ಭಾರತದಲ್ಲಿ ಮತ್ತೊಂದು ಚೀನಾ ಸ್ಮಾರ್ಟ್ ಫೋನ್ 'ಬ್ಯಾನ್'

ನವದೆಹಲಿ, ಡಿ.17: ಚೀನಾ ಮೂಲದ ಶಿಯೋಮಿ ರೆಡ್ಮಿ ಮೊಬೈಲ್ ಹ್ಯಾಂಡ್ ಸೆಟ್ ಮಾರಾಟ ನಿಷೇಧದ ನಂತರ ಒನ್ ಪ್ಲಸ್ ಒನ್ ಮೊಬೈಲ್ ಮಾರಾಟಕ್ಕೆ ಕುತ್ತುಂಟಾಗಿದೆ. ಗುರ್ ಗಾಂವ್ ಮೂಲದ ಮೈಕ್ರೋ ಮ್ಯಾಕ್ಸ್ ಸಂಸ್ಥೆ ಮನವಿ ಮೇರೆಗೆ ಶೆನ್ ಝೆನ್ ಕಂಪನಿಯ ಒನ್ ಪ್ಲಸ್ ಮಾರಾಟಕ್ಕೆ ನಿರ್ಬಂಧ ಹೇರಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಡಿ.18ರಂದು ಮೈಕ್ರೋ ಮ್ಯಾಕ್ಸ್ ತನ್ನ ಹೊಚ್ಚ ಹೊಸ ಉತ್ಪನ್ನವಾದ ವೈಯು ಸೈನೊಜೆನ್(Cyanogen) ಫೋನ್ ಮಾರುಕಟ್ಟೆಗೆ ಬಿಡುತ್ತಿದೆ.ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಇದೇ ಸೈನೋಜೆನ್ ಒಸ್ ಹೊಂದಿರುವ ಚೀನಾ ಮೂಲದ ಶೆನ್ ಝೆನ್ ಒನ್ ಪ್ಲಸ್ ಟೆಕ್ನಾಲಜಿ ಕೊ. ಲಿ ಸಂಸ್ಥೆಯ ಮೊಬೈಲ್ ಫೋನ್ ಗಳಿದ್ದರೆ ನಮ್ಮ ಮೊಬೈಲ್ ಫೋನ್ ಗಳ ಮಾರಾಟಕ್ಕೆ ತೊಂದರೆಯಾಗುತ್ತದೆ ಎಂದು ಕಾರಣ ನೀಡಿ ಒನ್ ಪ್ಲಸ್ ಮಾರಾಟಕ್ಕೆ ಮಧ್ಯಂತರ ತಡೆ(Injunction) ನೀಡಬೇಕೆಂದು ಮೈಕ್ರೋಮ್ಯಾಕ್ಸ್ ಸಂಸ್ಥೆ ಮನವಿ ಸಲ್ಲಿಸಿತ್ತು. [ರೆಡ್ಮಿ ಸ್ಮಾರ್ಟ್ ಫೋನ್ ಮಾರಾಟಕ್ಕೆ ತಾತ್ಕಾಲಿಕ ಒಪ್ಪಿಗೆ]

ಮೈಕ್ರೋಮ್ಯಾಕ್ಸ್ ಮನವಿ ಪುರಸ್ಕರಿಸಿದ ಹೈಕೋರ್ಟ್ ಜಸ್ಟೀಸ್ ಮನಮೋಹನ್ ಸಿಂಗ್, ಒನ್ ಪ್ಲಸ್ ಸ್ಮಾರ್ಟ್ ಫೋನ್ ಮಾರ್ಕೆಟಿಂಗ್, ಮಾರಾಟ, ಶಿಪ್ಪಿಂಗ್ ಮಾಡುವುದನ್ನು ನಿಲ್ಲಿಸುವಂತೆ ಶೆನ್ ಝೆನ್ ಕಂಪನಿ ಹಾಗೂ ಅಮೆಜಾನ್ ಇಂಡಿಯಾ ಸಂಸ್ಥೆಗೆ ಆದೇಶಿಸಿದೆ. ಮಂಗಳವಾರ (ಡಿ.16) ದಿಂದ ಈ ಆದೇಶ ಜಾರಿಗೆ ಬರಲಿದೆ.

Delhi HC stops OnePlus sales on Micromax plea

ಡಿ.2 ರಂದು ಇ ಕಾಮರ್ಸ್ ವೆಬ್ ಸೈಟ್ ಅಮೆಜಾನ್. ಕಾಂ ಮೂಲಕ ಭಾರತಕ್ಕೆ ಪ್ರವೇಶಿಸಿದ ಒನ್ ಪ್ಲಸ್ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ರೆಡ್ಮಿ ಮೊಬೈಲ್ ಗಳಂತೆ ಆಹ್ವಾನದ ಮೇರೆಗೆ ಆನ್ ಲೈನ್ ಮೂಲಕ ಈ ಮೊಬೈಲ್ ಗಳು ಮಾರಾಟವಾಗುತ್ತಿದೆ.

ಅದರೆ, ಕಳೆದ ಫೆಬ್ರವರಿಯಲ್ಲಿ ಸೈಯೊಜನ್ ಸಂಸ್ಥೆ ಶೆನ್ ಝೆನ್ ಕಂಪನಿ ಜೊತೆ ತನ್ನ ಒಪ್ಪಂದವನ್ನು ಮುರಿದುಕೊಂಡು ಮೈಕ್ರೋಮ್ಯಾಕ್ಸ್ ಜೊತೆಗೂಡಿತ್ತು. ಆದರೆ, ಡಿ.2 ರ ಮಾರಾಟಕ್ಕೆ ತೊಂದರೆ ಬಾರದಂತೆ ಒನ್ ಪ್ಲಸ್ ನಿಗಾವಹಿಸಿತ್ತು. ಚೀನಾ ಹೊರತುಪಡೆಸಿ ಸೈಯೋಜನ್ ಸಂಸ್ಥೆ ಒದಗಿಸಿರುವ ಸಾಫ್ಟ್ ವೇರ್, ಟ್ರೇಡ್ ಮಾರ್ಕ್ ವಿಶ್ವದೆಲ್ಲೆಡೆ ಬಳಕೆ ಮಾಡಲು ನಾವು ಅನುಮತಿ ಪಡೆದುಕೊಂಡಿದ್ದೇವೆ ಎಂದು ಶೆನ್ ಝೆನ್ ಒನ್ ಪ್ಲಸ್ ಹೇಳಿತ್ತು. [ಪೇಟೆಂಟ್ ಪ್ರಾಬ್ಲಂ ಚೀನಾ ಮೊಬೈಲ್ ಸೇಲ್ ಬಂದ್!]

ರೆಡ್ಮಿ ಗೂ ಪ್ರಾಬ್ಲಂ: ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ಬಳಸುತ್ತಿರುವ ಶಿಯೋಮಿ ರೆಡ್ಮಿ ಮೊಬೈಲ್ ಗಳು ಪೇಟೆಂಟ್ ಕಾಯ್ದೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಪ್ರಕರಣ ಇತ್ಯರ್ಥವಾಗುವ ತನಕ ಶಿಯೋಮಿ ಮೊಬೈಲ್ ಮಾರಾಟಕ್ಕೆ ನಿರ್ಬಂಧ ವಿಧಿಸಿ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಈ ಹಿಂದೆ ಚೀನಾ ಮೂಲದ ಹ್ಯಾಂಡ್ ಸೆಟ್ ಬಳಸದಂತೆ ಭಾರತೀಯ ವಾಯುಸೇನೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಭದ್ರತಾ ವೈಫಲ್ಯ, [ಚೀನಾ ಮೊಬೈಲ್ ಸಂಸ್ಥೆ ಹೇಳಿದ್ದೇನು?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+