• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಯುಕೆ ಪ್ರವಾಸಕ್ಕೂ ಮುನ್ನ ಡಿ ಗ್ಗ್ಯಾಂಗ್ ಆಸ್ತಿ ಜಪ್ತಿ

By ವಿಕಾಸ್ ನಂಜಪ್ಪ
|

ನವದೆಹಲಿ, ಅ.14: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಅವರ ಗ್ಯಾಂಗಿನ ಸದಸ್ಯರ ಆಸ್ತಿ ಜಪ್ತಿಗೆ ತನಿಖಾ ತಂಡ ಮುಂದಾಗಿದೆ. ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಸಾವಿರಾರು ರು.ಮೌಲ್ಯದ ಅಸ್ತಿಯನ್ನು ವಶಕ್ಕೆ ಪಡೆಯಲು ಜಾರಿನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾರೆ.

ಡಿ ಗ್ಯಾಂಗಿನ ಆಸ್ತಿ ಜಪ್ತಿಗೆ ಬೇಕಾದ ಪೂರ್ವ ತಯಾರಿಯನ್ನು ಸಿಬಿಐ ಶುರು ಮಾಡಿದ್ದು, ಯುನೈಟೆಡ್ ಕಿಂಗ್ಡಮ್ ಏಜೆನ್ಸಿಗಳ ಜೊತೆ ಮಾತುಕತೆ ನಡೆಸಿದೆ. ಯುಕೆಯಲ್ಲಿ ದಾವೂದ್ ಕಟ್ಟಿರುವ ಕೋಟೆಯನ್ನು ಕೆಡವಲು ಸಿಬಿಐ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದೆ.[ದಾವೂದ್ ಇಬ್ರಾಹಿಂ ಪಾಸ್ ಪೋರ್ಟ್ ವಿವರ ಬಹಿರಂಗ]

ದಾವೂದ್ ಆಪ್ತ ಇಕ್ಬಾಲ್ ಮಿರ್ಚಿ 2013ರಲ್ಲಿ ಸಾಯುವುದಕ್ಕೂ ಮುನ್ನ ಯುಕೆಯಲ್ಲಿರುವ ಡಿ ಗ್ಯಾಂಗಿನ ಆಸ್ತಿಯನ್ನು ಭದ್ರಪಡಿಸಿಕೊಂಡಿದ್ದಾನೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ ಗ್ಯಾಂಗ್ ನ ಆಸ್ತಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದರು. ವಿಶ್ವದ 50 ಕಡೆ ಡಿ ಗ್ಯಾಂಗಿನ ಆಸ್ತಿ ಇದ್ದು, ಇದರಲ್ಲಿ ಯುಕೆಯಲ್ಲಿ 10 ಕಡೆ ಆಸ್ತಿ ಇದೆ. ಸಾವಿರಾರು ಕೋಟಿ ರು ಮೌಲ್ಯದ ಆಸ್ತಿ ಜಪ್ತಿಯಾಗಲಿದೆ.

Dawood Ibrahim's UK assets worth Rs 1,000 crore set to be seized

ಮೋದಿ ಯುಕೆ ಪ್ರವಾಸಕ್ಕೂ ಮುನ್ನ ಜಪ್ತಿ: ಪ್ರಧಾನಿ ಮೋದಿ ಅವರು ನವೆಂಬರ್ ನಲ್ಲಿ ಯುಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಡಿ ಗ್ಯಾಂಗಿಗೆ ಸೇರಿದ ಸಮಸ್ತ ಆಸ್ತಿಯನ್ನು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಯುಎಇನಲ್ಲಿ ಇದೇ ವಿಷಯವನ್ನು ಮೋದಿ ಅವರು ಪ್ರಸ್ತಾಪಿಸಿದ್ದರು.[ದಾವೂದ್ ಶರಣಾಗತಿ ತಪ್ಪಿಸಿದ್ದು ಪವಾರ್: ಜೇಠ್ಮಲಾನಿ]

ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ, ಸೈಂಟ್ ಜಾನ್ ವುಡ್ ರಸ್ತೆ, ಹಾರ್ನ್ ಚರ್ಚ್, ಎಸೆಕ್ಸ್, ರಿಚ್ಮಂಡ್ ರಸ್ತೆ, ಟೊಮ್ಸ್ ವುಡ್ ರಸ್ತೆ, ಚಿಗ್ವೆಲ್, ರೊಯಿ ಹಾಂಪ್ಟನ್ ಹೈ ಸ್ಟ್ರೀಟ್, ಲಂಡನ್, ಲ್ಯಾನ್ಸೆಲೊಟ್ ರಸ್ತೆ, ಥಾರ್ಟನ್ ರಸ್ತೆ, ಸಿಟಾಲ್ ಸ್ಟ್ರೀಟ್ ಹಾಗೂ ಡಾರ್ಟ್ ಫೋರ್ಟ್ ನಲ್ಲಿ ಆಸ್ತಿ ಇದೆ.

ಡಿ ಗ್ಯಾಂಗ್ ಆಸ್ತಿ ಎಷ್ಟಿದೆ?: ಜಾಗತಿಕವಾಗಿ ಡಿ ಗ್ಯಾಂಗಿನ ಆಸ್ತಿ ಸುಮಾರು 3,000 ಕೋಟಿ ರು ಗೂ ಅಧಿಕವಾಗಿದೆ. ಮೊರಕ್ಕೋ, ಸ್ಪೇನ್, ಯುನೈಟೆಡ್ ಅರಬ್ ಎಮಿರೇಟ್ಸ್, ಸಿಂಗಪುರ, ಥೈಲ್ಯಾಂಡ್, ಟರ್ಕಿ, ಭಾರತ, ಪಾಕಿಸ್ತಾನ ಹಾಗೂ ಯುನೈಟೆಡ್ ಕಿಂಗ್ಡಮ್ ನಲ್ಲಿ ಆಸ್ತಿ ಇದೆ. [ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೈಹಾಕಿದ ದಾವೂದ್‌]

ಮುಂಬೈ ಹಾಗೂ ಯುನೈಟೆಡ್ ಕಿಂಗ್ಡಮ್ ಗಳನ್ನು ಮುಖ್ಯ ಕೇಂದ್ರಗಳನ್ನಾಗಿ ಇಕ್ಬಾಲ್ ಮಿರ್ಚಿ ಮಾಡಿಕೊಂಡಿದ್ದ. ಕೆಲ ವ್ಯವಹಾರಗಳು ಬ್ಯಾಂಕ್ ಮೂಲಕವೂ ನಡೆದಿರುವುದು ಕಂಡು ಬಂದಿದೆ.ಈ ಬಗ್ಗೆ ಮಾಹಿತಿ ಕಲೆ ಹಾಕಲು ಜಾರಿ ನಿರ್ದೇಶನಾಲಯ ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೊರೆ ಹೊಕ್ಕಿದೆ.(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು dawood ibrahim ಸುದ್ದಿಗಳುView All

English summary
After successfully locating properties owned by Dawood Ibrahim and his henchmen in the UAE, India has now managed to get list of his assets in the United Kingdom which is worth around Rs 1,000 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more