ಫ್ಲಿಪ್ ಕಾರ್ಟಿಗೆ ಸಾವಿರ ಕೋಟಿ ದಂಡ! ಸುಳ್ಳೇ ಸುಳ್ಳು
ಬೆಂಗಳೂರು, ಅ.15: 'ಬಿಗ್ ಬಿಲಿಯನ್ ಡೇ' ಮೂಲಕ ಇ-ಕಾಮರ್ಸ್ ಮಾರುಕಟ್ಟೆಯಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಸಂಸ್ಥೆ ಸಾವಿರ ಕೋಟಿ ರು ದಂಡ ಕಟ್ಟುವ ಭೀತಿ ಎದುರಿಸುತ್ತಿದೆ. ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ನಡೆಸುತ್ತಿದೆ ಎಂಬ ಸುದ್ದಿ ಸುಳ್ಳಾಗಿದೆ. ಈ ರೀತಿ ಯಾವುದೇ ತನಿಖೆಗೆ ಇಡಿ ಮುಂದಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 6 ರಂದು ಫ್ಲಿಫ್ ಕಾರ್ಟ್ ನ ಬಿಗ್ ಬಿಲಿಯನ್ ಡೇಗೆ ಗ್ರಾಹಕರು ನೀಡಿದ ಉತ್ತಮ ಪ್ರತಿಕ್ರಿಯೆಯಿಂದಾಗಿ ಒಂದೇ ದಿನದಲ್ಲಿ ಸುಮಾರು 600 ಕೋಟಿ ರು ಬಾಚಿಕೊಂಡಿದ್ದ ಫ್ಲಿಫ್ ಕಾರ್ಟ್ ಸಂಸ್ಥೆ ವಿರುದ್ಧ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ನಿಯಮಗಳನ್ನು ಉಲ್ಲಂಘಿಸಿದ ಆರೋಪವಿದೆ ಹೀಗಾಗಿ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿ, ತನಿಖೆ ಕೈಗೊಂಡಿದೆ ಎಂದು ಸುದ್ದಿ ಹಬ್ಬಿತ್ತು. [ಫ್ಲಿಪ್ ಕಾರ್ಟ್ 'ಬಿಗ್ ಡೇ' ಆವತ್ತು ಆಗಿದ್ದೇನು?]

ಅದರೆ, ಬಿಗ್ ಬಿಲಿಯನ್ ಡೇ ಕುರಿತಂತೆ ಇಡಿ ಯಾವುದೇ ತನಿಖೆ ನಡೆಸುತ್ತಿಲ್ಲ, ವಿದೇಶಿ ವಿನಿಮಯ ವ್ಯವಹಾರ ಕಾಯ್ದೆ(FEMA) ಉಲ್ಲಂಘನೆ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಮಾಧ್ಯಮಗಳ ವರದಿಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ['ಬಿಲಿಯನ್ ಡೆ' ಗೆ ಅದ್ಭುತ ಪ್ರತಿಕ್ರಿಯೆ]
ಈ ಬಗ್ಗೆ ಪ್ರತಿಕ್ರಿಯಿಸಿರುವ ಫ್ಲಿಪ್ ಕಾರ್ಟ್ ವಕ್ತಾರರು, ಬಿಗ್ ಬಿಲಿಯನ್ ಡೇ ದಿನ ಆದ ಗೊಂದಲಕ್ಕೆ ಈಗಾಗಲೇ ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದೇವೆ. ಫೇಮಾ ಕಾಯ್ದೆ ಉಲ್ಲಂಘನೆ, ಎಫ್ ಡಿಎ ನಿಯಮ ಮೀರಿರುವ ಬಗ್ಗೆ ನಮಗೆ ಗೊತ್ತಿಲ್ಲ. ಈ ನೆಲದ ಕಾನೂನಿಗೆ ತಕ್ಕಂತೆ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ಯಾವಾಗ ಬೇಕಾದರೂ ಸಂಸ್ಥೆ ತನಿಖೆಗೆ ಒಳಪಡಲು ಸಿದ್ದ ಎಂದಿದ್ದಾರೆ.
ಈಗಿರುವ ಎಫ್ ಡಿಐ ನಿಯಮದ ಪ್ರಕಾರ ದೇಶಿ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಎಫ್ ಡಿಐಗೆ ಅನುಮತಿ ಸಿಕ್ಕಿಲ್ಲ. ಬಿಸಿನೆಸ್ ಟು ಕನ್ಸೂಮರ್(B2C) ಸಾಧ್ಯವಿಲ್ಲ. ಅದರೆ, ಬಿಸಿನೆಸ್ ಟು ಬಿಸಿನೆಸ್ (B2B) ಮಾಡಲು ಅನುಮತಿ ಇದೆ. (ಪಿಟಿಐ)












Click it and Unblock the Notifications