ಹೆಚ್‌ಡಿಎಫ್‌ಸಿಯಲ್ಲಿನ ಚೀನಾದ ಸೆಂಟ್ರಲ್ ಬ್ಯಾಂಕ್ ಷೇರುಗಳ ಮಾರಾಟ: ವರದಿ
ನವದೆಹಲಿ, ಜುಲೈ 10: ವಿನಿಮಯ ಕೇಂದ್ರಗಳಲ್ಲಿ ದಾಖಲಾದ ಷೇರುದಾರರ ವಿವರಗಳ ಪ್ರಕಾರ, ಚೀನಾದ ಕೇಂದ್ರೀಯ ಬ್ಯಾಂಕ್ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪ್‌ನಲ್ಲಿನ (HDFC) ತನ್ನ ಕೆಲವು ಪಾಲನ್ನು ಮಾರಾಟ ಮಾಡಿದೆ ಎನ್ನಲಾಗಿದೆ.
Recommended Video
ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಜೂನ್ ಅಂತ್ಯದ ವೇಳೆಗೆ ಕಂಪನಿಯ ಕನಿಷ್ಠ ಶೇಕಡಾ 1 ಪಾಲನ್ನು ಹೊಂದಿರುವ ಹೂಡಿಕೆದಾರರ ಪಟ್ಟಿಯನ್ನು ಕೈ ಬಿಟ್ಟಿದೆ. ಪಿಬಿಒಸಿ ಸುಮಾರು 17.5 ಮಿಲಿಯನ್ ಷೇರುಗಳನ್ನು ಹೊಂದಿದ್ದು, ಮಾರ್ಚ್ ಅಂತ್ಯದ ವೇಳೆಗೆ ಶೇ 1.01 ರಷ್ಟು ಷೇರುಗಳನ್ನು ಹೊಂದಿದೆ. ಚೀನಾದ ಕೇಂದ್ರೀಯ ಬ್ಯಾಂಕ್ ಅಡಮಾನ ಸಾಲ ನೀಡುವವರಲ್ಲಿ ಯಾವುದೇ ಪಾಲನ್ನು ಹೊಂದಿದೆಯೆ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಸಾಧ್ಯವಿಲ್ಲ.
ಪಿಬಿಒಸಿ ತನ್ನ ಷೇರುಗಳಲ್ಲಿ ಕನಿಷ್ಠ ಒಂದು ಭಾಗವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರಬಹುದು ಎಂದು ಹಿಂದೂ ಬಿಸಿನೆಸ್ ಲೈನ್ ಪತ್ರಿಕೆ ಈ ಹಿಂದೆ ವರದಿ ಮಾಡಿದೆ, ಮಾರುಕಟ್ಟೆ ಮೂಲಗಳನ್ನು ಉಲ್ಲೇಖಿಸಿ. ಮುಂಬೈನಲ್ಲಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಎಚ್‌ಡಿಎಫ್‌ಸಿ ಷೇರುಗಳು ಶೇಕಡಾ 2.2 ರಷ್ಟು ಕುಸಿದವು. ಈ ಷೇರು ತನ್ನ ಜನವರಿ ದಾಖಲೆಯ ಗರಿಷ್ಠ ಮಟ್ಟದಿಂದ ಏಪ್ರಿಲ್ ಕನಿಷ್ಠಕ್ಕೆ ಶೇಕಡಾ 40ರಷ್ಟು ಕುಸಿದಿದೆ ಆದರೆ ಅಂದಿನಿಂದ ಇದು ಶೇಕಡಾ 27 ರಷ್ಟು ಏರಿಕೆಯಾಗಿದೆ.

ಮಾರ್ಚ್ ಅಂತ್ಯದ 12 ತಿಂಗಳಲ್ಲಿ ಪಿಬಿಒಸಿ ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್‌ನಲ್ಲಿ ತನ್ನ ಪಾಲನ್ನು ಹೆಚ್ಚಿಸಿತ್ತು. ಕೊರೊನಾವೈರಸ್ ಬಿಕ್ಕಟ್ಟಿನಲ್ಲಿ ಷೇರು ಕುಸಿತಗೊಂಡಾಗ ಇತರೆ ರಾಷ್ಟ್ರಗಳು ಸ್ವಾಧೀನದ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಏಪ್ರಿಲ್‌ನಲ್ಲಿ ಚೀನಾ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ತನ್ನ ಕಂಪನಿಗಳಲ್ಲಿ ಹೂಡಿಕೆ ಮಾಡುವ ನಿಯಮಗಳನ್ನು ಕಠಿಣಗೊಳಿಸಿತು.
ಭಾರತದಲ್ಲಿ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪೆನಿಗಳು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಶೇಕಡಾ 1 ಕ್ಕಿಂತ ಹೆಚ್ಚಿನ ಷೇರುಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ.











Click it and Unblock the Notifications