತುಂಬಾ ಸುಲಭವಾಗಲಿದೆ. ಮೊದಲಿಗಿಂತ ಈ ಪ್ರಕ್ರಿಯೆ ಸರಳೀಕರಣವಾಗಲಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications