ಹಾಂಗ್ ಕಾಂಗ್ ನಲ್ಲಿ ದಾಖಲೆ ಕಲೆಕ್ಷನ್ ಮಾಡಿದ 'ದಂಗಲ್'
ನವದೆಹಲಿ, ಸೆಪ್ಟೆಂಬರ್ 5: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರು ನಟಿಸಿದ್ದ 'ದಂಗಲ್' ಸಿನಿಮಾ ವಿಶ್ವದೆಲ್ಲೆಡೆ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತು.
ಇದೀಗ, ಹಾಂಗ್ ಕಾಂಗ್ ನಲ್ಲೂ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿರುವ ಅದು, ಬಿಡುಗಡೆಯಾದ ಹತ್ತು ದಿನದಲ್ಲಿ 10 ಕೋಟಿ ರು. ಬಾಚಿದೆ. ಈ ಮೂಲಕ, 'ದಂಗಲ್' ಚಿತ್ರ 2000 ಕೋಟಿ ರು. ಕಲೆಕ್ಷನ್ ಮಾಡಿದ ಚಿತ್ರಗಳ ಸಾಲಿಗೆ ಸೇರಲಿದೆ ಎಂದು ಮೂಲಗಳು ಹೇಳಿವೆ.
ಕಳೆದ ವರ್ಷಾಂತ್ಯಕ್ಕೆ ಬಿಡುಗಡೆಯಾಗಿದ್ದ ಈ ಚಿತ್ರ ಇತ್ತೀಚಿನವರೆಗೆ 1800 ಕೋಟಿ ರು. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ, ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್ಡೇತರ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಟಾಪ್ 5ರಲ್ಲಿ ನಿಂತಿದೆ.
ಅಷ್ಟೇ ಅಲ್ಲ, ಹಾಂಗ್ ಕಾಂಗ್ ಬಾಕ್ಸಾಫೀಸ್ ನಲ್ಲಿಯೂ ಬಿಡುಗಡೆಯಾದ 10 ದಿನಗಳಲ್ಲಿ ಇಷ್ಟು ದೊಡ್ಡ ಕಲೆಕ್ಷನ್ ಮಾಡಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ದಂಗಲ್ ಚಿತ್ರದ ಖದರೇ ಬೇರೆ
ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದ 'ಬಾಹುಬಲಿ-2' ಚಿತ್ರವೂ ಚೀನಾದಲ್ಲಿ ಸದ್ದು ಮಾಡಿಲ್ಲದಿರುವುದು ಸೋಜಿಗದ ಸಂಗತಿ. ಆದರೆ, ದಂಗಲ್ ಮಾತ್ರ ಚೀನಾದಲ್ಲಿ ಧೂಳೆಬ್ಬಿಸಿ ಈಗ ಹಾಂಗ್ ಕಾಂಗ್ ನಲ್ಲೂ ದಾಖಲೆ ಸೃಷ್ಟಿಸಿದೆ.

ಚೀನಿಯರಿಗೆ ಇಷ್ಟವಾದ ಆಮೀರ್
ನಿಜ ಹೇಳಬೇಕೆಂದರೆ, ಚೀನಾದ ಸಿನಿ ಪ್ರಿಯರು ಅಮೀರ್ ಖಾನ್ ಅವರನ್ನು ಮೆಚ್ಚಿಕೊಂಡಷ್ಟು ಬೇರೆ ಯಾವುದೇ ಭಾರತೀಯ ಹೀರೋಗಳ ಸಿನಿಮಾಗಳನ್ನು ಈವರೆಗೆ ಮೆಚ್ಚಿಕೊಂಡಿಲ್ಲ.

ಪಿ.ಕೆ. ಸೇರಿದಂತೆ ಅನೇಕ ಚಿತ್ರಗಳು ಖ್ಯಾತಿ ಗಳಿಸಿವೆ
ಭಾರತ ಹಾಗೂ ಮಿಕ್ಕೆಡೆ ಸೂಪರ್ ಡ್ಯೂಪರ್ ಹಿಟ್ ಆದ ಅನೇಕ ಬಾಲಿವುಡ್ ಚಿತ್ರಗಳು ತಪ್ಪದೇ ಚೀನಾಕ್ಕೆ ಡಬ್ ಆಗಿವೆ. ಆದರೆ, ಅವ್ಯಾವೂ ಅಲ್ಲಿ ಸದ್ದು ಮಾಡಿಲ್ಲ. ಆದರೆ, ಅಮೀರ್ ಅವರ ಪಿ.ಕೆ., ಧೂಮ್ 3, ತ್ರೀ ಈಡಿಯಟ್ಸ್ ಚಿತ್ರಗಳು ಹೆಚ್ಚು ಕಲೆಕ್ಷನ್ ಮಾಡಿವೆ.

ಬಾಲಿವುಡ್ ಪಂಡಿತರ ಲೆಕ್ಕಾಚಾರವೇನು?
ಅಮೀರ್ ಖಾನ್ ಚಿತ್ರಗಳಿಗೆ ಈಗ ಚೀನಾದಲ್ಲಿ ಹೊಸ ಮಾರುಕಟ್ಟೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಅಮೀರ್ ಅವರ ಮುಂದಿನ ಚಿತ್ರಗಳಿಗೆ ಇಲ್ಲಿ ಭರ್ಜರಿ ಬೇಡಿಗೆ ಸೃಷ್ಟಿಯಾಗುವುದು ಸೂಚನೆ ಲಭಿಸುತ್ತಿದ್ದಂತೆ, ಇತ್ತ ಅಮೀರ್ ಖಾನ್ ಅವರ ಡಬ್ಬಿಂಗ್ ಹಕ್ಕುಗಳ ಮೌಲ್ಯ ಸಿಕ್ಕಾಬಟ್ಟೆ ಹೆಚ್ಚಾಗಲಿದೆ ಎಂದು ಬಾಲಿವುಡ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.
-
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications