30 ಲಕ್ಷದ ಆಸ್ತಿ ಖರೀದಿಗೆ ಮುನ್ನ ಇದನ್ನು ಓದಿ

Subscribe to Oneindia Kannada

ನವದೆಹಲಿ, ಜನವರಿ, 05: : ಇನ್ನು ಮುಂದೆ 30 ಲಕ್ಷ ರು. ಹೆಚ್ಚಿನ ಮೊತ್ತದ ಸ್ಥಿರಾಸ್ತಿಗಳ ಖರೀದಿ ಮತ್ತು ಮಾರಾಟವನ್ನು ನೋಂದಣಿ ಅಧಿಕಾರಿಗಳು, ಆದಾಯ ತೆರಿಗೆ ಅಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ. 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸರಕು ಮತ್ತು ಸೇವೆಗಳ ಮಾರಾಟದ ಬಗ್ಗೆಯೂ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.

ದೇಶದಲ್ಲಿ ಕಪ್ಪು ಹಣದ ಚಲಾವಣೆಗೆ ಕಡಿವಾಣ ಹಾಕಲು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಹೊಸ ನಿಯಮಗಳನ್ನು ಏಪ್ರಿಲ್‌ 1, 2016 ರಿಂದ ಜಾರಿಗೆ ತರಲಿದೆ. ಅಂದರೆ ಹೊಸ ಹಣಕಾಸು ವರ್ಷದಿಂದ ನಿಮ್ಮ ಪ್ರತಿಯೊಂದು ದೊಡ್ಡ ಮೊತ್ತದ ಹಣಕಾಸು ಚಲಾವಣೆಯನ್ನು ದಾಖಲು ಮಾಡಬೇಕಾಗುತ್ತದೆ.[ಬಿಡಿಎ ಮನೆ ಕೊಳ್ಳುವ ನಿಮ್ಮ ಕನಸು ಸದ್ಯದಲ್ಲೇ ನನಸು!]

Central Board of Direct Taxes tightens noose to rein in black money

ಗರಿಷ್ಠ ಮೊತ್ತದ ವಹಿವಾಟು ಮತ್ತು ನಗದು ಪಡೆದ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ತಿಳಿಸಬೇಕಾಗುತ್ತದೆ. ನಗದು ಸ್ವೀಕಾರ, ಷೇರು - ಮ್ಯುಚುವಲ್‌ ಫಂಡ್‌ ಖರೀದಿ, ನಿಶ್ಚಿತ ಠೇವಣಿ, ಸ್ಥಿರಾಸ್ತಿ, ಮತ್ತು ವಿದೇಶಿ ಕರೆನ್ಸಿ ಮಾರಾಟದ ಬಗ್ಗೆ ತಿಳಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಗೆ ‘ಫಾರ್ಮ್‌ 61ಎದಲ್ಲಿ (Form 61A) ಸಂಪೂರ್ಣ ವಿವರ ನೀಡಬೇಕಾಗುತ್ತದೆ.[ಸ್ವಿಸ್ ಬ್ಯಾಂಕಲ್ಲಿ ಅತ್ತೆ-ಸೊಸೆಯರ ಭರ್ಜರಿ ಜುಗಲಬಂದಿ]

ಹಣಕಾಸು ವರ್ಷವೊಂದರಲ್ಲಿ ವ್ಯಕ್ತಿಯೊಬ್ಬ ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ 10ಲಕ್ಷ ರು. ಮತ್ತು ಅಧಿಕ ಮೊತ್ತವನ್ನು ಠೇವಣಿ ಇರಿಸಿದರೆ ಅದನ್ನು ಬ್ಯಾಂಕ್‌ಗಳು ತೆರಿಗೆ ಇಲಾಖೆಯ ಗಮನಕ್ಕೆ ನೀಡಬೇಕಾಗುತ್ತದೆ. ಇದು ಅಂಚೆ ಕಚೇರಿಯ ಠೇವಣಿಗಳು ಮತ್ತು ಹಣ ಮರಳಿ ಪಡೆಯುವುದಕ್ಕೂ ಅನ್ವಯಿಸಲಿವೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಿದೆ.[ಸ್ವಿಸ್ ಲೀಕ್ ಪಟ್ಟಿಯಲ್ಲಿರುವ 100 ಜನ ವಂಚಕರು]

ಕ್ರೆಡಿಟ್ ಕಾರ್ಡ್ ಗೂ ನಿಯಮ
ಹಣಕಾಸು ವರ್ಷದಲ್ಲಿ ಒಂದು ಅಥವಾ ಹೆಚ್ಚು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ 2ಲಕ್ಷ ರು. ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಬಿಲ್‌ ಪಾವತಿ ಮಾಡಿರುವುದನ್ನು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಬೇಕು. ಕಪ್ಪು ಹಣದ ಹರಿವು ತಡೆಯಲು ರಿಸರ್ವ್ ಬ್ಯಾಂಕ್ ಮತ್ತು ತೆರಿಗೆ ಇಲಾಖೆ ಈ ಬಗೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New Delhi: In order to check the generation of black money, the Central Board of Direct Taxes (CBDT) has notified new rules under which cash receipts and high value transactions by individuals beyond a certain threshold will have to be reported by banks and companies issuing shares or bonds to the Income Tax authorities with effect from April 1.
Please Wait while comments are loading...