Gold Price Today: ಚಿನ್ನದ ಬೆಲೆ ಮತ್ತೆ ಭಾರೀ ಏರಿಕೆ, ಇಂದಿನ ದರಗಳು ಹೀಗಿದೆ
ಚಿನ್ನದ ದರಗಳು ಈ ವಾರವಿಡೀ ಏರಿಕೆ ಕಂಡಿವೆ. ಸೋಮವಾರದಿಂದಲೂ ನಿರಂತರವಾಗಿ ದರ ಗಗನಕ್ಕೇರುತ್ತಿದ್ದು, ನಿನ್ನೆಯೂ ಒಂದು ಗ್ರಾಂ ಚಿನ್ನದ ಮೇಲೆ 32 ರೂಪಾಯಿವರೆಗೆ ಏರಿಕೆ ಕಂಡಿತ್ತು. ಈ ವಾರಾಂತ್ಯದ ವೇಳೆಗೆ ಚಿನ್ನದ ದರಗಳು ಕುಸಿಯುವ ನಿರೀಕ್ಷೆಯಲ್ಲಿದ್ದರು ಚಿನ್ನ ಖರೀದಿದಾರರು. ಆದರೆ ಶುಕ್ರವಾರವೂ ದರ ಏರತೊಡಗಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹14,002, 22 ಕ್ಯಾರೆಟ್ ಚಿನ್ನಕ್ಕೆ ₹12,835 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹10,502. ಒಂದು ಗ್ರಾಂ ಮೇಲೆ ನಿನ್ನೆಗಿಂತ ಇಂದು 77 ರೂಪಾಯಿ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,002, 8 ಗ್ರಾಂ ಚಿನ್ನದ ದರ ₹1,12,016, 10 ಗ್ರಾಂ.ಚಿನ್ನದ ದರ ₹1,40,020, 100 ಗ್ರಾಂ ಚಿನ್ನದ ದರ ಆಗಿದ್ದು, ನಿನ್ನೆಗಿಂತ ದರ ₹7,700 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,835 ಆಗಿದ್ದು, ನಿನ್ನೆಯ ದರ ₹12,765 ಇತ್ತು. ಈಗ ಪ್ರತಿ ಗ್ರಾಂ ಮೇಲೆ ₹70 ಏರಿದೆ. 8 ಗ್ರಾಂ ಚಿನ್ನದ ದರ ₹1,02,680, 10 ಗ್ರಾಂ ಚಿನ್ನದ ದರ ₹1,28,350, 100 ಗ್ರಾಂ ಚಿನ್ನದ ದರ ₹12,83,500 ಇದ್ದು, ₹7,000ವರೆಗೆ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹10,502 ಇದ್ದು, ಒಂದು ಗ್ರಾಂ ಮೇಲೆ ₹58 ಹೆಚ್ಚಾಗಿದೆ. 8 ಗ್ರಾಂ ಚಿನ್ನದ ದರ, 10 ಗ್ರಾಂ ಚಿನ್ನದ ದರ ₹1,05,020, 100 ಗ್ರಾಂ ಚಿನ್ನದ ದರ ₹10,50,200 ಆಗಿದ್ದು, ಬರೋಬ್ಬರಿ ₹5,800 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
| ದಿನಾಂಕ | 24 ಕ್ಯಾರೆಟ್ ಚಿನ್ನ (₹) | 22 ಕ್ಯಾರೆಟ್ ಚಿನ್ನ (₹) |
|---|---|---|
| ಡಿಸೆಂಬರ್ 26 | 14,002 | 12,835 |
| ಡಿಸೆಂಬರ್ 25 | 13,925 | 12,765 |
| ಡಿಸೆಂಬರ್ 24 | 13,893 | 12,735 |
| ಡಿಸೆಂಬರ್ 23 | 13,855 | 12,700 |
| ಡಿಸೆಂಬರ್ 22 | 13,615 | 12,480 |
| ಡಿಸೆಂಬರ್ 21 | 13,418 | 12,300 |
| ಡಿಸೆಂಬರ್ 20 | 13,418 | 12,300 |
| ಡಿಸೆಂಬರ್ 19 | 13,418 | 12,300 |
| ಡಿಸೆಂಬರ್ 18 | 13,484 | 12,360 |
| ಡಿಸೆಂಬರ್ 17 | 13,386 | 12,270 |
| ಡಿಸೆಂಬರ್ 16 | 13,539 | 12,411 |
| ಡಿಸೆಂಬರ್ 15 | 13,538 | 12,410 |
ಬೆಳ್ಳಿ ಕೂಡ ದುಬಾರಿ
ಈ ವಾರ ಚಿನ್ನ ಮಾತ್ರವಲ್ಲ, ಬೆಳ್ಳಿಯ ದರಗಳು ಕೂಡ ನಿರಂತರವಾಗಿ ಏರಿಕೆ ಕಂಡಿವೆ. ಚಿನ್ನಕ್ಕೆ ಸೆಡ್ಡುವಂತೆ ಬೆಳ್ಳಿ ದುಬಾರಿಯಾಗತೊಡಗಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹240 ಮತ್ತು ಪ್ರತಿ ಕಿಲೋಗ್ರಾಂಗೆ ₹2,40,000 ಆಗಿದೆ. ಒಂದು ಗ್ರಾಂ ಮೇಲೆ 6 ರೂಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹6,895 ಮತ್ತು 10 ಗ್ರಾಂಗೆ ₹68,950 ಆಗಿದೆ. ಗ್ರಾಂ ಮೇಲೆ 432 ರೂಪಾಯಿ ಏರಿಕೆ ಕಂಡಿದೆ. ಒಟ್ಟಾರೆ ಚಿನ್ನ, ಬೆಳ್ಳಿ, ಪ್ಲಾಟಿನಂ ಈ ವಾರ ದುಬಾರಿಯಾಗುತ್ತಲೇ ಇದೆ.












Click it and Unblock the Notifications