• search
For Quick Alerts
ALLOW NOTIFICATIONS  
For Daily Alerts

  ಸಿದ್ದು ನಿದ್ದೆ ಕೆಡಿಸಿರುವ ಉಬ್ಲೋ ಡೈಮಂಡ್ ವಾಚಿನ ಸ್ವಾರಸ್ಯಕರ ಕಥೆ ಕೇಳಿರಣ್ಣ

  By Mahesh
  |

  'ಎಲ್ರ ಕಾಲ್ ಎಳೀತದೆ ಕಾಲ' 'ಕಾಲವನ್ನು ತಡೆಯೋರು' ಯಾರು ಇಲ್ಲ ಎಂಬ ಹಾಡುಗಳು ಈಗ ಕರ್ನಾಟಕದ ಪ್ರಧಾನ ಬೀದಿಗಳ ಗ್ರಾಮೋಫೋನಿನಲ್ಲಿ ಮತ್ತೆ ಮತ್ತೆ ಕೇಳಿ ಬರುವ ಹಾಡುಗಳಾಗಿವೆ. ವಾಚು ಪುರಾಣದ ಬಗ್ಗೆ ಕೇಳಿ ಕೇಳಿ ಕಿವಿ ತುರಿಸುತ್ತಿರುವವರಿಗೆ ಇಲ್ಲಿದೆ ಹೊಸ ಪುರಾಣ. ದುಬಾರಿ ವಾಚೊಂದನ್ನು ಬೆತ್ತಲೆ ಮಾಡಿ ನಿಮ್ಮ ಮುಂದಿಡಲಾಗಿದೆ.

  ಜಗತ್ತಿನ ಅತ್ಯಂತ ದುಬಾರಿ ವಾಚುಗಳ ಪೈಕಿ ಒಂದೆನಿಸಿರುವ ಊಬ್ಲೋ (Hublot- ಉಚ್ಚಾರಣೆ 'ooh-blow', 'hoo-blot' ಅಲ್ಲ) ಈಗ ಕರ್ನಾಟಕದ ಸಿಎಂ ಅವರ ಕೈ ಸೇರಿದ್ದು ವಿವಾದಕ್ಕೆ ಕಾರಣವಾಗಿದೆ. [ವಾಚ್ ಹಗರಣದ ಬಗ್ಗೆ ಶಾಮ್ ಏನು ಹೇಳುತ್ತಾರೆ?]

  ಈ ವಾಚು ಕಟ್ಟುವ ಮೂಲಕ ಫುಟ್ಬಾಲ್ ತಾರೆ ಮರಡೋನಾ, ಉಸೇನ್ ಬೋಲ್ಟ್, ಹೀಡಿ ಕ್ಲಮ್, ಬಿಯಾನ್ಸ್ , ಎಫ್ 1 ಕ್ರೀಡೆಯ ದಂತಕತೆ ಆರ್ಯಾನ್ ಸೆನಾ ಕುಟುಂಬ ಸಾಲಿಗೆ ಸಿಎಂ ಸಿದ್ದರಾಮಯ್ಯ ಸೇರಿದ್ದಾರೆ. [ಚಿನ್ನದ'ಒಳ ಉಡುಪು' ಗಿಫ್ಟ್ ಸಿಕ್ಕಿದ್ರೆ? ರಿಯಾಕ್ಷನ್ ಹೇಗಿರುತ್ತೆ?]

  ಇಟಲಿಯ ಬಿಂಡಾ ಗ್ರೂಪ್ ಮನೆತನಕ್ಕೆ ಸೇರಿದ್ದ ಕಾರ್ಲೊ ಕ್ರೊಕೊ ಬ್ರಿಯಲ್ ವಾಚುಗಳನ್ನು ತಯಾರಿಸುತ್ತಿತ್ತು. 1976ರಲ್ಲಿ ಕಂಪನಿ ತೊರೆದ ಕ್ರೊಕೊ 80 ರ ದಶಕದಲ್ಲಿ ಸ್ಥಾಪಿಸಿದ ಸಂಸ್ಥೆಗೆ ಹ್ಯೂಬ್ಲೆಟ್ ಎಂದು ಹೆಸರಿಡಲಾಯಿತು. ಫ್ರೆಂಚ್ ಸಂಸ್ಥೆ ಎಲ್ ವಿಎಂಎಚ್ ಮೊಯಿ ಹೆನ್ನ್ಸಿ ಹಾಗೂ ಲೂಯಿಸ್ ವುಟ್ಟನ್ ಅಧೀನದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿ ಸ್ವಿಟ್ಜೆರ್ಲೆಂಡ್ ನ ನಿಯೋನ್ ನಲ್ಲಿದೆ.[ಗಡಿಯಾರದ ಗಲಾಟೆ, ಎಚ್ಡಿಕೆ ಬುಟ್ಟಿಯಲ್ಲಿ ಹೊಸ ಹಾವು!] | [ಕಾಲದೊಂದಿಗೆ ಓಡುವ ಕೈವಾಚು ಪುರಾಣ]

  ವಾಚುಗಳ ಪುರಾಣದ ಕಂತೆ ಬಿಚ್ಚಿಡೋಣ

  ವಾಚುಗಳ ಪುರಾಣದ ಕಂತೆ ಬಿಚ್ಚಿಡೋಣ

  ಸ್ವಿಟ್ಜರ್‌ಲ್ಯಾಂಡಿನ ಪ್ರಮುಖ ಬ್ರ್ಯಾಂಡ್‌ಗಳಾದ ರೋಲೆಕ್ಸ್, ಟ್ಯಾಗ್ ಹೀವರ್, ಕಾರ್ಟಿಯರ್, ಮೊಂಟ್‌ಬ್ಲಾಂಕ್ ಇತ್ಯಾದಿಗಳು ಇಂದು ವೈಭವದ ಬ್ರ್ಯಾಂಡ್‌ ಗಳಾಗಿವೆ. ಗಿಫ್ಟ್ ನೀಡುವವರ ಮೊದಲ ಆಯ್ಕೆ ಎನಿಸಿವೆ. ಸ್ಮಾರ್ಟ್ ವಾಚ್ ಗಳ ಕಾಲದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಹುಟ್ಟು ಹಾಕಿರುವ ವಾಚುಗಳ ಪುರಾಣದ ಕಂತೆ ಬಿಚ್ಚಿಡೋಣ...

  5 ಮಿಲಿಯನ್ ಡಾಲರ್ ಮೊತ್ತ ವಾಚು

  5 ಮಿಲಿಯನ್ ಡಾಲರ್ ಮೊತ್ತ ವಾಚು

  ವಿಶ್ವದ ಅತ್ಯಂತ ದುಬಾರಿ ಬೆಲೆಯ ವಾಚುಗಳಲ್ಲಿ ಇದು ಒಂದೆನಿಸಿದೆ. 140 ಕ್ಯಾರೇಟ್ ಇರುವ 1,200 ವಜ್ರ ಖಚಿತ ಗಡಿಯಾರದಲ್ಲಿ 3 ಕ್ಯಾರೆಟ್ ತೂಗುವ 6 ಹರಳುಗಳಿವೆ. 17 ಜನ ವಿನ್ಯಾಸಗಾರರು 14 ತಿಂಗಳುಗಳ ಕಾಲ ಶ್ರಮವಹಿಸಿ ಈ ವಾಚನ್ನು ರೂಪಿಸಿದ್ದಾರೆ. ಅಮೆರಿಕನ್ ಸೂಪರ್ ಸ್ಟಾರ್ ಬಿಯಾನ್ಸ್ ನೋಲ್ಸ್ ತಮ್ಮ ಪತಿಗಾಗಿ ಈವಾಚನ್ನು ಖರೀದಿಸಿದ್ದಾರೆ.

  ಆಭರಣಯುಕ್ತ ವಾಚುಗಳ ಪ್ರಶಸ್ತಿ ಗೆದ್ದ ವಾಚು

  ಆಭರಣಯುಕ್ತ ವಾಚುಗಳ ಪ್ರಶಸ್ತಿ ಗೆದ್ದ ವಾಚು

  ಆಭರಣಯುಕ್ತ ವಾಚುಗಳ ಪ್ರಶಸ್ತಿ ಗೆದ್ದ ವಾಚು ಇದಾಗಿದ್ದು, ಜಿನೀವಾದ 2009ರಲ್ಲಿ ಪ್ರಶಸ್ತಿ ಪಡೆದ ವಾಚಿನಲ್ಲಿ 18 ಕ್ಯಾರೇಟುಗಳ ಬಿಳಿ ಚಿನ್ನವಿದೆ. ಅಂಕಿಗಳಿಲ್ಲದ 34.5 ಕ್ಯಾರೆಟ್ ತೂಗುವ 544 ವಜ್ರಗಳನ್ನು ಹೊಂದಿರುವ ಈ ವಾಚನ್ನು ಮಿಲಿಯನ್ ಡಾಲರ್ ಬ್ಲಾಕ್ ಕೇವಿಯರ್ ಬ್ಯಾಂಗ್ ಎಂದು ಕರೆಯಲಾಗುತ್ತದೆ. ಬೆಲೆ 1 ಮಿಲಿಯನ್ ಯುಎಸ್ ಡಾಲರ್

  ಉಬ್ಲೋ ಮಾಸ್ಟರ್ ಪೀಎಸ್ ಎಂಪಿ-02

  ಉಬ್ಲೋ ಮಾಸ್ಟರ್ ಪೀಎಸ್ ಎಂಪಿ-02

  ಉಬ್ಲೋ ಮಾಸ್ಟರ್ ಪೀಎಸ್ ಎಂಪಿ-02 ಈ ಮಾದರಿಯ ಬೆಲೆ ಸುಮಾರು 305,000 ಯುಎಸ್ ಡಾಲರ್. ಟೈಟಾನಿಯಂ ಬಳಸಿ ತಯಾರಿಸಲಾಗಿರುವ ಈ ವಾಚಿಗೆ ಕಪ್ಪು ಬಣ್ಣದ ಚರ್ಮದ ಸ್ಟಿಪ್ ಇದೆ. ಒಳ್ಳೆ ಸ್ಫೋರ್ಟ್ಸ್ ಲುಕ್ ಇದೆ. ಲಿಮಿಟೆಡ್ ಆವೃತ್ತಿಯ ಈ ವಾಚಿನಲ್ಲಿ ನಿಖರ ಸಮಯ ನೋಡುವುದರ ಜೊತೆಗೆ ಡಯಲ್ ನಿಧಾನಗತಿಯಲ್ಲಿ ಚಲಿಸುವಂತೆ ಮಾಡುವ ಸೌಲಭ್ಯವೂ ಇದೆ.

  ಬಿಗ್ಗರ್ ಬ್ಯಾಂಗ್ ವಜ್ರ ಖಚಿತ ವಾಚು

  ಬಿಗ್ಗರ್ ಬ್ಯಾಂಗ್ ವಜ್ರ ಖಚಿತ ವಾಚು

  ಬಿಗ್ಗರ್ ಬ್ಯಾಂಗ್ ವಜ್ರ ಖಚಿತ ಟೊರ್ಬಿಲಿಯನ್ ನಿಯಮಿತ ಆವೃತ್ತಿ ವಾಚಿನ ಬೆಲೆ 290,000 ಯುಎಸ್ ಡಾಲರ್. ಇಲ್ಲಿ ತನಕ 18 ವಾಚುಗಳನ್ನು ಮಾತ್ರ ಮಾರುಕಟ್ಟೆಗೆ ಬಿಡಲಾಗಿದೆ. ವಾಚಿನ ಕೇಸಿಗೆ 212 ವಜ್ರಗಳನ್ನು ಬಳಸಲಾಗಿದೆ. ಒಳ ವಿನ್ಯಾಸಕ್ಕೆ 48 ವಜ್ರಗಳನ್ನು ಒಳವಡಿಸಲಾಗಿದೆ.

  ಉಬ್ಲೋ ಬಿಗ್ಗರ್ ಬ್ಯಾಂಗ್

  ಉಬ್ಲೋ ಬಿಗ್ಗರ್ ಬ್ಯಾಂಗ್

  ಉಬ್ಲೋ ಬಿಗ್ಗರ್ ಬ್ಯಾಂಗ್ ಕಾಲಂ ವೀಲ್ ಕ್ರೋನೊಗ್ರಾಫ್ ಬಳಸಿದ ಮೊದಲ ವಾಚ್ ಇದಾಗಿದೆ, ಫ್ಲೈಯಿಂಗ್ ಟೊರ್ಬಿಲಿಯನ್ ಹೊಂದಿದ್ದು, ಬಾಲ್ ಬೇರಿಂಗ್ ಇಲ್ಲದ ವಿನ್ಯಾಸ ಬಳಸಲಾಗಿದೆ.5 ದಿನಗಳ ವರೆಗೂ ಪವ ಸೇವಿಂಗ್ ಹೊಂದಿದ್ದು 33 ರೂಬಿಗಳನ್ನು ವಿನ್ಯಾಸದಲ್ಲಿ ಅಳವಡಿಸಲಾಗಿದೆ. ಈ ವಾಚಿನ ಬೆಲೆ 260,000 ಯುಎಸ್ ಡಾಲರ್.

  ಉಬ್ಲೋ ಬಿಗ್ ಬ್ಯಾಂಗ್ ಕಿಂಗ್

  ಉಬ್ಲೋ ಬಿಗ್ ಬ್ಯಾಂಗ್ ಕಿಂಗ್

  ಉಬ್ಲೋ ಬಿಗ್ ಬ್ಯಾಂಗ್ ಕಿಂಗ್ ಸೆರಾಮಿಕ್ ಕೇಸ್ ಹೊಂದಿದ್ದು, ರಬ್ಬರ್ ಬ್ರಾಸ್ಲೆಟ್ ಹೊಂದಿದೆ. ಕಪ್ಪು ಬಣ್ಣದ ಡಯಲ್. ಪಚ್ಚೆ ಹರಳು ಹೊಂದಿದ್ದು, ಪವರ್ ಸೇವಿಂಗ್ 120 ಗಂಟೆಗಳ ಕಾಲ ಬರುತ್ತದೆ. 100 ಮೀಟರ್ ತನಕ ನೀರು ನಿರೋಧಕ ಶಕ್ತಿ ಹೊಂದಿದೆ. ಇದರ ಬೆಲೆ 250,000 ಯುಎಸ್ ಡಾಲರ್

  ಬಿಗ್ ಡೇಟ್ ಉಬ್ಲೋ ವಾಚು

  ಬಿಗ್ ಡೇಟ್ ಉಬ್ಲೋ ವಾಚು

  ಬಿಗ್ ಡೇಟ್ ಉಬ್ಲೋ ವಾಚು,ಪವರ್ ಸೇವಿಂಗ್ ಐದು ದಿನಗಳ ತನಕ ಇರುತ್ತದೆ. 100 ಮೀಟರ್ ತನಕ ನೀರು ನಿರೋಧಕ ಶಕ್ತಿ ಹೊಂದಿದೆ. ಇದರ ಬೆಲೆ 200,000 ಯುಎಸ್ ಡಾಲರ್. ಪ್ಲಾಟಿನಂ ಸೆರಾಮಿಕ್ ಬೆಜೆಲ್ ಹಾಗೂ ಮ್ಯಾನ್ಯುವಲ್ ವೆಂಡಿಂಗ್ ಹೊಂದಿದೆ.

  ಉಬ್ಲೋ ಕ್ಲಾಸಿಕ್ ಪಿಂಕ್ ಗೋಲ್ಡ್ ಅಂಡ್ ಡೈಮಂಡ್

  ಉಬ್ಲೋ ಕ್ಲಾಸಿಕ್ ಪಿಂಕ್ ಗೋಲ್ಡ್ ಅಂಡ್ ಡೈಮಂಡ್

  180,000 ಯುಎಸ್ ಡಾಲರ್ ಮೌಲ್ಯದ ಉಬ್ಲೋ ಕ್ಲಾಸಿಕ್ ಪಿಂಕ್ ಗೋಲ್ಡ್ ಅಂಡ್ ಡೈಮಂಡ್ ವಾಚು ಉಕ್ಕಿನ ಕೇಸು ಹೊಂದಿದೆ. ರಬ್ಬರ್ ಕಪ್ಪು ಬಣ್ಣದ ಬ್ರಾಸ್ಲೆಟ್, ಕ್ವಾರ್ಟ್ಜ್ ಮೂವ್ಮೆಂಟ್ ಇದಕ್ಕಿದೆ.

  ಉಬ್ಲೋ ಟೊರ್ಬಲಿನ್ ಸೋಲೊ ಬ್ಯಾಂಗ್

  ಉಬ್ಲೋ ಟೊರ್ಬಲಿನ್ ಸೋಲೊ ಬ್ಯಾಂಗ್

  ಉಬ್ಲೋ ಟೊರ್ಬಲಿನ್ ಸೋಲೊ ಬ್ಯಾಂಗ್ 100 ಮೀಟರ್ ತನಕ ನೀರು ನಿರೋಧಕ ಶಕ್ತಿ ಹೊಂದಿದೆ. ಬೆಲೆ 170,000 ಯುಎಸ್ ಡಾಲರ್. ಕಪ್ಪು ಬಣ್ಣದ ಸೆರಾಮಿಕ್ ಕೇಸ್ ಹಾಗೂ ಸೆರಾಮಿಕ್ ಬೇಜೆಲ್, ಕಪ್ಪು ಡಯಲ್ ಮ್ಯಾನುವಲ್ ವೆಂಡಿಂಗ್ ಹೊಂದಿದೆ.

  ಫ್ಯೂಷನ್ ಜಿರ್ಕೋನಿಯಂ ವಾಚು

  ಫ್ಯೂಷನ್ ಜಿರ್ಕೋನಿಯಂ ವಾಚು

  ಫ್ಯೂಷನ್ ಜಿರ್ಕೋನಿಯಂ ವಾಚು ಸ್ವಯಂ ವೈಂಡಿಂಗ್ ಕ್ರೋನೋಗ್ರಾಫ್ ಸೌಲಭ್ಯ, 42 ಗಂಟೆಗಳ ತನಕ ಪವರ್ ಸೇವಿಂಗ್, 50 ಮೀಟರ್ ತನಕ ನೀರು ನಿರೋಧಕ ಶಕ್ತಿ ಹೊಂದಿದೆ. ಬೆಲೆ 160,000 ಯುಎಸ್ ಡಾಲರ್.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The diamond studded Hublot wrist watch gift controversy rocks Karnataka. Even as Chief Minister Siddaramaiah and ex CM HD Kumaraswamy trade charges. Lets take a close look at the watch -its feature, utilities, manufactures and prices of Ten models of expensive wrist watch.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more