ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡು ಭಾರತೀಯರೆಷ್ಟು ಗೊತ್ತಾ?

|
Google Oneindia Kannada News

ಬೆಂಗಳೂರು, ಜನವರಿ 25: ಭಾರತೀಯ ಉದ್ಯೋಗಿಗಳ ಬೇಡಿಕೆಯ ತಾಣವಾದ ಅಮೆರಿಕಾದಲ್ಲಿ ಇತ್ತಿಚೆಗೆ ಹಲವಾರು ದೈತ್ಯ ಕಂಪೆನಿಗಳು ಸಾಮೂಹಿಕವಾಗಿ ವಜಾಗಳನ್ನು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯ ಐಟಿ ವೃತ್ತಿಪರರ ಗೋಳು ಈಗ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರ ಸಂಖ್ಯೆ ಸ್ಥಿತಿಗತಿ ಇಂತಿದೆ.

ಕಳೆದ ನವೆಂಬರ್‌ನಿಂದ ಆರಂಭಗೊಂಡ ಐಟಿ ನೌಕರರ ವಜಾಗಳು ಸರಣಿಯಾಗಿ ಮುಂದುವರೆದಿವೆ. ಜಾಗತಿಕವಾಗಿ ಎಲ್ಲಾ ಉನ್ನತ ತಂತ್ರಜ್ಞಾನ ಕಂಪನಿಗಳ ವಜಾ ಘೋಷಣೆಗಳ ಸರಣಿಯೊಂದಿಗೆ ಯುಎಸ್‌ನಲ್ಲಿ 60,000ದಿಂದ 80,000 ಭಾರತೀಯ ಐಟಿ ವೃತ್ತಿಪರರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಫೋರ್ಡ್ ಮೋಟಾರ್ಸ್‌ನಿಂದ 3,200 ಉದ್ಯೋಗಿಗಳ ವಜಾಫೋರ್ಡ್ ಮೋಟಾರ್ಸ್‌ನಿಂದ 3,200 ಉದ್ಯೋಗಿಗಳ ವಜಾ

ಅವರಲ್ಲಿ ಹೆಚ್ಚಿನವರು ಎಚ್‌-1ಬಿ ಮತ್ತು ಎಲ್‌1 ವೀಸಾಗಳಲ್ಲಿದ್ದಾರೆ ಅಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸು ಬಂದಿದೆ. ಅವರು ಈಗ 60 ದಿನಗಳಲ್ಲಿ ಮತ್ತೊಂದು ಉದ್ಯೋಗವನ್ನು ಹುಡುಕಬೇಕಾಗುತ್ತದೆ. ಇಲ್ಲವೆ ಅಲ್ಲಿಂದ ಜಾಗ ಖಾಲಿ ಮಾಡಬೇಕಾಗುತ್ತದೆ. ಮೈಕ್ರೋಸಾಫ್ಟ್, ಮೆಟಾ, ಅಮೆಜಾನ್ ಮತ್ತು ಆಲ್ಫಾಬೆಟ್ ಒಟ್ಟಾಗಿ ಬರೋಬ್ಬರಿ 51,000 ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಬರೆದಿದೆ.

Layoffs.fyi ಪ್ರಕಾರ, ಇದುವರೆಗೆ 3,12,600 ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಸಾರ್ವಜನಿಕ ವರದಿಗಳಿಂದ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ವಿವಿಧೆಡೆ ವಜಾಗೊಳಿಸುವಿಕೆಯನ್ನು ಟ್ರ್ಯಾಕ್ ಮಾಡುತ್ತದೆ. 2023ರಲ್ಲಿ ಮಾತ್ರ 174 ಟೆಕ್ ಕಂಪನಿಗಳು 56,570 ಉದ್ಯೋಗಿಗಳನ್ನು ವಜಾಗೊಳಿಸಿವೆ. ಅನೇಕ ಭಾರತೀಯರು ತಮ್ಮ ಉದ್ಯೋಗ ಕಳೆದುಕೊಂಡ ಕಥೆಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬರೆದುಕೊಂಡಿದ್ದಾರೆ.

10 ತಿಂಗಳ ಹಿಂದೆ ಗೂಗಲ್‌ಗೆ ಸೇರಿದ್ದರು

10 ತಿಂಗಳ ಹಿಂದೆ ಗೂಗಲ್‌ಗೆ ಸೇರಿದ್ದರು

ಗೂಗಲ್ ಉದ್ಯೋಗಿಗಳಲ್ಲಿ ಒಬ್ಬರಾದ ಮೋನಾಂಬಿಕಾ ಎಂ. ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಅವರು ಎಚ್‌-1ಬಿ ವೀಸಾದಲ್ಲಿ ವಲಸಿಗರಾಗಿರುವುದರಿಂದ ಸಮಯವನ್ನು ತೆಗೆದುಕೊಳ್ಳುವ ಅವಕಾಶವನ್ನು ನೀಡುವುದಿಲ್ಲ ಎಂದು ಹೇಳಿದರು. ಆಕೆ ಕೇವಲ 10 ತಿಂಗಳ ಹಿಂದೆ ಗೂಗಲ್‌ಗೆ ಸೇರಿದ್ದರು. ಮತ್ತೊಬ್ಬರು ಕುನಾಲ್ ಕುಮಾರ್ ಗುಪ್ತಾ ಅವರಿಗೆ ಮೂರು ವರ್ಷ ಮತ್ತು ಆರು ತಿಂಗಳ ಕಾಲ ಗೂಗಲ್‌ನೊಂದಿಗೆ ಕೆಲಸ ಮಾಡಿದ ನಂತರ ವಜಾಗೊಳಿಸಿದ ಮೇಲ್ ಬಂದಿದೆ.

ಕೆಲಸ ಹುಡುಕಲು ಸಹಾಯದ ಅಗತ್ಯ

ಕೆಲಸ ಹುಡುಕಲು ಸಹಾಯದ ಅಗತ್ಯ

ನಾನು ತಕ್ಷಣ ಕೆಲಸಕ್ಕೆ ಸೇರಲು ಸಿದ್ದಳಿದ್ದೇನೆ. ನಾನು ಎಚ್‌-1ಬಿ ವೀಸಾದಲ್ಲಿರುವುದರಿಂದ ಕೆಲಸವನ್ನು ಹುಡುಕಲು ತಕ್ಷಣದ ಸಹಾಯದ ಅಗತ್ಯವಿದೆ. ಎಚ್‌-1ಬಿ ವೀಸಾ ನನಗೆ ಕೆಲಸ ಹುಡುಕಲು 60 ದಿನಗಳನ್ನು ನೀಡುತ್ತದೆ ಎಂದು ಗುಪ್ತಾ ಹೇಳಿದರು. ಏತನ್ಮಧ್ಯೆ, ಸ್ವೀಡಿಷ್ ಮ್ಯೂಸಿಕ್ ಸ್ಟ್ರೀಮಿಂಗ್ ಸಂಸ್ಥೆ ಸ್ಪಾಟಿಫೈ ಸೋಮವಾರ ತನ್ನ ಉದ್ಯೋಗಿ ಸಂಖ್ಯೆಯನ್ನು 6% ಅಥವಾ ಸುಮಾರು 600 ಉದ್ಯೋಗಿಗಳಿಂದ ಕಡಿಮೆಗೊಳಿಸುವುದಾಗಿ ಎಂದು ಘೋಷಿಸಿತು.

ದಕ್ಷತೆ ಸುಧಾರಿಸುವಲ್ಲಿ ಗಮನ

ದಕ್ಷತೆ ಸುಧಾರಿಸುವಲ್ಲಿ ಗಮನ

ಸಿಇಒ ಡೇನಿಯಲ್ ಏಕ್ ಉದ್ಯೋಗಿಗಳಿಗೆ ನೀಡಿದ ಟಿಪ್ಪಣಿಯಲ್ಲಿ "ಕಳೆದ ಕೆಲವು ವರ್ಷಗಳಲ್ಲಿ ನಾವು ವ್ಯವಹಾರದ ವೇಗವನ್ನು ಸುಧಾರಿಸುವಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದರೂ, ದಕ್ಷತೆಯನ್ನು ಸುಧಾರಿಸುವಲ್ಲಿ ನಾವು ಹೆಚ್ಚು ಗಮನಹರಿಸಿಲ್ಲ. ಸವಾಲಿನ ಆರ್ಥಿಕ ವಾತಾವರಣದಲ್ಲಿ ದಕ್ಷತೆಯು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಆದ್ದರಿಂದ ಹೆಚ್ಚಿನ ದಕ್ಷತೆಯನ್ನು ಸುಧಾರಿಸಲು ವೆಚ್ಚಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ನಮ್ಮ ಸಂಸ್ಥೆಯನ್ನು ಪುನರ್‌ ರಚಿಸಲು ನಾನು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಬೇಡಿಕೆಯ ಕೌಶಲ್ಯಗಳಿಗೆ ಹುಡುಕಾಟ

ಬೇಡಿಕೆಯ ಕೌಶಲ್ಯಗಳಿಗೆ ಹುಡುಕಾಟ

ಮಾನವ ಸಂಪನ್ಮೂಲ ತಜ್ಞರ ಪ್ರಕಾರ, ಅಮೇರಿಕಾದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಭಾರತದಲ್ಲಿ ಉದ್ಯೋಗ ಹುಡುಕುವುದು ಕಷ್ಟವೇನಲ್ಲ. ಕ್ವೆಸ್ ಐಟಿ ಸ್ಟಾಫಿಂಗ್‌ನ ಸಿಇಒ ವಿಜಯ್ ಶಿವರಾಮ್, ಟೆಕ್ ಮತ್ತು ನಾನ್ ಟೆಕ್ ಕಂಪನಿಗಳಾದ್ಯಂತ ಐಟಿ ವೃತ್ತಿಪರರಿಗೆ ಅದರ ಪೂರ್ವ ಸಾಂಕ್ರಾಮಿಕ ಮಟ್ಟಕ್ಕೆ ಮರಳುವ ಉದ್ದೇಶವನ್ನು ನಿರೀಕ್ಷಿಸುತ್ತಾರೆ. ಫುಲ್ ಸ್ಟಾಕ್ ಎಂಜಿನಿಯರ್‌ಗಳು, ಡೇಟಾ ವಿಶ್ಲೇಷಕರು ಮತ್ತು ವಿಜ್ಞಾನಿಗಳು, ಡೆವೊಪ್ಸ್ ತಜ್ಞರು ಮತ್ತು ಕ್ಲೌಡ್ ಎಂಜಿನಿಯರ್‌ಗಳಂತಹ ಬೇಡಿಕೆಯ ಕೌಶಲ್ಯಗಳನ್ನು ಹುಡುಕಲಾಗುತ್ತದೆ ಎಂದು ಅವರು ಹೇಳಿದರು.

English summary
Reports say that 60,000 to 80,000 Indian IT professionals in the US have lost their jobs with a series of layoff announcements by all top technology companies globally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X