• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಷೇರು ಮಾರುಕಟ್ಟೆಯಲ್ಲಿ ತಲ್ಲಣ, 850 ಅಂಶ ಕುಸಿದ ಸೆನ್ಸೆಕ್ಸ್

|

ಮುಂಬೈ, ಅಕ್ಟೋಬರ್ 4: ಭಾರತದ ಷೇರು ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಗುರುವಾರವೂ ಮುಂದುವರಿದಿದೆ. ಕಳೆದ ಹತ್ತು-ಹನ್ನೆರಡು ದಿನಗಳಲ್ಲಿ ಹೂಡಿಕೆದಾರರು ಲಕ್ಷಾಂತರ ಕೋಟಿ ರುಪಾಯಿ ಕಳೆದುಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಮೂವತ್ತು ಷೇರುಗಳ ಗುಚ್ಛ ಹೊಂದಿರುವ ಸೆನ್ಸೆಕ್ಸ್ 850 ಅಂಶಗಳ ಕುಸಿತ ಕಂಡಿತು.

ಇನ್ನು ಐವತ್ತು ಷೇರುಗಳ ಗುಚ್ಛವಿರುವ ನಿಫ್ಟಿಯಲ್ಲಿ 250 ಅಂಶ ಇಳಿಕೆಯಾಗಿ, ಒಟ್ಟಾರೆ ಸೂಚ್ಯಂಕ 10,600 ಸುತ್ತ ಸುಳಿದಾಡಲು ಆರಂಭಿಸಿದೆ. ನಿಫ್ಟಿಯ ಐವತ್ತು ಷೇರುಗಳ ಪೈಕಿ 41 ಇಳಿಕೆ ದಾಖಲಿಸಿವೆ. ಐಷರ್ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಟಿಸಿಎಸ್, ಗೇಲ್ ಷೇರುಗಳು ಇಳಿಕೆಯಾಗಿವೆ.

ಕುಸಿಯುತ್ತಿರುವ ರುಪಾಯಿ, ಏರುತ್ತಿರುವ ತೈಲದಿಂದ ನಲುಗಿದ ಷೇರುಪೇಟೆ

ಆರ್ ಬಿಐ ನೀತಿ ಸಭೆಯ ನಿರ್ಧಾರವು ಶುಕ್ರವಾರ ಪ್ರಕಟವಾಗುವುದರಿಂದ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡುತ್ತಿದ್ದಾರೆ. ಈ ಮಧ್ಯೆ ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯದ ಕುಸಿತ ಮತ್ತೆ ಮುಂದುವರಿದಿದೆ. ಗುರುವಾರದಂದು ಮತ್ತೊಂದು ಸಾರ್ವಕಾಲಿಕ ದಾಖಲೆಯ ಇಳಿಕೆ ಕಂಡು, 73.77 ರುಪಾಯಿ ತಲುಪಿದೆ. ಸದ್ಯಕ್ಕೆ ಡಾಲರ್ ಮೌಲ್ಯ ಇತರ ದೇಶಗಳ ಕರೆನ್ಸಿ ವಿರುದ್ಧವೂ ಮೇಲ್ಮಟ್ಟದಲ್ಲೇ ವಹಿವಾಟು ನಡೆಸುತ್ತಿದೆ.

ಸರಕಾರ ಮಧ್ಯಪ್ರವೇಶಿದರೂ, ಭರವಸೆ ನೀಡಿದರೂ ಕೊನೆಗೆ ತೈಲದ ವಿಚಾರವಾಗಿ ಸಕಾರಾತ್ಮಕ ಎನಿಸುವಂಥ ವದಂತಿ ಹಬ್ಬಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇನ್ನು ಇಟಲಿ ಮೇಲೆ ಹೆಚ್ಚುತ್ತಿರುವ ಸಾಲದ ಹೊರೆಯಿಂದ ಯುರೋ ಮೇಲೆ ಆಗುತ್ತಿರುವ ಒತ್ತಡದ ಕಾರಣಕ್ಕೆ ರುಪಾಯಿ ಮೌಲ್ಯ ಮತ್ತಷ್ಟು ದುರ್ಬಲ ಆಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಯಾವಾಗ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುತ್ತಾ ಸಾಗುತ್ತಿದೆಯೋ ವಿದೇಶಿ ಹೂಡಿಕೆದಾರರು ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿರುವುದು ಮತ್ತಷ್ಟು ಒತ್ತಡಕ್ಕೆ ಕಾರಣವಾಗಿದೆ.

ಕುಸಿತದ ಹಾದಿಯಲ್ಲಿ ಹೂಡಿಕೆದಾರರ ಸಂಪತ್ತು ಕರಗಿಸಿದ ಸೆನ್ಸೆಕ್ಸ್, ನಿಫ್ಟಿ

"ಷೇರು ಮಾರುಕಟ್ಟೆಯ ವಾತಾವರಣ ಇನ್ನೂ ಗೊಂದಲದಲ್ಲೇ ಇದೆ. ಬೆಲೆ ಕುಸಿತ ಕಂಡಿರುವ ಅಗ್ರಮಾನ್ಯ ಕಂಪನಿಗಳು ಷೇರುಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಸಾರ್ವಜನಿಕ ಸ್ವಾಮ್ಯದ ಆಯ್ದ ಷೇರುಗಳು ಈಗಲೇ ಹೂಡಿಕೆಗೆ ಸೂಕ್ತವಾಗಿಯೇ ಇವೆ. ದೀರ್ಘಾವಧಿ ಹೂಡಿಕೆ ಮಾಡಬೇಕು ಅಂದುಕೊಳ್ಳುವವರಿಗೆ ಇದು ಒಂದು ಅವಕಾಶ. ಆದರೂ ಸಣ್ಣ ಪ್ರಮಾಣದಲ್ಲಿಯೇ ಖರೀದಿಸಿ ಆರಂಭಿಸಬಹುದು. ಅಲ್ಪಾವಧಿಯಲ್ಲೇ ಲಾಭ ಬಂದರೆ ನಗದು ಮಾಡಿಕೊಂಡು ಹೊರಬರುವುದು ಉತ್ತಮ" ಎಂದು ಒನ್ಇಂಡಿಯಾ ಕನ್ನಡ ಜತೆಗೆ ತಮ್ಮ್ ಅಭಿಪ್ರಾಯ ಹಂಚಿಕೊಂಡರು ಷೇರು ದಲ್ಲಾಳಿಗಳಾದ ಕೆ.ಜಿ.ಕೃಪಾಲ್.

5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

ಮುಂದುವರಿದು, ಷೇರುಗಳಲ್ಲಿ ಎಸ್ ಐಪಿ ಮಾದರಿಯಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಅವಕಾಶ ಎಂದು ಅವರು ಸಲಹೆ ಮಾಡಿದರು.

English summary
Domestic stock markets started Thursday's session on a negative note, with the BSE benchmark Sensex cracking over 800 points as rupee hit another low amid weak global cues and fears of widening current account deficit (CAD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X