ಅಂತೂ ಏರಿತು ಜಿಎಸ್ ಟಿ ಸಂಗ್ರಹ, ಡಿಸೆಂಬರ್ ನಲ್ಲಿ 86,703 ಕೋಟಿ
ಎರಡು ತಿಂಗಳು ಸತತವಾಗಿ ಜಿಎಸ್ ಟಿ ಸಂಗ್ರಹ ಕಡಿಮೆ ಆದ ನಂತರ ಅಂತೂ ಏರಿಕೆ ಕಂಡಿದೆ. ಕಳೆದ ಡಿಸೆಂಬರ್ ತಿಂಗಳ ತೆರಿಗೆ ಸಂಗ್ರಹ ಮೊತ್ತ 86,703 ಕೋಟಿ ರುಪಾಯಿ ಆಗಿದೆ. ಈ ಸಂಖ್ಯೆಯು ಜನವರಿ 25ರ ವರೆಗಿನ ಲೆಕ್ಕ ಎಂದು ಆರ್ಥಿಕ ಸಚಿವಾಲಯವು ಮಾಹಿತಿ ನೀಡಿದೆ.
ಜನವರಿ ಇಪ್ಪತ್ನಾಲ್ಕರವರೆಗೆ ಒಂದು ಕೋಟಿ ತೆರಿಗೆದಾರರು ಜಿಎಸ್ ಟಿ ಅಡಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಆ ಪೈಕಿ 17.11 ಲಕ್ಷ ಮಂದಿಯ ವಾರ್ಷಿಕ ವ್ಯವಹಾರ 1.5 ಕೋಟಿ ರುಪಾಯಿ ಒಳಗೆ ಇದೆ. ಅಂಥವರನ್ನು ಕಾಂಪೋಸಿಷನ್ ಡೀಲರ್ಸ್ ಎಂದು ಕರೆಯಲಾಗುತ್ತದೆ.
56.30 ಲಕ್ಷ ಜಿಎಸ್ ಟಿಆರ್ 3B ರಿಟರ್ನ್ಸ್ ಅನ್ನು ಡಿಸೆಂಬರ್, 2017ರ ಅವಧಿ ಲೆಕ್ಕಕ್ಕೆ ಜನವರಿ 24, 2018ರವರೆಗೆ ಸಲ್ಲಿಕೆ ಮಾಡಿದ್ದಾರೆ ಎಂದು ಆರ್ಥಿಕ ಸಚಿವಾಲಯದಿಂದ ಟ್ವೀಟ್ ಮಾಡಲಾಗಿದೆ. ಅಂದಹಾಗೆ ಜುಲೈನಿಂದ ನವೆಂಬರ್ ವರೆಗೆ ಸಂಗ್ರಹವಾದ ಜಿಎಸ್ ಟಿ ಮೊತ್ತದ ವಿವರ ಹೀಗಿದೆ.

ಜುಲೈ 94,063 ಕೋಟಿ
ಆಗಸ್ಟ್ 90,669 ಕೋಟಿ
ಸೆಪ್ಟೆಂಬರ್ 92,150 ಕೋಟಿ
ಅಕ್ಟೋಬರ್ 83,346 ಕೋಟಿ
ನವೆಂಬರ್ 80,808 ಕೋಟಿ












Click it and Unblock the Notifications