ಅಡಿಕೆ ಮಾನ ಕಾಪಾಡಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ, ಜೂ.04: ಕೇಂದ್ರ ಸರ್ಕಾರ ಅಡಿಕೆ ಆಮದು ದರವನ್ನು ಹೆಚ್ಚಳ ಮಾಡಿದ್ದು ದೇಶದ ಕರ್ನಾಟಕ, ಕೇರಳ ಮತ್ತು ಅಸ್ಸಾಂನ ಬೆಳೆಗಾರರಿಗೆ ಲಾಭವಾಗಲಿದೆ. 110 ರು. ಇದ್ದ ಆಮದು ದರವನ್ನು ಪ್ರತಿ ಕೆಜಿಗೆ 162 ರು ಗೆ ಏರಿಸಲಾಗಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಕೇಂದ್ರ ವಾಣಿಜ್ಯ ಸಚಿವಾಲಯ, ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದದ (ಎಸ್‌ಎಎಫ್‌ಟಿಎ) ಅಡಿ ಯಲ್ಲಿ ನೀಡಲಾಗಿರುವ ಕಡಿಮೆ ದರದ ಆಮದು ಅವಕಾಶವನ್ನು ಬಳಸಿಕೊಂಡು ನೆರೆಯ ದೇಶಗಳಿಂದ ಅಗಾಧ ಪ್ರಮಾಣದಲ್ಲಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ದೇಶದ ಮಾರುಕಟ್ಟೆ ಮತ್ತು ರೈತರ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತಿತ್ತು ಎಂದು ಸಚಿವಾಲಯ ಹೇಳಿದೆ.[ಯಾವ ಕಾರಣಕ್ಕೂ ಅಡಿಕೆ ನಿಷೇಧ ಇಲ್ಲ]

karnataka

ಭಾರತ, ಬಾಂಗ್ಲಾದೇಶ, ಭೂತಾನ್‌, ಮಾಲ್ಡೀವ್ಸ್‌, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ 2006ರಲ್ಲಿ ಎಸ್‌ಎಎಫ್‌ಟಿಎಗೆ ಸಹಿ ಹಾಕಿದ್ದವು. ಭಾರತಕ್ಕೆ ಬಾಂಗ್ಲಾದೇಶದಿಂದಲೇ ಅತ್ಯಧಿಕ ಪ್ರಮಾಣದಲ್ಲಿ ಅಡಿಕೆ ಬರುತ್ತಿದೆ. ಆಮದು ದರ ಹೆಚ್ಚಳ ಮಾಡಿರುವುದರಿಂದ ದೇಶದ ಅಡಿಕೆಗೆ ಇನ್ನು ಹೆಚ್ಚಿನ ಬೆಲೆ ಬರುವ ನಿರೀಕ್ಷೆಯಿದೆ.[ಮಲೆನಾಡಿಗೆ ಮರಣ ಶಾಸನ ಇತ್ತ ಸಿದ್ಧಾಂತಗಳು]

ಪ್ರತಿ ವರ್ಷ ಬೆಳೆ ಕೊಯ್ಲಿನ ಸಂದರ್ಭದಲ್ಲಿ ಅಡಿಕೆ ಬೆಳೆಗಾರರು ಉತ್ತಮ ದರ ಸಿಗದೆ ಪರಿತಪಿಸುತ್ತಿದ್ದರು. ಮಾರುಕಟ್ಟೆಗೆ ಯಾವ ನಿರ್ದಿಷ್ಟತೆ ಇರಲಿಲ್ಲ. ಒಂದೇ ವಾರದಲ್ಲಿ ಕ್ವಿಂಟಾಲ್ ಹಗೆ ಹತ್ತು ಸಾವಿರ ರು. ಗಿಂತಲೂ ಅಧಿಕ ಏರುಪೇರಾದ ದಾಖಲೆಗಳಿವೆ. ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಎಂದು ಎಣಿಸಿದ ವ್ಯಾಪಾರಿಗಳು ಆಮದು ಮೊರೆ ಹೋಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+