ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಇ-ಬಸ್‌ಗಳಿಗೆ ಭಾರೀ ಬೇಡಿಕೆ- ಕರ್ನಾಟಕದಲ್ಲಿ ಮಾರಾಟವಾಗಿದ್ದೆಷ್ಟು? ತಯಾರಕರು ಯಾರು? ಮಾಹಿತಿ ಪಡೆಯಿರಿ

ಒಟ್ಟು 1,054,938 ವಾಹನಗಳು ಮಾರಾಟವಾಗುವುದರೊಂದಿಗೆ, ಭಾರತದ ಎಲೆಕ್ಟ್ರಿಕ್ ವಾಹನ ಉದ್ಯಮವು ಎಲ್ಲಾ ವಿಭಾಗಗಳಲ್ಲಿ ದಾಖಲೆಯ ಮಾರಾಟವನ್ನು ಸಾಧಿಸಿದೆ. ಕರ್ನಾಟಕದಲ್ಲಿ ಮಾರಾಟವಾಗಿದ್ದೆಷ್ಟು? ತಯಾರಕರು ಯಾರು? ಮಾಹಿತಿ ಪಡೆಯಿರಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 02: ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ. 2022 ರಲ್ಲಿ Ev ರಿಪೋರ್ಟರ್ ನಡೆಸಿದ ಅಧ್ಯಯನದ ಪ್ರಕಾರ, ಏಷ್ಯನ್ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಮೊದಲ ಬಾರಿಗೆ ಒಂದು ಮಿಲಿಯನ್ ಯುನಿಟ್‌ಗಳನ್ನು ಮೀರಿದೆ. 1,054,938 ಅನ್ನು ತಲುಪಿದೆ. 2021 ರಲ್ಲಿ ದಾಖಲಾದ ಮಾರಾಟವನ್ನು ಪರಿಣಾಮಕಾರಿಯಾಗಿ ಮೂರು ಪಟ್ಟು ಹೆಚ್ಚಿಸಿದೆ. ಅಂದರೆ, 3,44,495 ಹೆಚ್ಚಿನ ಎಲೆಕ್ಟ್ರಿಕ್‌ ವಾಹನಗಳು ಮಾರಾಟವಾಗಿದೆ.

ಡಿಸೇಲ್‌ ಬಸ್‌ ಜಾಗದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು: ಭಾರೀ ಬದಲಾವಣೆಗೆ ಮುಂದಾದ ಬಿಎಂಟಿಸಿ- ಎಷ್ಟು ಬಸ್‌? ಎಷ್ಟು ಹಣ? ಯಾವ ಕಂಪನಿ?ಡಿಸೇಲ್‌ ಬಸ್‌ ಜಾಗದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು: ಭಾರೀ ಬದಲಾವಣೆಗೆ ಮುಂದಾದ ಬಿಎಂಟಿಸಿ- ಎಷ್ಟು ಬಸ್‌? ಎಷ್ಟು ಹಣ? ಯಾವ ಕಂಪನಿ?

 ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮ

ಒಟ್ಟು 1,054,938 ವಾಹನಗಳು ಮಾರಾಟವಾಗುವುದರೊಂದಿಗೆ, ಭಾರತದ ಎಲೆಕ್ಟ್ರಿಕ್ ವಾಹನ ಉದ್ಯಮವು ಎಲ್ಲಾ ವಿಭಾಗಗಳಲ್ಲಿ ದಾಖಲೆಯ ಮಾರಾಟವನ್ನು ಸಾಧಿಸಿದೆ. ಇದು ಒಟ್ಟು ಆಟೋಮೊಬೈಲ್ ಮಾರಾಟದ 4.7 ಪ್ರತಿಶತವನ್ನು ಹೊಂದಿದೆ. ಹೈ-ಸ್ಪೀಡ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಹ 2022 ರಲ್ಲಿ 669,845 ಯುನಿಟ್‌ಗಳ ಮಾರಾಟವನ್ನು ಹೊಂದಿದ್ದವು. 2022 ರಲ್ಲಿ ಒಟ್ಟು 41,675 ಯೂನಿಟ್ ಎಲೆಕ್ಟ್ರಿಕ್ ನಾಲ್ಕು-ಚಕ್ರ ವಾಹನಗಳು ಮಾರಾಟವಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 178ರಷ್ಟು ಹೆಚ್ಚಾಗಿದೆ.

 ಭಾರತದಲ್ಲಿ ಇ-ಬಸ್‌ಗಳ ಬೆಳವಣಿಗೆ

ಭಾರತದಲ್ಲಿ ಇ-ಬಸ್‌ಗಳ ಬೆಳವಣಿಗೆ

ಎಲೆಕ್ಟ್ರಿಕ್ ಬಸ್ ಮಾರಾಟಕ್ಕೆ ಸಂಬಂಧಿಸಿದಂತೆ, 2021ನೇ ವರ್ಷದಲ್ಲಿ 1,171 ಯುನಿಟ್‌ಗಳಿಗೆ ಹೋಲಿಸಿದರೆ 2022 ರಲ್ಲಿ 1,939 ಯುನಿಟ್‌ಗಳು ಮಾರಾಟವಾಗಿವೆ. ಇದು ಭಾರತದಲ್ಲಿ ಮಾರಾಟವಾದ ಒಟ್ಟು ಎಲೆಕ್ಟ್ರಿಕ್ ವಾಹನಗಳ ಶೇಕಡಾ 0.2 ರಷ್ಟಿದೆ. ಎಲ್ಲಾ ಮೂರು ಪ್ರಮುಖ ಎಲೆಕ್ಟ್ರಿಕ್ ವಾಹನಗಳ ಮಾರಾಟವಾಗಿರುವ ರಾಜ್ಯಗಳನ್ನು ತೆಗೆದುಕೊಂಡರೆ, ಇತರ ವಾಹನ ವಿಭಾಗಗಳಿಗಿಂತ ಬಸ್ ವಿಭಾಗವು ಗಣನೀಯವಾಗಿ ಏರಿಕೆ ಕಂಡಿದೆ. ಉತ್ತರ ಪ್ರದೇಶದಲ್ಲಿ ಶೇ 15, ಕರ್ನಾಟಕದಲ್ಲಿ ಶೇ 12 ಮತ್ತು ಮಹಾರಾಷ್ಟ್ರದಲ್ಲಿ ಶೇ 8 ರಷ್ಟು ವ್ಯಾಪಿಸಿದೆ.

 ಭಾರತದಲ್ಲಿನ ಪ್ರಮುಖ ಎಲೆಕ್ಟ್ರಿಕ್ ಬಸ್ ತಯಾರಕರು

ಭಾರತದಲ್ಲಿನ ಪ್ರಮುಖ ಎಲೆಕ್ಟ್ರಿಕ್ ಬಸ್ ತಯಾರಕರು

1. OlectraK9 Electric Bus by Olectra Greentech
2. BYD K9 by BYD Company Limited
3. Tata Ultra 9/9 Electric AC Bus by Tata Motors
4. Ashok Leyland Versa EV Electric Bus
5. JBM Ecolife Electric Bus by JBM Motors
6. SkyPark Electric Bus by Deccan Auto Limited
7. Eichers Skyline Pro by Eichers Motor Limited
8. Solaris Urbino 15 LE Electric Bus by Solaris Bus & Coach SA
9. Zhongtong Electric Bus LCK6122EVG by Zhongtong Bus and Holding Company Limited
10. PMI - Photon Regio and Urban Electric Buses

 ಕರ್ನಾಟಕದಲ್ಲಿ ಇ ಬಸ್‌ಗಳು ಸಂಚಾರ

ಕರ್ನಾಟಕದಲ್ಲಿ ಇ ಬಸ್‌ಗಳು ಸಂಚಾರ

ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ಇ ಬಸ್‌ಗಳು ಸಂಚಾರ ನಡೆಸುತ್ತಿವೆ. ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗಕ್ಕೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಚಾರ್ಜಿಂಗ್ ಸ್ಟೇಷನ್‌ಗಳು ಜಾರಿಯಲ್ಲಿವೆ ಮತ್ತು ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 75 ಎಲೆಕ್ಟ್ರಿಕ್ ಬಸ್‌ಗಳಿಗೆ ಕಳೆದ ವರ್ಷದ ಆಗಷ್ಟನಲ್ಲಿ ಚಾಲನೆ ನೀಡಿದರು. ಈ ಬಸ್‌ಗಳು ಕೇಂದ್ರದ FAME-II ಯೋಜನೆಯ ಭಾಗವಾಗಿದ್ದು, ಬೆಂಗಳೂರಿನಲ್ಲಿ ಒಟ್ಟು 300 ಎಲೆಕ್ಟ್ರಿಕ್ ಬಸ್‌ಗಳನ್ನು ಒಟ್ಟು ವೆಚ್ಚದ ಒಪ್ಪಂದದ ಮಾದರಿಯಲ್ಲಿ ನಿರ್ವಹಿಸಲಾಗುತ್ತದೆ. ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ ಈ ಬಸ್‌ಗಳನ್ನು ತಯಾರಿಸಿದೆ.

English summary
With a total of 1,054,938 vehicles sold, India's electric vehicle industry achieved record sales across all segments
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X