Get Updates
Get notified of breaking news, exclusive insights, and must-see stories!

7 ಮಿಲಿಯನ್ ಡಾಲರ್ ಹೂಡಿಕೆಗೆ ವೇದಿಕೆ ಸಿದ್ಧಪಡಿಸಿದ ಉದ್ಯಮಿ ಶಶಿ ರೆಡ್ಡಿ: ffreedom ಅಪ್ಲಿಕೇಶನ್‌ ಬಾಸ್ ವಾಲಾ ತೆಕ್ಕೆಗೆ!

ದೇಶದ ಪ್ರಮುಖ ಹೂಡಿಕೆದಾರರು ಹಾಗೂ ಉದ್ಯಮಿ ಶಶಿ ರೆಡ್ಡಿ ಅವರು ಇದೀಗ ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಶಶಿ ರೆಡ್ಡಿ ಅವರು ಇಲ್ಲಿಯ ವರೆಗೆ ನಾಲ್ಕು ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಿದ್ದು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇದೀಗ ಉದ್ಯಮಿ ಶಶಿ ರೆಡ್ಡಿ ಅವರು ಸ್ಥಾಪಿಸಿರುವ ಬಾಸ್ ವಾಲಾ ಎಡ್‌ಟೆಕ್ ಪ್ಲಾಟ್‌ಫಾರ್ಮ್ ffreedomಗೆ ಲಗ್ಗೆ ಇರಿಸಿದೆ. ffreedomನ ಮೂಲಕ ಹೂಡಿಕೆದಾರರಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಶಶಿ ಅವರು ಮುಂದಾಗಿದ್ದಾರೆ. ಈ ಅಪ್ಲಿಕೇಶನ್ ಪಡೆದುಕೊಳ್ಳುವ ಸಂಬಂಧ ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪ್ರಾರಂಭಿಕ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಶಶಿ ರೆಡ್ಡಿ ಅವರು ಅಮೆರಿಕನ್‌ ಡಾಲರ್‌ 7 ಮಿಲಿಯನ್ ಹೂಡಿಕೆ ಮಾಡಿ ವ್ಯವಹಾರವನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಿದ್ದಾರೆ. ಇದಕ್ಕೆ ವೇದಿಕೆಯನ್ನು ನಿರ್ಮಿಸಲು ಬಾಸ್ ವಾಲಾ ffreedom ಅಪ್ಲಿಕೇಶನ್ ಅನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ffreedom ಎನ್ನುವ ಅಪ್ಲಿಕೇಷನ್ ಜೀವನಾಧಾರ ಶಿಕ್ಷಣದೊಂದಿಗೆ ಬಾಸ್‌ನ ವಿವಿಧ ವಿಷಯಗಳ ಪರಿಣಿತರು ಹಾಗೂ ವಿಷಯ ತಜ್ಞರ ಸಹಕಾರವನ್ನು ಸಹ ನೀಡುತ್ತದೆ. ಸಾವಿರಾರು ತಜ್ಞರಿಗೆ ಇದರ ಉಪಯೋಗ ಸಿಗಲಿದೆ. ಅಲ್ಲದೆ ಎರಡನೇ ಹಂತದ ನಗರಗಳು ಹಾಗೂ ಮೂರನೇ ಹಂತದ ನಗರಗಳಲ್ಲಿರುವ ಉದ್ಯಮಿಗಳ ಅಭಿವೃದ್ಧಿಗೆ ನೆರವಾಗಲಿದೆ. ಈ ಉದ್ಯಮಿಗಳಿಗೆ ಅವಶ್ಯವಿರುವ ಸಲಹೆಗಳು ಸಿಗಲಿವೆ. ಅಲ್ಲದೆ ಉದ್ಯಮಿಗಳಿಗೆ ಯಶಸ್ವಿ ವ್ಯವಹಾರವನ್ನು ನಡೆಸಲು ಸಂಪನ್ಮೂಲ ಹಾಗೂ ಅನುಭವ ಸಿಗಲಿದೆ.

Businessman Shashi Reddy sets stage for 7 million investment boss Wala takes over ffreedom app

ಜೆಇಇ ಮತ್ತು ಸರ್ಕಾರಿ ಪರೀಕ್ಷೆಗಳಿಗೆ ನೂರಾರು ವೇದಿಕೆಗಳು ಇವೆ. ಆದರೆ, ಭಾರತಕ್ಕೆ ಬೇಕಾಗಿರುವುದು ಉದ್ಯೋಗವನ್ನು ಒದಗಿಸುವ ಮತ್ತು ಆದಾಯವನ್ನು ಗಳಿಸುವ ವ್ಯವಹಾರಗಳನ್ನು ನಿರ್ಮಿಸುವವರು. ಬಾಸ್ ಕಂಪನಿಯು ಈ ರೀತಿಯ ವೇದಿಕೆಯು ನಿರ್ಮಸುತ್ತಿದೆ ಎಂದು ಬಾಸ್ ವಾಲಾದ ಸ್ಥಾಪಕರು ಹಾಗೂ ಸಿಇಒ ಶಶಿ ರೆಡ್ಡಿ ಅವರು ಹೇಳಿದ್ದಾರೆ.

ಶಶಿ ರೆಡ್ಡಿ ಹಾಗೂ ಅವರ ತಂಡದಿಂದ $7 ಮಿಲಿಯನ್ (ಸುಮಾರು ರೂ. 60 ಕೋಟಿ) ಆರಂಭಿಕ ಹೂಡಿಕೆ ಮಾಡುವ ಯೋಜನೆ ಇದೆ. ಬಾಸ್ ವಾಲಾದ ಮೂಲಕ ಸಾವಿರಾರು ಉದ್ಯಮಿಗಳು ಕೌಶಲ್ಯಗಳನ್ನು ಪಡೆಯಲು ಮತ್ತು ವ್ಯವಹಾರವನ್ನು ಪ್ರಾರಂಭಿಸಲು ಸಹಕಾರಿಯಾಗಿದೆ. ಅಲ್ಲದೆ ವ್ಯವಹಾರಗಳನ್ನು ಬೆಳೆಸುವುದಕ್ಕೆ ಅಗತ್ಯವಿರುವ ಸಲಹೆಯನ್ನು ಪಡೆಯಲು ಸಮಗ್ರ ವೇದಿಕೆಯನ್ನು ಕಲ್ಪಿಸುತ್ತದೆ.

ಈ ವೇದಿಕೆಯು ಮುಖ್ಯವಾಗಿ ಡಿಜಿಟಲ್ ವ್ಯವಹಾರಗಳು, ಮನೆಯಿಂದಲೇ ವ್ಯವಹಾರ, ಸಣ್ಣ ಪ್ರಮಾಣದ ಉತ್ಪಾದನೆ, ಕರಕುಶಲ ವಸ್ತುಗಳು, ಕೃಷಿ, ಪಶುಸಂಗೋಪನೆ, ಚಿಲ್ಲರೆ ವ್ಯಾಪಾರ ಹಾಗೂ ಆಹಾರ ವ್ಯವಹಾರಗಳು ಸೇರಿದಂತೆ 12ಕ್ಕೂ ಹೆಚ್ಚು ಡಿಜಿಟಲ್‌ ಉದ್ಯೋಗ ಸೇವೆಗಳನ್ನು ನೀಡುತ್ತವೆ. ಹೆಚ್ಚಿನ ಬಂಡವಾಳ ಹೂಡಿಕೆಯಿಲ್ಲದೆ ಹಾಗೂ ಕೇವಲ 2ರಿಂದ 3 ಜನರನ್ನು ನೇಮಿಸಿಕೊಳ್ಳುವ ಮೂಲಕ ದೊಡ್ಡ ನಗರಗಳಿಗೆ ಹೋಗದೆ ಸಣ್ಣ ಪಟ್ಟಣದಲ್ಲಿ ಉತ್ತಮ ಆದಾಯ ಗಳಿಸುವ ಅಮೋಘ ಅವಕಾಶ ಇದಾಗಿದೆ. ನೀವು http://bosswallah.com ನಲ್ಲಿ ಬಾಸ್ ವಲ್ಲಾಹ್‌ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಉದ್ಯಮಿ ಶಶಿ ರೆಡ್ಡಿ ಅವರ ಬಗ್ಗೆ

ಶಶಿ ರೆಡ್ಡಿ ಅವರು ಫಿಲಡೆಲ್ಫಿಯಾ ಮೂಲದ ಆರಂಭಿಕ ಹಂತದ ಸಾಹಸೋದ್ಯಮ ಬಂಡವಾಳ ಸಂಸ್ಥೆಯಾದ SRI ಕ್ಯಾಪಿಟಲ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಅಲ್ಲದೇ ಅವರು ವೆಸ್ಟ್‌ಬ್ರಿಡ್ಜ್ ಕ್ಯಾಪಿಟಲ್‌ನ ಸಲಹೆಗಾರರೂ ಆಗಿದ್ದಾರೆ.

ಈ ಹಿಂದೆ ಶಶಿ ರೆಡ್ಡಿ ಅವರು ಭಾರತ, ಯುಎಸ್ ಮತ್ತು ಯುಕೆಯಲ್ಲಿ ಕಾರ್ಯ ನಿರ್ವಹಿಸುವ ಹಾಗೂ ವಿಶ್ವದ ಅತಿದೊಡ್ಡ ಸಾಫ್ಟ್‌ವೇರ್ ಪರೀಕ್ಷಾ ಕಂಪನಿಯಾದ ಆಪ್‌ಲ್ಯಾಬ್ಸ್‌ನ ಸ್ಥಾಪಕ ಮತ್ತು ಸಿಇಒ ಸಹ ಆಗಿದ್ದರು. ಆಪ್‌ಲ್ಯಾಬ್ಸ್‌ಗೆ ವೆಸ್ಟ್‌ಬ್ರಿಡ್ಜ್ ಕ್ಯಾಪಿಟಲ್ ಮತ್ತು ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ ಹಣಕಾಸು ಒದಗಿಸಿವೆ. ಸಿಎಸ್‌ಸಿ (ಈಗ ಡಿಎಕ್ಸ್‌ಸಿ) ಆಪ್‌ಲ್ಯಾಬ್ಸ್ ಅನ್ನು ಸ್ವಾಧೀನಪಡಿಸಿಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+