Mantri Mall Reopened: ಶಾಪಿಂಗ್ ಪ್ರಿಯರ ಖುಷಿಯ ತಾಣ ಮಂತ್ರಿ ಮಾಲ್ ಪುನಾರಂಭ- ಗ್ರಾಹಕರ ಸಂಖ್ಯೆ ಹೆಚ್ಚಳ ಸಾಧ್ಯತೆ
ಬೆಂಗಳೂರು ಮೇ 18: ಕಳೆದೊಂದು ವಾರದಿಂದ ಬಂದ್ ಆಗಿದ್ದ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಮಲ್ಲೇಶ್ವರದ ಮಂತ್ರಿ ಮಾಲ್ ಶುಕ್ರವಾರದಿಂದ ಪುನರಾಂಭಗೊಂಡಿದೆ. ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಅಕ್ಷಯ ತೃತೀಯಯದಂದು (ಮೇ 10ರ ಶುಕ್ರವಾರ) ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿ ಸೀಜ್ ಮಾಡಿದರು.
ಬಿಬಿಎಂಪಿಯ ಕ್ರಮವನ್ನು ವಿರೋಧಿಸಿ ಮಂತ್ರಿ ಮಾಲ್‌ನ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋಗಿದ್ದರು. ಕಳೆದ ಗುರುವಾರ ಹೈಕೋರ್ಟ್ ಜುಲೈ 31ರ ಒಳಗಾಗಿ 20 ಕೋಟಿ ಬಾಕಿ ಪಾವತಿ ಮಾಡುವಂತೆ ಆದೇಶಿಸುವುದಾರೊಂದಿಗೆ ಮಾಲ್ ತೆರೆಯುವುದಕ್ಕೆ ಅವಕಾಶ ನೀಡಿದೆ.

ಮಂತ್ರಿ ಮಾಲ್ 50 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು ಈ ಪೈಕಿ 20 ಕೋಟಿ ರೂ.ಗಳನ್ನ ಜುಲೈ 31 ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಲ್ ತೆರೆಯಲು ಸೂಚನೆ ನೀಡಲಾಗಿದೆ. 250ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಹಿನ್ನೆಲೆಯಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಮಾಲ್ ತೆರೆಯುವಂತೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಮಂತ್ರಿ ಮಾಲ್ ಆಡಳಿತ ಮಂಡಳಿಗೆ ಬೀಗದ ಕೂ ಹಸ್ತಾಂತರಿಸಿದ್ದಾರೆ . ಮಾಲ್‌ನ ವ್ಯಾಪಾರಿಗಳು ಶುಕ್ರವಾರ ಬೆಳಗ್ಗೆ ಅಂಗಡಿ ಮಳಿಗೆಗಳನ್ನು ಸ್ವಚ್ಚಗೊಳಿಸುವುದರಲ್ಲಿ ನಿರತರಾಗಿದ್ದರು. ಮಾಲ್ ಆರಂಭಗೊಳ್ಳುತ್ತಿದಂತೆ ಗ್ರಾಹಕರು ಎಂದಿನಂತೆ ಆಗಮಿಸಿ ಖರೀದಿಯಲ್ಲಿ ತೊಡಗಿದ್ದಾರೆ.

ಹಲವಾರು ಬಾರಿ ಮಾಲ್‌ಗೆ ನೋಟೀಸ್
ಈ ಹಿಂದೆಯು ಕೆಲವು ಬಾರಿ ಇದೇ ತೆರಿಗೆ ಬಾಕಿ ಪಾವತಿಸದ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ನಾಲ್ಕು ಬಾರಿ ಮಂತ್ರಿ ಮಾಲ್‌ಗೆ ಬೀಗ ಜಡಿಯಲಾಗಿತ್ತು. ಆದರೂ ಬುದ್ಧಿ ಕಲಿಯದ ಮಂತ್ರಿ ಮಾಲ್ ಆಡಳಿತ ಮಂಡಳಿ ತನ್ನ ತೆರಿಗೆ ಪಾವತಿಯಲ್ಲಿ ನಿರ್ಲಕ್ಷ್ಯ ಮುಂದುವರೆಸಿತ್ತು.
ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್ 06 ರ ಸುತ್ತೊಲೆ ಪ್ರಕಾರ, ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ಪರವಾನಗಿಯನ್ನು ಅಮಾನತು ಮಾಡಲಾಗಿದೆ ಎಂದು ಮಂತ್ರಿ ಮಾಲ್‌ನ ಮುಖ್ಯ ದ್ವಾರಕ್ಕೆ ಬೀಗ ಹಾಕುವುದರೊಂದಿಗೆ ಬಿಬಿಎಂಪಿ ನೋಟಿಸ್ ಅಂಟಿಸಲಾಗಿತ್ತು.
ತೆರಿಗೆ ಬಾಕಿ ಉಳಸಿಕೊಂಡಿದ್ದ ಮಂತ್ರಿ ಮಾಲ್‌ಗೆ ಬಿಬಿಎಂಪಿ ಒನ್‌ಟೈಮ್ ಪೇಪೆಂಟ್‌ಗೆ ಅವಕಾಶ ನೀಡಿತ್ತು. ಆದರೂ ಸಹಿತ ತೆರಿಗೆ ಪಾವತಿಸದೇ ನಿರ್ಲಕ್ಷ್ಯ ವಹಿಸಿತ್ತು. ಹೀಗಾಗಿ ಬಿಬಿಎಂಪಿಯು ಮಾಲ್ ಅನ್ನು ಸೀಲ್ ಮಾಡಿ ಬಾಗಿಲು ಹಾಕಿತು.
ಶಾಪಿಂಗ್ ಪ್ರಿಯರು ಖುಷ್
ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಮಂತ್ರಿ ಮಾಲ್‌ಗೆ ಶಾಪಿಂಗ್ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲದೆ ಬೆಂಗಳೂರಿನಲ್ಲಿ ಮಂತ್ರಿ ಮಾಲ್‌ನಲ್ಲೇ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮಾಲ್ ಓಪನ್ ಆಗುತ್ತಿದ್ದಂತೆ ಶಾಪಿಂಗ್ ಪ್ರಿಯರು ಸಂತೋಷಗೊಂಡಿದ್ದಾರೆ. ಮಾಲ್ ವಾರಂತ್ಯವೇ ಓಪನ್ ಆಗಿರುವುದರಿಂದ ಗ್ರಾಹಕರು ಖುಷಿ ಪಟ್ಟಿದ್ದಾರೆ.












Click it and Unblock the Notifications