ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿದ್ಯಾರ್ಥಿಗೆ ಗೂಗಲ್ ನಿಂದ ಕೋಟಿ ರು ಸಂಬಳದ ಆಫರ್!

By Mahesh
|
Google Oneindia Kannada News

ನವದೆಹಲಿ, ನ.20: ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (ಡಿಟಿಯು) ದ ವಿದ್ಯಾರ್ಥಿಗೆ ಗೂಗಲ್ ಸಂಸ್ಥೆ ಭರ್ಜರಿ ಆಫರ್ ನೀಡಿದೆ. ಮೂಲಗಳ ಪ್ರಕಾರ ವಿದ್ಯಾರ್ಥಿ ಚೇತನ್ ಗೆ ಸರಿ ಸುಮಾರು 1.26 ಕೋಟಿ ರು ವಾರ್ಷಿಕ ಸಂಬಳದ ಆಫರ್ ನೀಡಲಾಗಿದೆಯಂತೆ.

ಟೈಮ್ಸ್ ಆಫ್ ಇಂಡಿಯಾ ವರದಿಯಂತೆ ದೆಹಲಿ ಚೇತನ್ ಕಕ್ಕರ್ ಗೆ 1,90,000 ಯುಎಸ್ ಡಾಲರ್ ಮೊತ್ತದ ಆಫರ್ ನೀಡಲಾಗಿದೆ. ಡಿಟಿಯುನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಚೇತನ್ ಅವರು ಆಫರ್ ಒಪ್ಪಿಕೊಂಡ ಮೇಲೆ ಕ್ಯಾಲಿಫೋರ್ನಿಯಾಕ್ಕೆ ತೆರಳಬೇಕಾಗುತ್ತದೆ. [ಸರ್ಚ್ ಇಂಜಿನ್ ಗೂಗಲ್ ಹೊಸ ಲೋಗೋ ಸುತ್ತಾ ಪ್ರದಕ್ಷಿಣೆ]

Delhi boy grabs whopping Rs 1.27 crore pay offer from Google

ಡಿಟಿಯು ವಿದ್ಯಾರ್ಥಿಯೊಬ್ಬರಿಗೆ ಗೂಗಲ್ ನಿಂದ ಆಫರ್ ಮಾಡಿದ ಅತ್ಯಂತ ಹೆಚ್ಚಿನ ಸಂಬಳದ ಆಫರ್ ಇದಾಗಿದೆ. ಇದಕ್ಕೂ ಮುನ್ನ ಡಿಟಿಯು ವಿದ್ಯಾರ್ಥಿಯೊಬ್ಬರಿಗೆ 93 ಲಕ್ಷ ರು ಆಫರ್ ನೀಡಲಾಗಿತ್ತು. [ಟೆಕ್ಕಿಗಳಿಗೆ ಕೈ ತುಂಬಾ ಸಂಬಳ ಸಿಗ್ತಿಲ್ಲವಂತೆ!]

ಚೇತನ್ ಅವರ ಪೋಷಕರು ದೆಹಲಿ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದಾರೆ. ಚೇತನ್ ಅವರ ತಾಯಿ ರೀಟಾ ಅವರು ರಾಸಾಯನ ಶಾಸ್ತ್ರ ಬೋಧಿಸುತ್ತಾರೆ ಹಾಗೂ ತಂದೆ ಸುಭಾಷ್ ಆರು ಮ್ಯಾನೇಜ್ಮೆಂಟ್ ಸ್ಟಡೀಸ್ ಕಲಿಸುತ್ತಿದ್ದಾರೆ.

ಗೂಗಲ್ ನಿಂದ ಸಿಕ್ಕಿರುವ ಭರ್ಜರಿ ಆಫರ್ ಬಗ್ಗೆ ಪ್ರತಿಕ್ರಿಯಿಸಿರುವ ಚೇತನ್, 'ನಾನು ಈ ದಿನಕ್ಕಾಗಿ ಬಹುದಿನಗಳಿಂದ ಕಾಯುತ್ತಿದ್ದೆ. ನಾನು ಗೂಗಲ್ ಸೇರಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಈ ಸುದ್ದಿಯನ್ನು ಕೇಳಿಸಿಕೊಳ್ಳಲು ಕ್ಲಿಕ್ ಮಾಡಿ. (ಒನ್ ಇಂಡಿಯಾ ಸುದ್ದಿ)

English summary
Google has made a whopping placement offer to a student of the Delhi Technological University (DTU).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X