ಇಡಿಯಿಂದ ಜಾಯ್ ಅಲುಕಾಸ್‌ಗೆ ಸೇರಿದ ₹305 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಜಾಯ್ ಆಲುಕಾಸ್ ಆಭರಣ ಕಂಪೆನಿಯು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಜಾರಿ ನಿರ್ದೇಶನಾಲ ಆರೋಪಿಸಿದೆ.
ತಿರುವನಂತಪುರಂ, ಫೆಬ್ರವರಿ 25: ಜಾರಿ ನಿರ್ದೇಶನಾಲಯವು ಜನಪ್ರಿಯ ಆಭರಣ ಕಂಪೆನಿ ಜಾಯ್ ಆಲುಕಾಸ್‌ನ ಐದು ಕಚೇರಿಗಳ ಮೇಲೆ ದಾಳಿ ನಡೆಸಿದ ಎರಡು ದಿನಗಳ ನಂತರ ಅದರ ₹ 305.84 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಜಾಯ್ ಆಲುಕಾಸ್ ಆಭರಣ ಕಂಪೆನಿಯು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಜಾರಿ ನಿರ್ದೇಶನಾಲ ಆರೋಪಿಸಿದೆ.

ಜಾಯ್ ಆಲುಕಾಸ್‌ನ ಮುಖ್ಯಸ್ಥ ಜಾಯ್ ಆಲುಕಾಸ್ ವರ್ಗೀಸ್ ಹವಾಲಾ ಮಾರ್ಗದ ಮೂಲಕ ಭಾರತದಿಂದ ದುಬೈಗೆ ಭಾರಿ ಮೊತ್ತದ ಹಣವನ್ನು ವರ್ಗಾಯಿಸಿದ್ದಾರೆ. ಅಲ್ಲದೆ ದುಬೈನ ಜಾಯ್ ಆಲುಕಾಸ್ ಜ್ಯುವೆಲ್ಲರಿ ಎಲ್‌ಎಲ್‌ಸಿಯಲ್ಲಿ ಹೂಡಿಕೆ ಮಾಡಿದೆ ಎಂದು ಇಡಿ ತಿಳಿಸಿದೆ. ಕಂಪೆನಿ ಜಾಯ್ ಅಲುಕಾಸ್ ವರ್ಗೀಸ್ ಅವರ 100 ಪ್ರತಿಶತ ಒಡೆತನದಲ್ಲಿದೆ. ಮಂಗಳವಾರವಷ್ಟೇ ಜಾಯ್ ಆಲುಕಾಸ್ ಕಂಪನಿಯು ತನ್ನ ₹ 2,300 ಕೋಟಿ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಐಪಿಒ ಅನ್ನು ಹಿಂತೆಗೆದುಕೊಂಡಿತ್ತು.
ತ್ರಿಶೂರ್‌ನ ಶೋಭಾ ನಗರದಲ್ಲಿ ನಿವೇಶನ ಮತ್ತು ವಸತಿ ಕಟ್ಟಡ ಒಳಗೊಂಡ ₹ 81.54 ಕೋಟಿ ಮೌಲ್ಯದ 33 ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.ಅಲ್ಲದೆ ₹ 91.22 ಲಕ್ಷ ಮೌಲ್ಯದ ಮೂರು ಬ್ಯಾಂಕ್ ಖಾತೆಗಳು, ₹ 5.58 ಕೋಟಿ ಮೊತ್ತದ ಮೂರು ಸ್ಥಿರ ಠೇವಣಿಗಳು ಮತ್ತು 217.81 ಕೋಟಿ ಮೌಲ್ಯದ ಜೋಯಾಲುಕ್ಕಾಸ್ ಷೇರುಗಳನ್ನು ಸಹ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಕಂಪನಿಯು ತನ್ನ ಐಪಿಒ ದಾಖಲೆಗಳನ್ನು ಬೇಗನೆ, ಮಾರುಕಟ್ಟೆಯ ಪರಿಸ್ಥಿತಿಗಳಿಗೆ ಒಳಪಟ್ಟು ರಿಫೈಲ್ ಮಾಡಲು ಯೋಜಿಸಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಬೇಬಿ ಜಾರ್ಜ್ ಮಂಗಳವಾರ ರಾಯಿಟರ್ಸ್‌ಗೆ ಹೆಚ್ಚಿನ ವಿವರಗಳನ್ನು ನೀಡದೆ ಹೇಳಿದ್ದಾರೆ. ಮಾರುಕಟ್ಟೆಯ ಚಂಚಲತೆ ಮತ್ತು ಹೆಚ್ಚಿನ ಹಣದುಬ್ಬರದ ನಡುವೆ ತನ್ನ ಐಪಿಒ ಯೋಜನೆಗಳನ್ನು ವಿಳಂಬಗೊಳಿಸಿದ ಕಂಪೆನಿಗಳಲ್ಲಿ ಜಾಯ್ ಆಲುಕಾಸ್ ಇತ್ತೀಚಿನದು. ಕಂಪನಿಯು ಸರಿಸುಮಾರು 68 ನಗರಗಳಲ್ಲಿ ಶೋರೂಂಗಳನ್ನು ಹೊಂದಿದೆ.












Click it and Unblock the Notifications