• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಷ್‌ ತ್ರೈಮಾಸಿಕ ಫಲಿತಾಂಶ: ಶೇ. 0.3ರಷ್ಟು ತೆರಿಗೆ ಪೂರ್ವ ನಷ್ಟ

|
Google Oneindia Kannada News

ಬೆಂಗಳೂರು: ತಂತ್ರಜ್ಞಾನ ಮತ್ತು ಸೇವೆಗಳ ಮುಂಚೂಣಿಯ ಪೂರೈಕೆದಾರ ಸಂಸ್ಥೆಯಾದ ಬಾಷ್ ಲಿಮಿಟೆಡ್ 2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 992 ಕೋಟಿ ರೂ.ಗಳ ಒಟ್ಟಾರೆ ಆದಾಯವನ್ನು ಕಾರ್ಯಾಚರಣೆಗಳಿಂದ ಗಳಿಸಿರುವುದಾಗಿ ಪ್ರಕಟಿಸಿದೆ. ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಲ್ಲಾ ವಿಭಾಗಗಳ ಮಾರಾಟದಲ್ಲಿನ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.64 ರಷ್ಟು ಇಳಿಕೆಯಾಗಿದೆ.

   ಯಾರಿಗೆ ಒಲಿಯಲಿದೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗುವ ಅವಕಾಶ | Oneindia Kannada

   ತೆರಿಗೆ ಪೂರ್ವ ನಷ್ಟವು 3 ಕೋಟಿ ರೂಪಾಯಿಗಳಾಗಿದೆ. ಇದು ಕಾರ್ಯಾಚರಣೆಯ ಶೇ.0.3 ರಷ್ಟು ಒಟ್ಟು ಆದಾಯವಾಗಿದೆ. ಈ ತ್ರೈಮಾಸಿಕದಲ್ಲಿ ಲಾಕ್ ಡೌನ್ ಇದ್ದಿದ್ದರಿಂದ ಈ ಪರಿಣಾಮಗಳು ಉಂಟಾಗಿವೆ.

   ಐಸಿಐಸಿಐ ಬ್ಯಾಂಕ್ ತ್ರೈಮಾಸಿಕ ಲಾಭ ಶೇ. 36ರಷ್ಟು ಏರಿಕೆಐಸಿಐಸಿಐ ಬ್ಯಾಂಕ್ ತ್ರೈಮಾಸಿಕ ಲಾಭ ಶೇ. 36ರಷ್ಟು ಏರಿಕೆ

   ಭಾರತೀಯ ಆಟೋಮೋಟಿವ್ ಮಾರುಕಟ್ಟೆಯಲ್ಲಿ ರಚನಾತ್ಮಕ ಬದಲಾವಣೆ ಮುಂದುವರಿದಿದೆ. ಬಾಷ್ ಲಿಮಿಟೆಡ್ ಪುನರ್ ರಚನೆ, ಪುನರ್ ಕೌಶಲ್ಯ ಮತ್ತು ಇನ್ನಿತರೆ ರೂಪಾಂತರಿತ ಯೋಜನೆಗಳಿಗೆ ಬಂಡವಾಳ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ. ಹೆಚ್ಚುವರಿಯಾಗಿ 197 ಕೋಟಿ ರೂಪಾಯಿಗಳ ಅವಕಾಶವನ್ನು 2020ರ ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕಕ್ಕೆ ಕಲ್ಪಿಸಿದೆ.

   ಕಾರ್ಯಾಚರಣೆಗಳಿಂದ ಕಳೆದ ಸಾಲಿಗಿಂತ ಒಟ್ಟು ಆದಾಯದಲ್ಲಿ ಶೇ.29.9 ರಷ್ಟು ಕುಸಿತವಾಗಿದೆ. ಇನ್ನು ಒಟ್ಟು ಆದಾಯದ ತೆರಿಗೆಪೂರ್ವ ಲಾಭ(ಪಿಬಿಟಿ) 1,636 ಕೋಟಿ ರೂ.ಗಳಾಗಿದೆ. 2019-20 ನೇ ಸಾಲಿನಲ್ಲಿ ಒಟ್ಟು ಆದಾಯದ ಪಿಬಿಟಿ ಶೇ.16.6 ರಷ್ಟು ದಾಖಲಾಗಿದೆ.

   ಅಸಾಧಾರಣವಾದ ಉತ್ಪನ್ನದಿಂದ ತೆರಿಗೆ ಪೂರ್ವ ನಷ್ಟ(ಪಿಬಿಟಿ) 200 ಕೋಟಿ ರೂಪಾಯಿ ಮತ್ತು ತೆರಿಗೆ ನಂತರದ ನಷ್ಟವು (ಪಿಎಟಿ) 120 ಕೋಟಿ ರೂಪಾಯಿಗಳಾಗಿದೆ. ಇನ್ನು ಅಸಾಧಾರಣ ಉತ್ಪನ್ನಗಳು ಕಾರ್ಯಾಚರಣೆಗಳ ಒಟ್ಟು ಆದಾಯ ಶೇ.2.7 ರಷ್ಟು ಪಿಎಟಿಯನ್ನು ದಾಖಲಿಸಿದೆ.

   ಆಟೋಮೋಟಿವ್ ಉದ್ಯಮದಲ್ಲಿನ ಹಿನ್ನಡೆ ಮತ್ತು ಕೋವಿಡ್-19 ಹಿನ್ನೆಲೆಯಲ್ಲಿ ಬಾಷ್ ಲಿಮಿಟೆಡ್ ನ ಮಾರಾಟಗಳ ಮೇಲೆ ಪರಿಣಾಮ ಉಂಟಾಗಿದೆ. ಇದರಿಂದಾಗಿ 2020-21 ನೇ ಸಾಲಿನ ಮೊದಲ ತ್ರೈಮಾಸಿಕದ ಮಾರಾಟದಲ್ಲಿ ಶೇ.68.2 ರಷ್ಟು ಕುಸಿತ ಕಂಡುಬಂದಿದೆ.

   English summary
   Bosch limited, a leading supplier to technology and services posted total revenue from operations Of INR 992 Crores In Q1 Fy 2020-21, a decline of 64 Percent.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X