ಮಲ್ಯ ಬಾಯಿ ಸೇರಬೇಕಿದ್ದ ತುತ್ತಿಗೆ ನ್ಯಾಯಾಧೀಕರಣ ತಡೆ

Subscribe to Oneindia Kannada

ಬೆಂಗಳೂರು, ಮಾರ್ಚ್, 07: ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ಮುಖ್ಯಸ್ಥ ಹುದ್ದೆಯಿಂದ ನಿರ್ಗಮಿಸಿದ್ದಕ್ಕಾಗಿ ಬ್ರಿಟನ್ ನ ಡೈಜಿಯೋ ಕಂಪನಿಯಿಂದ ವಿಜಯ್ ಮಲ್ಯಗೆ ನೀಡಬೇಕಿದ್ದ 515 ಕೋಟಿ ರು. ಮಲ್ಯ ಕೈ ಸೇರುತ್ತಿಲ್ಲ.

515 ಕೋಟಿ ರು. ತಾತ್ಕಾಲಿಕ ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣ ಆದೇಶ ನೀಡಿದೆ. ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳಲ್ಲಿ ಒಂದನ್ನು ಮಾತ್ರ ವಿಚಾರಣೆ ನಡೆಸಿ ಆದೇಶ ಹೊರಡಿಸಲಾಗಿದೆ.[ಸಾಲ ಮಾಡಿ ತುಪ್ಪ ತಿಂದ ಮಲ್ಯಗೆ ಬಂಧನ ಭೀತಿ]

vijay mallya


7800 ಕೋಟಿ ಸಾಲ ಮಾಡಿಕೊಂಡಿದ್ದ ಮಲ್ಯ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಬ್ಯಾಂಕ್ ಗಳು ಕರೆದಿದ್ದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ 17 ಬ್ಯಾಂಕ್ ಗಳು ತಮಗೆ ಬರಬೇಕಿದ್ದ ಹಣದ ಸಂಬಂಧ ಸಾಲ ವಸೂಲಾತಿ ನ್ಯಾಯಾಧೀಕರಣಕ್ಕೆ ಮನವಿ ಸಲ್ಲಿಕೆ ಮಾಡಿದ್ದರು. ಅದರಲ್ಲಿ ಒಂದು ಅರ್ಜಿಯನ್ನು ನ್ಯಾಯಾಧೀಕರಣ ಸೋಮವಾರ ವಿಚಾರಣೆ ನಡೆಸಿ ಹಣ ಮಲ್ಯ ಕೈ ಸೇರುವುದಿಲ್ಲ ಎಂದು ತಡೆ ಆದೇಶ ನೀಡಿದೆ.

ವಿದೇಶಕ್ಕೆ ಹಾರುತ್ತೇನೆ ಎಂದು ಹೇಳಿದ್ದ ಮಲ್ಯ ಅವರ ವೀಸಾ ಮತ್ತು ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರನ್ನು ಬಂಧಿಸಬೇಕು ಎಂದು ಬ್ಯಾಂಕ್ ಗಳು ಮನವಿ ಸಲ್ಲಿಕೆ ಮಾಡಿದ್ದವು. ಮುಂದಿನ ವಿಚಾರಣೆ ಮಾರ್ಚ್ 28 ಕ್ಕೆ ನಡೆಯಲಿದೆ.[ತಲೆಮರೆಸಿಕೊಳ್ಳಬೇಕಾದ ದರ್ದು ನನಗಿಲ್ಲ ಎಂದ ಮಲ್ಯ]

ನ್ಯಾಯಾಲಯಕ್ಕೆ ಸೇರುವ ಹಣ
ವಿಜಯ್ ಮಲ್ಯಗೆ ಸಂದಾಯವಾಗಬೇಕಿದ್ದ ಹಣ ಇದೀಗ ನ್ಯಾಯಾಧೀಕರಣದ ಪಾಲಾಗುತ್ತಿದೆ. ಸಾಲ ನೀಡಿದ ಬ್ಯಾಂಕ್ ಗಳಿಗೂ ಸಹ ಸದ್ಯ ಬ್ರಿಟನ್ ನ ಡೈಜಿಯೋ ನೀಡುವ ಹಣದ ಮೇಲೆ ಹಕ್ಕು ಬರುವುದಿಲ್ಲ. ಮಲ್ಯ ಮತ್ತು ಅವರ ಸಂಸ್ಥೆಯ ಕೆಲ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಲಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Debt Recovery Tribunal in an interim order on Monday, March 7 ruled that Diageo cannot disburse 75 million US dollars or Rs 500 crore to Vijay Mallya. While hearing a batch of petitions on Monday, March 7 the DRT ruled that the money shall not be disbursed until the disposal of the case. The case has been posted to March 28th for hearing next. The tribunal was hearing a batch of petitions filed by State Bank of India and others which had sought a directive that the Rs 500 crore be given to them since Mallya had debts.
Please Wait while comments are loading...