ಹಣಕಾಸು ಅವ್ಯವಹಾರ ಆರೋಪ: ವಿಡಿಯೋಕಾನ್ ಎಂಡಿ ವೇಣುಗೋಪಾಲ್ ಧೂತ್ ಮೇಲೆ FIR ದಾಖಲು
ನವದೆಹಲಿ, ಜೂನ್ 24: ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ಮೇಲೆ ಹಣಕಾಸು ಅವ್ಯವಹಾರ ಆರೋಪದ ಮೇರೆಗೆ ಸಿಬಿಐ ಎಫ್‌ಐಆರ್ ದಾಖಲಿಸಿದೆ.
Recommended Video
ಮೊಜಾಂಬಿಕ್‌ನಲ್ಲಿ ಕಂಪನಿಯ ತೈಲ ಮತ್ತು ಅನಿಲ ಆಸ್ತಿಗಳಿಗೆ ಹಣಕಾಸು ಒದಗಿಸುವಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಜೂನ್ 23 ರಂದು ವಿಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ವಿರುದ್ಧ ಪ್ರಕರಣ ದಾಖಲಿಸಿದೆ.

ಕಂಪನಿಗಳೊಂದಿಗೆ ಒಳ ಒಪ್ಪಂದ, ಲಾಭದ ಆಸಕ್ತಿ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಪರಿಚಿತ ಅಧಿಕಾರಿಗಳು, ಒಎನ್‌ಜಿಸಿ ವಿದೇಶ್, ಆಯಿಲ್ ಇಂಡಿಯಾ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ರಿಸೋರ್ಸಸ್ ಲಿಮಿಟೆಡ್ (ಬಿಪಿಸಿಎಲ್‌ನ ಅಂಗಸಂಸ್ಥೆ) ಮತ್ತು ಬ್ಯಾಂಕುಗಳ ಒಕ್ಕೂಟ ಮುಂದಾಳತ್ವದ ಎಸ್‌ಬಿಐ ಅಪರಿಚಿತ ಅಧಿಕಾರಿಗಳೊಂದಿಗೆ ಹಸ್ತಕ್ಷೇಪ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಿಡಿಯೋಕಾನ್‌ನ ಅಂಗಸಂಸ್ಥೆ ಮೊಜಾಂಬಿಕ್ ಮೂಲಕ ಡೀಲ್
ವಿಡಿಯೊಕಾನ್ ಹೈಡ್ರೋಕಾರ್ಬನ್ ಹೋಲ್ಡಿಂಗ್ಸ್ ಲಿಮಿಟೆಡ್ (ವಿಎಚ್‌ಹೆಚ್ಎಲ್) ನ ಅಂಗಸಂಸ್ಥೆಯಾದ ವಿಡಿಯೋಕಾನ್ ಮೊಜಾಂಬಿಕ್ ರೋವುಮಾ 1 ಲಿಮಿಟೆಡ್ (ವಿಎಂಆರ್ಎಲ್) ನ ನಿರ್ದೇಶಕರು ಮತ್ತು ಪ್ರವರ್ತಕರೊಂದಿಗೆ ಎಸ್‌ಬಿಐ ನೇತೃತ್ವದ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. 2008 ರಲ್ಲಿ ವಿಡಿಯೊಕಾನ್ ಇಂಡಸ್ಟ್ರೀಸ್ ಲಿಮಿಟೆಡ್ (ವಿಐಎಲ್) ನ ಅಂಗಸಂಸ್ಥೆಯಾದ ವಿಹೆಚ್‌ಹೆಚ್ಎಲ್, ಯುಎಸ್ ಮೂಲದ ಅನಾಡಾರ್ಕೊದಿಂದ ಮೊಜಾಂಬಿಕ್‌ನ ರೋವುಮಾ ಏರಿಯಾ 1 ಬ್ಲಾಕ್‌ನಲ್ಲಿ ತೈಲ ಮತ್ತು ಅನಿಲ ಬ್ಲಾಕ್‌ನಲ್ಲಿ 10 ಪರ್ಸೆಂಟ್‌ರಷ್ಟು "ಭಾಗವಹಿಸುವ ಆಸಕ್ತಿಯನ್ನು"(Participating interest) ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನು ನಂತರ ಒಎನ್‌ಜಿಸಿ ವಿದೇಶ್ ಲಿಮಿಟೆಡ್ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ 2014 ರ ಜನವರಿಯಲ್ಲಿ 2,519 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇತರೆ ಹಣಕಾಸಿನ ಸೌಲಭ್ಯವನ್ನು ಪಡೆದುಕೊಂಡ VHHL
ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಏಪ್ರಿಲ್ 2012 ರಲ್ಲಿ 2773.60 ಮಿಲಿಯನ್ ಡಾಲರ್ ಸ್ಟ್ಯಾಂಡ್‌ಬೈ ಲೆಟರ್ ಆಫ್ ಕ್ರೆಡಿಟ್ (ಎಸ್‌ಬಿಎಲ್‌ಸಿ) ಸೌಲಭ್ಯವನ್ನು ವಿಎಚ್‌ಎಚ್‌ಎಲ್‌ಗೆ ಮಂಜೂರು ಮಾಡಿತು. ವಿಚಾರಣೆಯ ಪ್ರಕಾರ, ಮೊಜಾಂಬಿಕ್, ಬ್ರೆಜಿಲ್ ಮತ್ತು ಇಂಡೋನೇಷ್ಯಾದಲ್ಲಿನ ತಮ್ಮ ಸಾಗರೋತ್ತರ ತೈಲ ಮತ್ತು ಅನಿಲ ಆಸ್ತಿಯ ಮೌಲ್ಯಮಾಪನ ಮತ್ತು ಅಭಿವೃದ್ಧಿಯ ಉದ್ದೇಶಕ್ಕಾಗಿ ಮತ್ತು ಈ ತೈಲ ಮತ್ತು ಅನಿಲ ಆಸ್ತಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಸೌಲಭ್ಯಗಳ ಮರುಹಣಕಾಸಿಗೆ ಸಂಬಂಧಿಸಿದಂತೆ ಇತರ ಹಣಕಾಸಿನ ಅವಶ್ಯಕತೆಗಳನ್ನು ನೀಡಲಾಗಿದೆ.
ತೈಲ ಮತ್ತು ಅನಿಲ ವ್ಯವಹಾರದಲ್ಲಿ ವ್ಯವಹರಿಸುವ ಕೇಮನ್ ದ್ವೀಪಗಳಲ್ಲಿ ನೋಂದಾಯಿತವಾದ ವಿಎಚ್‌ಹೆಚ್ಎಲ್, ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ (ವಿಐಎಲ್) ನ ಹಿಡುವಳಿ ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ. ವೇಣುಗೋಪಾಲ್ ಧೂತ್, ವಿಎಚ್‌ಎಚ್‌ಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

ಐಸಿಐಸಿಐ ಬ್ಯಾಂಕ್‌ನೊಂದಿಗೂ ವೇಣುಗೋಪಾಲ್ ಧೂತ್ ಅವ್ಯವಹಾರ ಆರೋಪ
ಹೌದು, ಈ ಹಿಂದೆ ಐಸಿಐಸಿಐ ಬ್ಯಾಂಕ್‌ನೊಂದಿಗೂ ಡೀಲ್ ಕುದುರಿಸಿ ಅವ್ಯವಹಾರದ ಆರೋಪಕ್ಕೆ ವಿಡಿಯೋಕಾನ್ ಎಂಡಿ ವೇಣುಗೋಪಾಲ್ ಧೂತ್ ಸಿಲುಕಿದ್ದರು. ಐಸಿಐಸಿಐ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್ ಅವಧಿಯಲ್ಲಿ ವಿಡಿಯೋಕಾನ್‌ಗೆ ಅಕ್ರಮವಾಗಿ ಸಾಲವನ್ನು ಮಂಜೂರು ಮಾಡಲಾಗಿತ್ತು.
ಬ್ಯಾಂಕ್ ನ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್ ಗೆ ಸುಮಾರು 3,250 ಕೋಟಿ ರುಪಾಯಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರದ ಹಗರಣ ಇದಾಗಿದೆ. ಐಸಿಐಸಿಐನ ಮಾಜಿ ಎಂಡಿ ಚಂದಾ ಕೊಚ್ಚಾರ್ ಹಾಗೂ ಕುಟುಂಬಕ್ಕೆ ಕಿಕ್ ಬ್ಯಾಕ್ ರೂಪದಲ್ಲಿ 500 ಕೋಟಿ ರು ಗೂ ಅಧಿಕ ಮೊತ್ತ ಸಿಕ್ಕಿದೆ. ಈ ಪ್ರಕರಣವು ವಿಚಾರಣೆ ನಡೆಯುತ್ತಿದ್ದು, ಈ ಹಿಂದೆ ಚಂದಾ ಕೊಚ್ಚರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ 78 ಕೋಟಿ ರುಪಾಯಿ ವಶಪಡಿಸಿಕೊಂಡಿತ್ತು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications