• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Asian Rich List 2022: ಬ್ರಿಟಿಷ್ ಏಷ್ಯನ್ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ

|
Google Oneindia Kannada News

ನವದೆಹಲಿ, ನವೆಂಬರ್ 25: ಭಾರತೀಯ ಮೂಲದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಧರ್ಮಪತ್ನಿ ಅಕ್ಷತಾ ಮೂರ್ತಿ ಅವರು ಬ್ರಿಟಿಷ್ ಏಷ್ಯನ್ ಶ್ರೀಮಂತರ ಪಟ್ಟಿ 2022ರಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ. ಸದ್ಯ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗಿರುವ ಈ ಜೋಡಿ ಬ್ರಿಟಷ್ ಭಾರತೀಯರಲ್ಲಿ ಶ್ರೀಮಂತಿರ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದ್ದಾರೆ. ಈ ದಂಪತಿಗಳ ಸರ್ವ ಸಂಪತ್ತು ಒಟ್ಟು 790 ಮಿಲಿಯನ್ ಪೌಂಡ್‌ಗಳು ಎಂದು ಅಂದಾಜಿಸಲಾಗಿದೆ.

ಬ್ರಿಟನ್‌ನ ಏಷ್ಯಾದ ಶ್ರೀಮಂತರ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 13.5 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಈ ಬಾರಿ ಏಷ್ಯಾದ ಶ್ರೀಮಂತರ ಒಟ್ಟು ಆಸ್ತಿ ಮೌಲ್ಯ 113.2 ಬಿಲಿಯನ್ ಪೌಂಡ್‌ನಷ್ಟು ಹೆಚ್ಚಾಗಿದೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಿಢೀರ್ ಉಕ್ರೇನ್ ಭೇಟಿ, ಕಾರಣಬ್ರಿಟನ್ ಪ್ರಧಾನಿ ರಿಷಿ ಸುನಕ್ ದಿಢೀರ್ ಉಕ್ರೇನ್ ಭೇಟಿ, ಕಾರಣ

ಹಿಂದೂಜಾ ಕುಟುಂಬ ಅಗ್ರಸ್ಥಾನ

ಹಿಂದೂಜಾ ಕುಟುಂಬ ಅಗ್ರಸ್ಥಾನ

ಬಿಲಿಯೇನೆರ್ ಬ್ರಿಟನ್‌ನ ಶ್ರೀಮಂತ ಏಷ್ಯನ್ ಕುಟುಂಬಗಳ ಪಟ್ಟಿಯಲ್ಲಿ ಈ ಬಾರಿ ಹಿಂದೂಜಾ ಕುಟುಂಬದಿಂದ ಮೊದಲ ಸ್ಥಾನದಲ್ಲಿದ್ದಾರೆ. ಹಿಂದೂಜಾ ಕುಟುಂಬ ಸತತ 8ನೇ ಬಾರಿಗೆ ಈ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹಿಂದೂಜಾ ಕುಟುಂಬದ ಸಂಪತ್ತು ಕೂಡ 3 ಬಿಲಿಯನ್ ಪೌಂಡ್‌ಗಳಷ್ಟು ಹೆಚ್ಚಾಗಿದೆ. ಹಿಂದುಜಾ ಕುಟುಂಬ ಈಗ £30.5 ಬಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಏಷ್ಯನ್ ಬಿಸಿನೆಸ್ ಅವಾರ್ಡ್ಸ್ ಪ್ರದಾನ

ಏಷ್ಯನ್ ಬಿಸಿನೆಸ್ ಅವಾರ್ಡ್ಸ್ ಪ್ರದಾನ

ಬುಧವಾರ ರಾತ್ರಿ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಪಾರ್ಕ್ ಪ್ಲಾಜಾ ಹೋಟೆಲ್‌ನಲ್ಲಿ 24ನೇ ವಾರ್ಷಿಕ ಏಷ್ಯನ್ ಬಿಸಿನೆಸ್ ಅವಾರ್ಡ್ಸ್ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿಯೇ ಲಂಡನ್ ಮೇಯರ್ ಸಾದಿಕ್ ಖಾನ್ ಅವರು ಏಷ್ಯನ್ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಪಟ್ಟಿಯ ಪ್ರತಿಯನ್ನು ಹಿಂದೂಜಾ ಗ್ರೂಪ್‌ನ ಸಹ-ಅಧ್ಯಕ್ಷ ಗೋಪಿಚಂದ್ ಹಿಂದೂಜಾ ಅವರ ಪುತ್ರಿ ರಿತು ಛಾಬ್ರಿಯಾ ಅವರಿಗೆ ನೀಡಲಾಯಿತು.

ಇತಿಹಾಸ ಸೃಷ್ಟಿಸಿದ ಸುನಕ್

ಇತಿಹಾಸ ಸೃಷ್ಟಿಸಿದ ಸುನಕ್

ಕಳೆದ ತಿಂಗಳು ಅಕ್ಟೋಬರ್ 25ರಂದು ಲಿಜ್ ಟ್ರಸ್ ಹಠಾತ್ ರಾಜೀನಾಮೆ ಬಳಿಕ ನಂತರ ರಿಷಿ ಸುನಕ್ ಭಾರತೀಯ ಮೂಲದ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಬ್ರಿಟನ್‌ ಪ್ರಧಾನಿಯಾದರು. ಅಂದಿನಿಂದ, ಅವರು ನಿರಂತರವಾಗಿ ಹೊಸ ಇತಿಹಾಸವನ್ನು ರಚಿಸುತ್ತಿದ್ದಾರೆ. 42 ವರ್ಷದ ಸುನಕ್, ಹೂಡಿಕೆ ಬ್ಯಾಂಕರ್ ಆಗಿ ಬದಲಾಗಿರುವ ರಾಜಕಾರಣಿ, 210 ವರ್ಷಗಳಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಇದರೊಂದಿಗೆ ಬ್ರಿಟನ್ ಇತಿಹಾಸದಲ್ಲಿ ಮೊದಲ ಹಿಂದೂ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿಯವರ ತಂದೆ ಕರ್ನಾಟಕದ ಎನ್‌ಆರ್ ನಾರಾಯಣ ಮೂರ್ತಿ ಅವರ ಮಗಳು. ಸದ್ಯ ಅಕ್ಷತಾ ಮೂರ್ತಿ ಭಾರತೀಯ ಐಟಿ ಕಂಪನಿ ಇನ್ಫೋಸಿಸ್‌ನ ಸಹ ಸಂಸ್ಥಾಪಕರಾಗಿದ್ದಾರೆ.

ಲೋಹಿಯಾ ಆಸ್ತಿ ಸಂಪತ್ತು ಹೆಚ್ಚಳ

ಲೋಹಿಯಾ ಆಸ್ತಿ ಸಂಪತ್ತು ಹೆಚ್ಚಳ

ಈ ಬಾರಿ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ 16 ಬಿಲಿಯನೇರ್‌ಗಳಿದ್ದು, ಇದು ಕಳೆದ ವರ್ಷಕ್ಕಿಂತ 1 ಹೆಚ್ಚಾಗಿದೆ. ಈ ಹೆಚ್ಚಿನ ಬಿಲಿಯನೇರ್‌ಗಳ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ ಅಥವಾ ಹಾಗೆಯೇ ಉಳಿದಿದೆ. ಈ ವರ್ಷ, ಶ್ರೀಪ್ರಕಾಶ್ ಲೋಹಿಯಾ ಮತ್ತು ಅವರ ಕುಟುಂಬಕ್ಕೆ ಗರಿಷ್ಠ ಸಂಪತ್ತು ಹೆಚ್ಚಾಗಿದೆ. ಕಳೆದ ವರ್ಷ 4 ಶತಕೋಟಿ ಪೌಂಡ್ ಆಸ್ತಿ ಹೊಂದಿದ್ದ ಲೋಹಿಯಾ ಕುಟುಂಬ ಈಗ 8.8 ಶತಕೋಟಿ ಪೌಂಡ್‌ಗಳಿಂದ ಎರಡು ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ.

English summary
British Prime Minister Rishi Sunak and his wife Akshata Murty have made their debut on the UK's 'Asian Rich List 2022' topped by the Hinduja family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X