ದೀಪಾವಳಿ ದಿನವೇ ಭೀಕರ ದುರಂತ, ಬೆಂಗಳೂರಿನಲ್ಲಿ ಪಟಾಕಿ ಸಿಡಿದು 14 ಮಂದಿ... Deepavali 2025
ದೀಪಾವಳಿ ಸಂಭ್ರಮ ಮುಗಿಲು ಮುಟ್ಟಿದ್ದು, ಎಲ್ಲೆಲ್ಲೂ ಪಟಾಕಿಗಳ ಅಬ್ಬರದ ಜೊತೆಗೆ ದೀಪಗಳ ಬೆಳಕು ಕೂಡ ಫಳಫಳ ಒಳೆಯುತ್ತಿದೆ. 2025ರ ದೀಪಾವಳಿ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದ್ದು, ಮಳೆ ನಡುವೆ ಕೂಡ ಜನರು ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಈ ನಡುವೆ ಪಟಾಕಿಯ ಅಬ್ಬರ ತುಸು ಹೆಚ್ಚಾಗಿದ್ದು, ಚರ್ಚೆ ಕೂಡ ಜೋರಾಗಿದೆ. ಆದರೂ ಕೋಟಿ ಕೋಟಿ ರೂಪಾಯಿ ಪಟಾಕಿಗಳು ಸೋಲ್ಡ್ ಔಟ್. ಹೀಗಿದ್ದಾಗಲೇ ದೀಪಾವಳಿ ದಿನವೇ ಭೀಕರ ದುರಂತ, ಬೆಂಗಳೂರಿನಲ್ಲಿ ಪಟಾಕಿ ಸಿಡಿದು 14 ಮಂದಿ...
ಹೌದು, ದೀಪಾವಳಿ ಹಬ್ಬದ ದಿನವೇ ಹಲವು ದುರಂತಗಳು ಪಟಾಕಿ ಕಾರಣಕ್ಕೆ ವರದಿ ಆಗುತ್ತಿವೆ. ಅದರಲ್ಲೂ ಈ ಪೈಕಿ ಇದೀಗ ಪಟಾಕಿ ಹಚ್ಚಲು ಹೋಗಿ ಮಕ್ಕಳೇ ಹೆಚ್ಚಿ ಪ್ರಮಾಣದಲ್ಲಿ ಹಾನಿ ಮಾಡಿಕೊಂಡಿದ್ದಾರೆ. ಹೀಗೆ ಪಟಾಕಿ ಹಚ್ಚುವ ಸಮಯದಲ್ಲಿ ಕಣ್ಣಿಗೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಹಾನಿ ಮಾಡಿಕೊಂಡಿದ್ದಾರೆ. ಈ ಪೈಕಿ ಕಣ್ಣಿಗೆ ಹಾನಿ ಆದ ಸುಮಾರು 14 ಜನರಿಗೆ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ಹೀಗೆ ಕಣ್ಣಿಗೆ ಹಾನಿ ಮಾಡಿಕೊಂಡು ಆಸ್ಪತ್ರೆ ಸೇರಿದವರ ಪೈಕಿ ಮಕ್ಕಳ ಪ್ರಮಾಣವೇ ಹೆಚ್ಚಾಗಿದೆ. ಅಲ್ಲದೆ ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಲು ವೈದ್ಯರು ಮನವಿ ಮಾಡಿದ್ದಾರೆ.

ಮಾಲಿನ್ಯ ಪ್ರಮಾಣದ ಕೊಂಚ ಹೆಚ್ಚಳ
ಪಟಾಕಿ ಮೇಲೆ ಹಲವು ರೀತಿಯ ನಿರ್ಬಂಧ ಇದ್ದರೂ ಅದರ ಬಳಕೆ ಮಾತ್ರ ಕಡಿಮೆ ಆಗಿಲ್ಲ. ಅದರಲ್ಲೂ ಇದೀಗ ಭಾರಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ ಪರಿಣಾಮ ವಾಯು ಮಾಲಿನ್ಯ ಕೂಡ ಹೆಚ್ಚಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಮತ್ತೊಂದು ಕಡೆ ಪಟಾಕಿ ಕಾರಣಕ್ಕೆ ಈಗಾಗಲೇ ಹಲವರು ಆಸ್ಪತ್ರೆ ಸೇರಿದ್ದು, ಹಸಿರು ಪಟಾಕಿ ಮಾತ್ರ ಬಳಕೆ ಮಾಡಬೇಕು ಎಂಬ ಆದೇಶ ಇದ್ದರೂ ಅದಕ್ಕೆ ಕಿಮ್ಮತ್ತು ಸಿಗುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.












Click it and Unblock the Notifications