ಮದ್ಯಪ್ರಿಯರ ಸಂಖ್ಯೆ ಹೆಚ್ಚಳ!: ಭಾರತದಲ್ಲಿ ಬಿಯರ್ ಮಾರಾಟದಲ್ಲಿ ಏರಿಕೆ
ಭಾರತದಲ್ಲಿ ಮದ್ಯ ಮಾರಾಟದಿಂದ ಸರ್ಕಾರ ಸಾಕಷ್ಟು ಲಾಭ ಗಳಿಸುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಭಾರತದಲ್ಲಿ ಬಿಯರ್ ಮಾರಾಟದಲ್ಲಿ ಏರಿಕೆ ಕಾಣುತ್ತಿದೆ. ಮದ್ಯದ ಬಗ್ಗೆ ಜನರಿಗೆ ಇದ್ದ ಮಡಿವಂತಿಕೆ, ಬದಲಾದ ಬದುಕಿನ ಶೈಲಿ, ಆರೋಗ್ಯದ ದೃಷ್ಟಿಯಿಂದಲೂ ಕಡಿಮೆ ಆಲ್ಕೋಹಾಲ್ ಪಾನೀಯ ಒಳ್ಳೆಯದು ಎನ್ನುವ ವಾದಗಳು, ಭಾರತದಲ್ಲಿ ಬಿಯರ್ ಮಾರಾಟ ಹೆಚ್ಚಾಗುವಲ್ಲಿ ಪ್ರಮಖ ಕಾರಣವಾಗಿದೆ.
ಕಡಿಮೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಜನಪ್ರಿಯತೆ ಮತ್ತು ಸಾಮಾಜಿಕ ಸ್ವೀಕಾರದ ಬೆಳವಣಿಗೆಯಿಂದ ಬಿಯರ್ ಮಾರುಕಟ್ಟೆ ಭಾರತದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಎಂದು ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಹೇಳಿದೆ.
ಡಚ್ ಬ್ರೂಯಿಂಗ್ ಸಂಸ್ಥೆಯಾದ ಹೈನ್‌ಕೆನ್ ಎನ್‌ವಿಯಿಂದ ನಿಯಂತ್ರಿಸಲ್ಪಡುವ ಕಂಪನಿ, ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (UBL)ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಭಾರತ ಮತ್ತು ವಿದೇಶಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಹೊಂದಲು ನಾವೀನ್ಯತೆಯ ಮೂಲಕ ತನ್ನ ಉತ್ಪನ್ನ ಶ್ರೇಣಿಯನ್ನು ಹೆಚ್ಚಿಸಲು ಉದ್ದೇಶಿಸಿದೆ ಎಂದು ಹೇಳಿದೆ.
ಆನ್‌ಲೈನ್‌ನಲ್ಲಿ ಮದ್ಯವನ್ನು ಆರ್ಡರ್ ಮಾಡುವ ನೂತನ ವಿಧಾನ ಪರಿಚಯ ಮತ್ತು ಕೆಲವು ರಾಜ್ಯಗಳಲ್ಲಿ ಮನೆ ಬಾಗಿಲಿಗೆ ಸುಲಭವಾಗಿ ತಲುಪಿಸುವ ಕ್ರಮಗಳಿಂದ ಬಿಯರ್ ಮಾರಾಟದಲ್ಲಿ ಸಾಕಷ್ಟು ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.

ಪೂರೈಕೆ ಹೆಚ್ಚಿಸಲು ಯುಬಿಎಲ್ ತೀರ್ಮಾನ
"ನಮ್ಮ ಪರಸ್ಪರ ಬೆಳವಣಿಗೆಯನ್ನು ಹೆಚ್ಚಿಸುವ ಮೂಲಕ ಹೈನ್‌ಕೆನ್‌ನ ಆಂತರಿಕ ಪರಿಣತಿಯನ್ನು ಹತೋಟಿಗೆ ತರಲು ಮತ್ತು ಬೆಳವಣಿಗೆಗೆ ಕೊಡುಗೆ ನೀಡಲು ನಾವು ಉದ್ದೇಶಿಸಿದ್ದೇವೆ. ಇದರ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಜನತೆಯನ್ನು ಸೆಳೆಯುವುದರಿಂದ ಮತ್ತು ಭಾರತದಲ್ಲಿ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ" ಎಂದು ಯುಬಿಎಲ್ ಹೇಳಿದೆ,
ಇದಲ್ಲದೆ, ಯುಬಿಎಲ್ ತನ್ನ ಪೂರೈಕೆ ಸರಪಳಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಉದ್ದೇಶಿಸಿದೆ, ಇದು ಗ್ರಾಹಕರ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ಮಾರುಕಟ್ಟೆ ವಿಸ್ತರಣೆಗೆ ಅನುಕೂಲ
"ಭಾರತದಲ್ಲಿ, ಯುವಜನರು ಬಿಯರ್ ಅನ್ನು ಸಾಮಾಜಿಕ ಪಾನೀಯವಾಗಿ ಆಯ್ಕೆ ಮಾಡುವುದನ್ನು ಮುಂದುವರಿಸುವುದರಿಂದ ನಮ್ಮ ಕಂಪನಿಗೆ ಮುಂದಿನ ದಿನಗಳಲ್ಲಿ ವ್ಯವಹಾರ ವೃದ್ಧಿಗೆ ಉತ್ತಮ ದಿನಗಳಾಗಿವೆ ಎಂದು ನಾವು ನಂಬುತ್ತೇವೆ" ಎಂದು ಯುಬಿಎಲ್ ಭವಿಷ್ಯದ ಬಿಯರ್ ಮಾರುಕಟ್ಟೆ ಕುರಿತು ಅವಲೋಕನ ನಡೆಸಿದೆ.
ಆದರೂ, ಭಾರತದಲ್ಲಿ ಸೀಮಿತವಾಗಿರುವ ಮಾರಾಟ ಕೇಂದ್ರಗಳು, ಸರ್ಕಾರದ ವಿವಿಧ ನಿಯಮಗಳು ಮತ್ತು ಭಾರತಾದ್ಯಂತ ಹೆಚ್ಚಿನ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಹೆಚ್ಚಿನ ತೆರಿಗೆ ನೀತಿಗಳಿಂದ ಮದ್ಯ ಮಾರುಕಟ್ಟೆ ದೇಶದಲ್ಲಿ ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ ಎಂದು ಕಂಪನಿ ತಿಳಿಸಿದೆ.

ಸಾಮಾಜಿಕ ದೃಷ್ಟಿಕೋನ ಬದಲಾವಣೆ
"ಕ್ಷಿಪ್ರ ನಗರೀಕರಣ, ಏರುತ್ತಿರುವ ಮಧ್ಯಮ ವರ್ಗ ಮತ್ತು ಸಾಮಾಜಿಕ ದೃಷ್ಟಿಕೋನದಲ್ಲಿ ಬದಲಾವಣೆ, ಜೊತೆಗೆ ಕಡಿಮೆ ಮತ್ತು ಆಲ್ಕೋಹಾಲ್-ರಹಿತ ಬಿಯರ್ ರೂಪಾಂತರಗಳು ಮತ್ತು ತಾಂತ್ರಿಕ ಪ್ರಗತಿಗಳು ಮಾರುಕಟ್ಟೆಯ ಬೆಳವಣಿಗೆಯನ್ನು ಉತ್ತೇಜಿಸಲು ಸಿದ್ಧವಾಗಿವೆ" ಎಂದು ಯುಬಿಎಲ್ ಹೇಳಿದೆ.
"ಬಿಯರ್ ಉದ್ಯಮದ ಮೂಲಭೂತ ಅಂಶಗಳು ಬಹಳ ಪ್ರಬಲವಾಗಿವೆ ಮತ್ತು ಪ್ರಸ್ತುತ ಕಾರ್ಯತಂತ್ರಗಳೊಂದಿಗೆ, ಭಾರತದಲ್ಲಿ ಬಿಯರ್ ಮಾರುಕಟ್ಟೆಯನ್ನು ವಿಸ್ತರಣೆ ಮಾಡಬಹುದು, ಮುನ್ನಡೆಸಬಹುದು ಮತ್ತು ರೂಪಿಸಬಹುದು ಎಂದು ಕಂಪನಿಗೆ ಮನವರಿಕೆಯಾಗಿದೆ" ಎಂದು ಯುಬಿಎಲ್ ಹೇಳಿದೆ.

ಯುಬಿಎಲ್ ವಶಕ್ಕೆ ಪಡೆದಿರುವ ಹೈನ್‌ಕೆನ್
ಯುಬಿಎಲ್ ಭಾರತದ ಬಿಯರ್ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಯಾಗಿದೆ. ಕಿಂಗ್ ಫಿಶರ್ ಭಾರತದಲ್ಲಿ ಮಾರಾಟವಾಗುವ ಇದರ ಪ್ರಮುಖ ಬಿಯರ್ ಉತ್ಪನ್ನವಾಗಿದೆ. ಯುಬಿಎಲ್‌ನ ಶೇಕಡಾ 61.5 ಷೇರು ಖರೀದಿ ಮಾಡುವ ಮೂಲಕ ಡಚ್ ಕಂಪನಿ ಹೈನ್‌ಕೆನ್ ಕಂಪನಿಯ ಮೇಲೆ ಹಿಡಿತ ಸಾಧಿಸಿದೆ.
ಕಳೆದ ವರ್ಷ ಜೂನ್‌ನಲ್ಲಿ, ವಿಜಯ್ ಮಲ್ಯ ಗ್ರೂಪ್ ಒಡೆತನದ ವರ್ಗಾವಣೆ ಷೇರುಗಳನ್ನು ವಶಪಡಿಸಿಕೊಂಡಿರುವ ಡೆಟ್ ರಿಕವರಿ ಟ್ರಿಬ್ಯೂನಲ್ (ಡಿಆರ್‌ಟಿ)ಯಿಂದ ಯುಬಿಎಲ್‌ನ 16.15 ಪ್ರತಿಶತ ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಂಡಿತು.ಮಾರ್ಚ್ 31, 2022 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ, ಯುಬಿಎಲ್‌ನ ಒಟ್ಟು 1,311.74 ಕೋಟಿ ರುಪಾಯಿ ವಹಿವಾಟು ನಡೆಸಿದೆ.












Click it and Unblock the Notifications