• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಕೇಶ್ ಅಂಬಾನಿ ಬಳಿಕ ವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ ಚೀನಾದ ಝಾಂಗ್ ಶಾನ್ಷನ್

|

ನವದೆಹಲಿ, ಜನವರಿ 06: ಇತ್ತೀಚೆಗಷ್ಟೇ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಚೀನಾದ ಬಿಲಿಯನೇರ್ ಉದ್ಯಮಿ ಝಾಂಗ್ ಶಾನ್ಷನ್ ಇದೀಗ ಅಮೆರಿಕಾದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್‌ರನ್ನೇ ಮೀರಿಸಿದ್ದಾರೆ.

ಝಾಂಗ್ ಶಾನ್ಷನ್ ಅವರ ಒಟ್ಟು ಸಂಪತ್ತು 2021 ರಲ್ಲಿ 13.5 ಬಿಲಿಯನ್ ಹೆಚ್ಚಳಗೊಂಡು 91.7 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ಈ ಮೂಲಕ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಫೆಟ್‌ನ ನಿವ್ವಳ ಮೌಲ್ಯ 86.2 ಬಿಲಿಯನ್ ಡಾಲರ್‌ನಷ್ಟಿದೆ.

ಅಂಬಾನಿಯನ್ನು ಹಿಂದಿಕ್ಕಿದ ಝಾಂಗ್ ಶಾನ್ಷನ್: ಏಷ್ಯಾದ ನಂಬರ್ 1 ಶ್ರೀಮಂತ

ಪತ್ರಿಕೋದ್ಯಮ, ಅಣಬೆ ಕೃಷಿ ಮತ್ತು ಹೆಲ್ತ್‌ ಕೇರ್ ಉದ್ಯಮಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಝಾಂಗ್ ಸಂಪತ್ತಿನ ನಿವ್ವಳ ಮೌಲ್ಯವು ಈ ವರ್ಷ ಬರೋಬ್ಬರಿ 70.9 ಬಿಲಿಯನ್ ಡಾಲರ್‌ಗೂ ಹೆಚ್ಚು ಏರಿಕೆ ದಾಖಲಿಸಿದೆ.

ಲಸಿಕೆಗಳು ಮತ್ತು ಹೆಪಟೈಟಿಸ್ ಕಿಟ್‌ಗಳನ್ನು ತಯಾರಿಸುವ ಬಾಟಲ್ ವಾಟರ್ ಕಂಪನಿ ನಾಂಗ್‌ಫು ಸ್ಪ್ರಿಂಗ್ ಮತ್ತು ಬೀಜಿಂಗ್ ವಾಂಟೈ ಬಯೋಲಾಜಿಕಲ್ ಫಾರ್ಮಸಿ ಎಂಟರ್‌ಪ್ರೈಸ್‌ನ ಅಧ್ಯಕ್ಷರು ಆಗಿದ್ದಾರೆ. ನಾಂಗ್‌ಫುವಿನ ಷೇರು ಬೆಲೆ ಅದರ ಐಪಿಒ ಬೆಲೆಗಿಂತ ಶೇಕಡಾ 200 ರಷ್ಟು ಏರಿಕೆಯಾಗಿದೆ. ಅದೇ ಸಮಯದಲ್ಲಿ, ಬೀಜಿಂಗ್ ವಾಂಟೈ ಬಯೋಲಾಜಿಕಲ್ ಫಾರ್ಮಸಿ ಎಂಟರ್‌ಪ್ರೈಸಸ್ ಪಟ್ಟಿಯಿಂದ 25 ಪಟ್ಟು ಗಳಿಸಿದೆ.

ಮುಖೇಶ್ ಅಂಬಾನಿ ಕಳೆದ ವರ್ಷದ ಗಣನೀಯ ಭಾಗವಾಗಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ಪ್ರಸ್ತುತ ಆಸ್ತಿ ಸುಮಾರು 76 ಬಿಲಿಯನ್ ಆಗಿದ್ದು, ಇದು 2021 ರ ಆರಂಭದಿಂದ ಇಲ್ಲಿಯವರೆಗೆ ಸುಮಾರು ಒಂದು ಬಿಲಿಯನ್ ಡಾಲರ್‌ಗಳಷ್ಟು ಕಡಿಮೆಯಾಗಿದೆ.

2020ರಲ್ಲಿ ಒಂದು ಸಮಯದಲ್ಲಿ ಅಂಬಾನಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ. ರಿಲಯನ್ಸ್ ಇಂಡಸ್ಟ್ರೀಸ್ ಷೇರು ತನ್ನ ಸಾರ್ವಕಾಲಿಕ ಗರಿಷ್ಠಕ್ಕಿಂತ ಶೇಕಡಾ 19ರಷ್ಟು ಕುಸಿದಿದೆ. ಕಳೆದ ವರ್ಷ, ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳೀಕರಣವು 200 ಡಾಲರ್‌ ಬಿಲಿಯನ್ ಮೀರಿದೆ.

English summary
Zhong Shanshan richer than Warren Buffett as his fortune surged $13.5 billion to $91.7 billion since the start of the year, according to the Bloomberg Billionaires Index.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X