ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್ 'ಬಿಲಿಯನ್‌ ಡೆ' ಗೆ ಅದ್ಭುತ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಅ. 7 : ಕೆಲ ಗೊಂದಲ, ಹೊಗಳಿಕೆ ನಡುವೆ ಫ್ಲಿಪ್ ಕಾರ್ಟ್ ಮೆಗಾ ಸೇಲ್‌ ಯಶಸ್ಸು ಸಾಧಿಸಿದೆ. ಕೇವಲ 10 ಗಂಟೆಯಲ್ಲಿ 600 ಕೋಟಿ ರೂ. ಲಾಭ ಗಳಿಸಿದ್ದೇನೆ ಎಂದು ಕಂಪನಿ ಹೇಳಿಕೊಂಡಿದೆ.

ಗ್ರಾಹಕರ ದೂರುಗಳು ಮತ್ತು ತಾಂತ್ರಿಕ ತೊಂದರೆಗಳ ನಡುವೆಯೂ ಕಂಪನಿಯ ಮೆಗಾ ಸೇಲ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಪನಿಯ ತಂತ್ರಜ್ಞರು ಹಗಲಿರುಳು ಶ್ರಮಿಸಿರುವುದೇ ಇದಕ್ಕೆ ಕಾರಣ ಎಂದು ಫ್ಲಿಪ್ ಕಾರ್ಟ್ ಸಂಸ್ಥಾಪಕರಾದ ಸಚಿನ್‌ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ಈತ ಸಂಭ್ರಮಿಸುವುದಕ್ಕೆ ಕಾರಣ ಬೇಕಿಲ್ಲǃ]

flipkart

ಈ 'ಬಿಗ್ ಬಿಲಿಯನ್‌ ಡೆ' ಕಂಪನಿ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಅಲ್ಲದೇ ದೇಶದ ಇ-ಕಾಮರ್ಸ್ ಮಾರುಕಟ್ಟೆಯಲ್ಲೇ ಹೊಸ ಇತಿಹಾಸ ನಿರ್ಮಾಣವಾಗಿದೆ. ಗ್ರಾಹಕರ ಪ್ರತಿಕ್ರಿಯೆ ನಿಜಕ್ಕೂ ಸಂತಸದಾಯಕವಾಗಿದೆ. ನೀಡಿರುವ ಆಫರ್‌ಗಳು ಮತ್ತು ಬೆಲೆ ಎಲ್ಲರಿಗೂ ಇಷ್ಟವಾಗಿದೆ ಎಂದು ಹೇಳಿದ್ದಾರೆ.

ಗ್ರಾಹಕರಿಗೆ ಕೆಲವೊಂದು ಸಮಸ್ಯೆ ಎದುರಾಗಿರುವುದು ನಿಜ. ಆದರೆ ನಮ್ಮ ತಂತ್ರಜ್ಞರ ತಂಡ ಎಲ್ಲದಕ್ಕೂ ಉತ್ತರ ಹುಡುಕಲು ಶ್ರಮಿಸಿದೆ. ಬಿಗ್ ಮೆಗಾ ಸೇಲ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಅಂತರ್ಜಾಲ ತಾಣದಲ್ಲಿ ಈಗಾಗಲೇ ಬಿಲಿಯನ್ 'ಹಿಟ್‌' ದೊರೆತಿದೆ. 24 ಗಂಟೆಗಳ ಗುರಿಯನ್ನು ಕೇವಲ 10 ತಾಸಿನಲ್ಲಿ ತಲುಪಿದ್ದೇವೆ ಎಂದು ಕಂಪನಿ ಸಂಸ್ಥಾಪಕರು ಹೇಳಿಕೊಂಡಿದ್ದಾರೆ.[ಅಮೆಜಾನ್ ತೆರಿಗೆ ಹೇರಿಕೆಗೆ ದಿಗ್ವಿಜಯ್ ಡಿಚ್ಚಿǃ]

ಇದು ನಮ್ಮ ಕನಸಿಗೆ ಇನ್ನಷ್ಟು ಪುಷ್ಟಿ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆ ರೂಪಿಸಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಸುಮ್ಮನಿರುತ್ತವೆಯೇ ಅಮೆಜಾನ್, ಸ್ನ್ಯಾಪ್ ಡೀಲ್?
ಭಾರತದ ಇ-ಕಾಮರ್ಸ್‌ ಮಾರುಕಟ್ಟೆ ಮೇಲೆ ತಮ್ಮದೇ ಹಿಡಿತ ಸಾಧಿಸಿರುವ ಅಮೆಜಾನ್ ಮತ್ತು ಸ್ನ್ಯಾಪ್ ಡೀಲ್ ಈ ಬೆಳವಣಿಗೆಯಿಂದ ಖಂಡಿತ ಸುಮ್ಮನಿರಲ್ಲ. ದೀಪಾವಳಿ ಹಬ್ಬವೂ ಸಮೀಪಿಸುತ್ತಿದ್ದು ಫ್ಲಿಪ್ ಕಾರ್ಟ್ ಗಿಂತ ಜೋರಾಗಿ 'ಪಟಾಕಿ' ಸಿಡಿಸಲು ಅಮೆಜಾನ್ ಸದ್ದಿಲ್ಲದೆ ಸಿದ್ಧತೆ ಮಾಡಿಕೊಂಡಿರುವುದು ಸುಳ್ಳಲ್ಲ.

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆಜಾನ್ ಡಾಟ್‌ ಕಾಮ್ ಸಿಇಒ ಜೆಫ್ ಬೆಜೋಸ್ ಯೋಜನೆಗಳು ಯಾವ ರೀತಿ ಇವೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಇ-ಕಾಮರ್ಸ್ ಸಂಸ್ಥೆಗಳ ನಡುವಿನ ಸ್ಪರ್ಧೆ ಗ್ರಾಹಕರ ಆಯ್ಕೆ ಸ್ವಾತಂತ್ರ್ಯನ್ನು ಹೆಚ್ಚಿಸಿದೆ.

English summary
Despite errors and complaints, the Flipkart mega sale was as a huge success. Company sources say that they earned a whopping $100 million in a span of just 10 hours. On the technical goof-ups and customer complaints, the co-founders Sachin Bansal and Binny Bansal said that the technical team is working round the clock to resolve the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X