ವಾಹನಗಳ ವಿಮೆ ಪ್ರೀಮಿಯಂ ಹೆಚ್ಚಳ: ಪರಿಷ್ಕೃತ ದರ ಜೂ. 1ರಿಂದ ಅನ್ವಯ

ಬೆಂಗಳೂರು, ಮೇ. 26: ಮೋಟಾರು ವಾಹನ ವಿಮೆ ಪ್ರೀಮಿಯಂ ದರ ಜೂನ್ 01 ರಿಂದ ಹೆಚ್ಚಳವಾಗಲಿದೆ. ವಾಹನಗಳ ವಿಮೆ ಪ್ರೀಮಿಯಂ ಹೆಚ್ಚಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಕಳೆದ ವಾರ ಅನುಮೋದನೆ ನೀಡಿತ್ತು. ವಾಹನಗಳ ಪರಿಷ್ಕೃತ ಪ್ರೀಮಿಯಂ ದರ ಜೂ. 1 ರಿಂದ ಅನ್ವಯವಾಗಲಿದ್ದು, ಇನ್ಮುಂದೆ ವಾಹನಗಳಿಗೆ ವಿಮೆ ಮಾಡಿಸುವರು ಹೆಚ್ಚುವರಿ ದರ ಪಾವತಿಸಬೇಕು.

2022 ಜೂ. 1 ರಿಂದ ಪರಿಷ್ಕೃತ ಮೋಟಾರು ವಾಹನ ಮೂರನೇ ವ್ಯಕ್ತಿಯ ವಿಮೆಯ ಮೊತ್ತ ಜಾರಿಗೆ ಬರಲಿದ್ದು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸವಾರರಿಗೆ ವಾಹನ ವಿಮೆ ಪ್ರೀಮಿಯಮ್ ಹೊರೆ ಹೆಚ್ಚಾಗಲಿದೆ. ವಾಹನಗಳ ಸಿಸಿ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ವಿಮೆ ಪ್ರೀಮಿಯಂ ಕಡಿಮೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ವಿಮೆ ಪ್ರೀಮಿಯಂ ಹೆಚ್ಚಳವಾಗಲಿದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಪ್ರಕಾರ, ಒಂದು ಸಾವಿರ ಸಿಸಿ ಸಾಮರ್ಥ್ಯ ಕ್ಕಿಂತ ಕಡಿಮೆ ಸಾಮರ್ಥ್ಯ ಇರುವ ಕಾರುಗಳ ಮೂರನೇ ವ್ಯಕ್ತಿಯ ವಾಹನ ವಿಮೆ ಪ್ರಿಮಿಯಂ ದರ ವಾರ್ಷಿಕ 2,094 ಕ್ಕೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಈ ಹಿಂದೆ ಈ ದರ ಕೇವಲ 2072 ರೂ. ಇತ್ತು. ವಾರ್ಷಿಕ 24 ರೂ. ಹೆಚ್ಚಿಸಲಾಗಿದೆ. ಈ ಪ್ರೀಮಿಯಂ ಮೊತ್ತಕ್ಕೆ ಅನುಗುಣವಾಗಿ ಹೆಚ್ಚುವರಿ ಜಿಎಸ್ ಟಿ ತೆರಿಗೆ ಕೂಡ ಪಾವತಿಸಬೇಕಾಗುತ್ತದೆ.

1000 ಸಿಸಿ ಸಾಮರ್ಥ್ಯದ ಕಾರುಗಳ ಪ್ರೀಮಿಯಂ

1000 ಸಿಸಿ ಸಾಮರ್ಥ್ಯದ ಕಾರುಗಳ ಪ್ರೀಮಿಯಂ

ಕನಿಷ್ಠ 1000 ಸಿಸಿ ಸಾಮರ್ಥ್ಯದಿಂದ 1500 ಸಿಸಿ ಸಾಮರ್ಥ್ಯದ ಕಾರುಗಳ ಮೂರನೇ ವ್ಯಕ್ತಿಯ ವಾಹನ ವಿಮೆ ಪ್ರೀಮಿಯಂ ಪಾವತಿ ಮೊತ್ತವನ್ನು 3,221 ರಿಂದ 3,416 ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಬರೋಬ್ಬರಿ 200 ರೂ. ಹೆಚ್ಚಳ ಮಾಡಲಾಗಿದೆ. ಅತಿ ದೊಡ್ಡ ಕಾರುಗಳು ಅಂದ್ರೆ 1500 ಸಿಸಿ ಸಾಮರ್ಥ್ಯಕ್ಕಿಂತ ಹೆಚ್ಚಿರುವ ಶ್ರೀಮಂತರ ಕಾರುಗಳ ಮೂರನೇ ವ್ಯಕ್ತಿಯ ವಿಮಾ ಮೊತ್ತವನ್ನು 7897 ಇದ್ದಿದ್ದನ್ನು 7980 ಕ್ಕೆ ಇಳಿಸಲಾಗಿದೆ.

ಬೈಕ್ ಗಳ ಸಿಸಿ ಸಾಮರ್ಥ್ಯ ಮತ್ತು ವಿಮೆ ಪ್ರೀಮಿಯಂ:

ಬೈಕ್ ಗಳ ಸಿಸಿ ಸಾಮರ್ಥ್ಯ ಮತ್ತು ವಿಮೆ ಪ್ರೀಮಿಯಂ:

ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದ್ರೆ, 150 ಸಿಸಿ ಸಮಾರ್ಥ್ಯದಿಂದ 350 ಸಿಸಿ ಸಾಮರ್ಥ್ಯದ ವಿಮೆ ಪ್ರೀಮಿಯಂ 1366 ರೂ. ನಿಗದಿ ಮಾಡಲಾಗಿದೆ. 350 ಸಿಸಿಗೆ ಮೇಲ್ಪಟ್ಟ ದ್ವಿಚಕ್ರ ವಾಹನಗಳ ವಾಹನ ವಿಮೆ ಪ್ರೀಮಿಯಂ ಮೊತ್ತ 2804 ರೂ. ಪಾವತಿಸಬೇಕು ಎಂದು ಕೇಂದ್ರ ಸಾರಿಗೆ ಮಂತ್ರಾಲಯ ಗೆಜೆಟ್ ನಲ್ಲಿ ಪ್ರಕಟಸಿದೆ.

ವಾಹನ ವಿಮೆ ಪರಿಷ್ಕರಣೆ ದರದ ವಿವರ:

ವಾಹನ ವಿಮೆ ಪರಿಷ್ಕರಣೆ ದರದ ವಿವರ:

ವಾಹನ ವಿಮೆ ಪರಿಷ್ಕರಣೆ ಪ್ರಕಾರ ಮೂರು ವರ್ಷದ ಸಿಂಗಲ್ ಪ್ರೀಮಿಯಂ ಪಾವತಿ ಮಾಡುವುದಿದ್ದರೆ, 1000 ಸಿಸಿ ಸಾಮರ್ಥ್ಯದೊಳಗಿನ ಕಾರುಗಳಿಗೆ 6521 ರೂ. ನಿಗದಿ ಮಾಡಲಾಗಿದೆ. 1000 ಸಿಸಿ ಮೇಲ್ಪಟ್ಟ ಹಾಗೂ 1500 ಸಿಸಿ ನಡುವಿನ ಕಾರುಗಳ ಮೂರು ವರ್ಷದ ಸಿಂಗಲ್ ಪ್ರೀಮಿಯಂ ದರ 10,640 ರೂ. ಆಗಲಿದೆ. 1500 ಕ್ಕೂ ಹೆಚ್ಚು ಸಾಮರ್ಥ್ಯದ ನೂತನ ಖಾಸಗಿ ಕಾರುಗಳಿಗೆ ಮೂರು ವರ್ಷಕ್ಕೆ 24,596 ರೂ. ಪ್ರೀಮಿಯಂ ನಿಗದಿ ಮಾಡಲಾಗಿದೆ.

350 ಸಿಸಿ ಮೇಲ್ಪಟ್ಟ ವಾಹನಗಳ ವಿಮೆ ಪ್ರೀಮಿಯಂ ದುಬಾರಿ:

350 ಸಿಸಿ ಮೇಲ್ಪಟ್ಟ ವಾಹನಗಳ ವಿಮೆ ಪ್ರೀಮಿಯಂ ದುಬಾರಿ:

ಐದು ವರ್ಷಕ್ಕೆ ಸಿಂಗಲ್ ಪ್ರೀಮಿಯಂ ಪಾವತಿಸುವ 75 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಪ್ರೀಮಿಯಂ ಮೊತ್ತ 2901 ರೂ. ನಿಗದಿ ಮಾಡಲಾಗಿದೆ. ಅದೇ ರೀತಿ 75 ಸಿಸಿಯಿಂದ 150 ಸಿಸಿ ವರೆಗಿನ ದ್ವಿಚಕ್ರ ವಾಹನಗಳಿಗೆ ಐದು ವರ್ಷದ ಸಿಂಗಲ್ ಪ್ರೀಮಿಯಂ ದರ 3851 ರೂ. ನಿಗದಿ ಮಾಡಲಾಗಿದೆ. 150 ರಿಂದ 350 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ 7,365 ರೂ. ಹಾಗೂ 350 ಸಿಸಿಗಿಂತಲೂ ಮೇಲ್ಪಟ್ಟ ದ್ವಿಚಕ್ರ ವಾಹನಗಳ ಐದು ವರ್ಷದ ವಾಹನ ವಿಮೆ ಪ್ರೀಮಿಯಂ ದರ 15,117 ರೂ. ಫಿಕ್ಸ್ ಮಾಡಲಾಗಿದೆ.

ಕಡಿಮೆ ಸಾಮರ್ಥ್ಯದ EV ವಾಹನಗಳಿಗೆ ಕಡಿಮೆ ಪ್ರೀಮಿಯಂ:

ಕಡಿಮೆ ಸಾಮರ್ಥ್ಯದ EV ವಾಹನಗಳಿಗೆ ಕಡಿಮೆ ಪ್ರೀಮಿಯಂ:

ನೂತನವಾಗಿ ಖರೀದಿ ಮಾಡುವ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ಪ್ರೀಮಿಯಂ ದರ ( 30 KW ಸಾಮರ್ಥ್ಯ) 5543 ರೂ. 30 ಕೆವಿ ಸಾಮರ್ಥ್ಯ ಮೀರಿದ ಹಾಗೂ 65 ಕೆವಿ ಸಾಮರ್ಥ್ಯದ ಒಳಗಿನ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ಪ್ರೀಮಿಯಂ 9044 ರೂ. ಆಗಲಿದೆ. 65 ಕೆವಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ವಿಮಾ ಪ್ರೀಮಿಯಂ ದರ 20,907 ರೂ.ಗೆ ನಿಗದಿ ಮಾಡಲಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಂಪರ್ ಕೊಡುಗೆ:

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಂಪರ್ ಕೊಡುಗೆ:

ನೂತನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಐದು ವರ್ಷದ ಮೋಟಾರು ವಾಹನ ಪ್ರೀಮಿಯಂ ದರ ( 3KV ) 2466 ರೂ. ನಿಗದಿ ಮಾಡಲಾಗಿದೆ. 3 KV ಸಾಮರ್ಥ್ಯಕ್ಕಿಂತಲೂ ಹೆಚ್ಚಿದ , 7 ಕೆವಿ ಒಳಗಿನ ಸಾಮರ್ಥ್ಯದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವಿಮಾ ಪ್ರೀಮಿಯಂ ದರ 3273 ರೂ. ನಿಗದಿ ಮಾಡಲಾಗಿದೆ. 7 ರಿಂದ 16 ಕೆವಿ ಸಾಮರ್ಥ್ಯದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಐದು ವರ್ಷದ ವಾಹನ ಪ್ರೀಮಿಯಂ ದರ 6260 ರೂ. ಹಾಗೂ ಅದಕ್ಕೂ ಮೇಲ್ಪಟ್ಟ ಸಾಮರ್ಥ್ಯದ ಇವಿ ವಾಹನಗಳಿಗೆ 12,849 ರೂ. ಗೆ ಪರಿಷ್ಕರಿಸಲಾಗಿದೆ. ಈ ಹಿಂದಿನ ಪ್ರೀಮಿಯಂಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳ ವಿಮಾ ಪ್ರೀಮಿಯಂ ದರ ಕಡಿಮೆ ಮಾಡಲಾಗಿದೆ.

Recommended Video

      ಹೆಚ್ಚು ಸಿಕ್ಸರ್ ಬಾರ್ಸಿರೋ ಆಟಗಾರ ಇವ್ರೆ ನೋಡಿ!! | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+