ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಕೋಟಿಗೆ ಶೈಕ್ಷಣಿಕ ಸಂಸ್ಥೆ 'ವಿದ್ಯಾರ್ಥ' ಖರೀದಿಸಿದ 'ಬೈಜೂಸ್'

By Sachhidananda Acharya
|
Google Oneindia Kannada News

ಬೆಂಗಳೂರು, ಜನವರಿ 17: ಶೈಕ್ಷಣಿಕ ವಲಯದ ಭರಪೂರ ಉದ್ಯಮಕ್ಕೆ ಬೈಜುಸ್ ಮತ್ತು ವಿದ್ಯಾರ್ಥ ನಡುವಿನ ಖರೀದಿ ವ್ಯವಹಾರ ಸಾಕ್ಷಿಯಾಗಿದೆ. ಬೆಂಗಳೂರು ಮೂಲದ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ 'ವಿದ್ಯಾರ್ಥ' ಕಂಪೆನಿಯನ್ನು ಬರೋಬ್ಬರಿ 50 ಕೋಟಿ ನೀಡಿ 'ಬೈಜೂಸ್' ಖರೀದಿ ಮಾಡಿದೆ.

ವಿದ್ಯಾರ್ಥ, ತಂತ್ರಜ್ಞಾನ ಸ್ಟಾರ್ಟಪ್ ಆಗಿದ್ದು, ಕ್ಯಾರಿಯರ್ ಗೈಡೆನ್ಸ್ ಮತ್ತು ಅಕಾಡೆಮಿಕ್ ಪ್ರೊಫೈಲ್ ಬಿಲ್ಡಿಂಗ್ನಲ್ಲಿ ತೊಡಗಿಸಿಕೊಂಡಿದೆ.

Education tech startup Byju's acquires Bengaluru-based Vidyartha for Rs 50 crore: Report

ಆರ್ಥಿಕವಾಗಿ ಸದೃಢವಾಗಿರುವ ಬೈಜು ಇಲ್ಲಿವರೆಗೆ ಸುಮಾರು 1,000 ಕೋಟಿ ಹೂಡಿಕೆ ಪಡೆದಿದೆ. ಸದ್ಯ ಭಾರತದಲ್ಲಿ ಅತೀಹೆಚ್ಚು ಬಂಡವಾಳ ಹೊಂದಿರುವ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ ಬೈಜುಸ್ ಆಗಿದೆ. 2016 ಒಂದರಲ್ಲೇ ಇದರ ಸಂಸ್ಥಾಪಕ ಬೈಜು ರವೀಂದ್ರನ್ ಸುಮಾರು 950 ಕೋಟಿ ಬಂಡವಾಳವನ್ನು ವಿವಿಧ ಮೂಲಗಳಿಂದ ಪಡೆದಿದ್ದರು. ಇದರಲ್ಲಿ ಸೆಕ್ವಿಯಾ ಕ್ಯಾಪಿಟಲ್ ಮತ್ತು ಚಾನ್-ಝುಕರ್ ಬರ್ಗ್ ಸಂಸ್ಥೆಗಳು ಕ್ರಮವಾಗಿ 500 ಮತ್ತು 340 ಕೋಟಿಗಳನ್ನು ಹೂಡಿಕೆ ಮಾಡಿದ್ದವು. ಇದೇ ರೀತಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದು 100 ಕೋಟಿ ಬಂಡವಾಳ ಹೂಡಿತ್ತು.

ಸದ್ಯ ವಿದ್ಯಾರ್ಥಿಗಳ ಕಲಿಕೆಯ ವಿಧಾನಕ್ಕೆ ಅನುಗುಣವಾಗಿ ಮಾರ್ಗದರ್ಶನ ಮಾದರಿಯನ್ನು ಸೃಷ್ಟಿಸುವ ಕೆಲಸದಲ್ಲಿ 'ವಿದ್ಯಾರ್ಥ' ತೊಡಗಿಸಿಕೊಂಡಿದೆ. ಅದೇ ಬೈಜುಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದೆ. ಇದೀಗ ಒಂದೇ ಕ್ಷೇತ್ರದ ಎರಡು ಭಿನ್ನ ಆಯಾಮದ ಕಂಪೆನಿಗಳು ಒಟ್ಟಾಗಿವೆ.

2011ರಲ್ಲಿ ಪ್ರಿಯಾ ಮೋಹನ್ ವಿದ್ಯಾರ್ಥ ಸಂಸ್ಥೆಯನ್ನು ಆರಂಭಿಸಿದ್ದರು. ಸುಮಾರು 2,000 ಶಾಲೆಗಳ ಜತೆ ಈ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಮಾತ್ರವಲ್ಲ ಕೇಂದ್ರೀಯ ಸೆಕೆಂಡರಿ ಶಿಕ್ಷಣ ಮಂಡಳಿ ಇದೇ ಸಂಸ್ಥೆಗೆ ಆಪ್ಟಿಟ್ಯೂಡ್ ಪರೀಕ್ಷೆಗಳನ್ನು ನಡೆಸಲು ಮಾನ್ಯತೆಯನ್ನೂ ನೀಡಿತ್ತು.

ಸದ್ಯ ಈ ಡೀಲಿನ ನಂತರ ವಿದ್ಯಾರ್ಥದ 20 ಜನ ಸಿಬ್ಬಂದಿಗಳು ಬೇರೆ ಬ್ರ್ಯಾಂಡ್ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ. ಹಳೆಯ ವಿದ್ಯಾರ್ಥ, ಬೈಜೂಸ್ ಪಾಲಾಗಲಿದೆ

English summary
Education tech startup Byju's acquires Bengaluru-based Vidyartha for Rs 50 crore, report says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X