ಈ ಸೇವಿಂಗ್ ಅಕೌಂಟಿಗೆ ಹಳೆ ನೋಟು ಹಾಕೋಕೆ ಆಗಲ್ಲ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟು ನಿಷೇಧ ಹೇರಿದ ಬಳಿಕ ಸೇವಿಂಗ್ಸ್ ಅಕೌಂಟಿಗೆ ನೋಟು ಹಾಕಬಹುದೇ? ಇಲ್ಲವೇ? ಎಂಬ ಗೊಂದಲಕ್ಕೆ ಉತ್ತರ ಸಿಕ್ಕಿದೆ. ಹಳೆ ನೋಟುಗಳನ್ನು ಅಂಚೆ ಕಚೇರಿಯ ಉಳಿತಾಯ ಯೋಜನೆಗಳನ್ನು ಮಾತ್ರ ಬಳಸಬಹುದಾಗಿದೆ.

ಉಳಿದಂತೆ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ(ಎನ್ ಎಸ್ ಸಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿ ಎಸ್ ಎಸ್) ಹಾಗೂ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮುಂತಾದ ಯೋಜನೆಗಳಿಗೆ ಹಳೆ ನೋಟುಗಳನ್ನು ಬಳಸಲು ಸಾಧ್ಯವಿಲ್ಲ.

Banned Notes Cannot Be Now Deposited In PPF, Senior Citizen Savings Scheme

ಹೀಗಾಗಿ ಬ್ಯಾಂಕ್ ಗಳಲ್ಲಿನ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಲು ಬಯಸುವವರು ಹಳೆ ನೋಟುಗಳನ್ನು ಬಳಸುವಂತಿಲ್ಲ. ಅಂಚೆ ಕಚೇರಿಯ ಉಳಿತಾಯ ಖಾತೆಗಳಲ್ಲಿ ಮಾತ್ರ 500 ಹಾಗೂ 1000 ರುಪಾಯಿ ನೋಟುಗಳನ್ನು ಬಳಸಿ ಹಣ ಕಟ್ಟಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ನವೆಂಬರ್ 8ರಿಂದ 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟುಗಳ ಬಳಕೆ ರದ್ದಾಗಿದೆ. 500 ಹಾಗೂ 2000ರುಪಾಯಿ ಮುಖಬೆಲೆಯ ಹೊಸ ನೋಟುಗಳು ಚಲಾವಣೆಯಾಗುತ್ತಿವೆ. ಹಳೆ ನೋಟುಗಳನ್ನು ಸರ್ಕಾರಿ ಆಸ್ಪತ್ರೆ, ಪೆಟ್ರೋಲ್ ಬಂಕ್, ಮೆಟ್ರೋ ನಿಲ್ದಾಣ, ಸರ್ಕಾರಿ ಶಾಲೆ ಹಾಗೂ ಉಪಯುಕ್ತ ಬಿಲ್ ಪಾವತಿಗೆ ಮಾತ್ರ ಬಳಸಬಹುದಾಗಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The government has barred the deposit of old currency notes in small savings schemes like Public Provident Fund (PPF), National Savings Certificates (NSC), Senior Citizen Savings Scheme (SCSS) Account and Kisan Vikas Patra (KVP), among others.
Please Wait while comments are loading...