• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಯ ಸಾಲದ ಉರುಳು ಈಗ ಬ್ಯಾಂಕ್ ಅಧಿಕಾರಿಗಳ ಕೊರಳಿಗೂ ಬಿತ್ತು!

|

ನವದೆಹಲಿ, ಸೆಪ್ಟೆಂಬರ್ 16: ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಸಾಲ ನೀಡುವ ವ್ಯವಹಾರದಲ್ಲಿ ಭಾಗಿಯಾಗಿದ್ದ ಹಲವು ಹಿರಿಯ ಬ್ಯಾಂಕ್ ಅಧಿಕಾರಿಗಳಿಗೆ ಕಷ್ಟ ಕಾಲ ಎದುರಿಗಿದೆ. ಏಕೆಂದರೆ, ಇನ್ನೊಂದು ತಿಂಗಳಿನಲ್ಲಿ ಸಿಬಿಐ ಸಲ್ಲಿಸಲಿರುವ ಚಾರ್ಜ್ ಶೀಟ್ ನಲ್ಲಿ ಬ್ಯಾಂಕ್ ಅಧಿಕಾರಿಗಳನ್ನೂ ಆರೋಪಿಗಳೆಂದು ಸೇರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಿಂಗ್ ಫಿಷರ್ ಗೆ 6000 ಕೋಟಿಗೂ ಹೆಚ್ಚು ಸಾಲ ನೀಡಿರುವ ಪ್ರಕರಣದಲ್ಲಿ ಸಲ್ಲಿಕೆ ಆಗುತ್ತಿರುವ ಮೊದಲ ಚಾರ್ಜ್ ಶೀಟ್. ಸ್ಟೇಟ್ ಬ್ಯಾಂಕ್ ಇಂಡಿಯಾದ ನೇತೃತ್ವದಲ್ಲಿ ಹದಿನೇಳು ಬ್ಯಾಂಕ್ ಗಳು ಸೇರಿ ಸಾಲ ನೀಡಿದ್ದವು. ಅದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವೊಂದೇ 1600 ಕೋಟಿ ಸಾಲ ನೀಡಿತ್ತು.

ವಿಜಯ್ ಮಲ್ಯ -ಜೇಟ್ಲಿ ಭೇಟಿ, ಸ್ವಾಮಿ ಹೇಳಿದ ಸತ್ಯಕಥೆ

ಕಳೆದ ವರ್ಷವೇ ವಿಜಯ್ ಮಲ್ಯ ವಿರುದ್ಧ ಸಿಬಿಐ ಪ್ರತ್ಯೇಕ ಪ್ರಕರಣವೊಂದರಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಅದು ಐಡಿಬಿಐ ಬ್ಯಾಂಕ್ ಗೆ ಬಾಕಿಯಿರುವ 900 ಕೋಟಿ ರುಪಾಯಿಗೆ ಸಂಬಂಧಿದ್ದು, ಅದರಲ್ಲಿ ಬ್ಯಾಂಕ್ ನ ಹಿರಿಯ ಅಧಿಕಾರಿಗಳು ಸಹ ಪಾಲ್ಗೊಂಡಿರುವ ಬಗ್ಗೆ ಆರೋಪ ಮಾಡಲಾಗಿದೆ.

ಬ್ಯಾಂಕ್ ಅಧಿಕಾರಿಗಳಿಂದ ಅಧಿಕಾರ ದುರ್ಬಳಕೆ ಆರೋಪ

ಬ್ಯಾಂಕ್ ಅಧಿಕಾರಿಗಳಿಂದ ಅಧಿಕಾರ ದುರ್ಬಳಕೆ ಆರೋಪ

ಐಡಿಬಿಐನಿಂದ ಪಡೆದ ಸಾಲಕ್ಕೆ 2015ರಲ್ಲಿ ಒಂದು ಪ್ರಕರಣ ಹಾಗೂ ಬ್ಯಾಂಕ್ ಗಳ ಒಕ್ಕೂಟದಿಂದ ಪಡೆದ ಸಾಲಕ್ಕೆ 2016ರಲ್ಲಿ ಮತ್ತೊಂದು ಪ್ರಕರಣ ಸಿಬಿಐ ದಾಖಲಿಸಿದೆ. ಬ್ಯಾಂಕ್ ಅಧಿಕಾರಿಗಳ ಹೆಸರು ಬಯಲು ಮಾಡಲು ನಿರಾಕರಿಸಿರುವ ಸಿಬಿಐ, ಸಾಲ ನೀಡಿರುವ ಬ್ಯಾಂಕ್ ಗಳ ಒಕ್ಕೂಟದ ತನಿಖೆ ಈಗಾಗಲೇ ಮುಕ್ತಾಯವಾಗಿದ್ದು, ಇನ್ನು ಒಂದು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ಹಾಗೂ ವಿಚಾರಣೆಗೆ ಅವಕಾಶ ಮುಕ್ತವಾಗಿ ಇರಿಸಿಕೊಳ್ಳುವ ಬಗ್ಗೆ ತಿಳಿಸಿದೆ. ಸದ್ಯಕ್ಕೆ ಬ್ಯಾಂಕ್ ಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಮತ್ತು ಈಗಾಗಲೇ ನಿವೃತ್ತರಾಗಿರುವವರು ಇದರಲ್ಲಿ ಒಳಗೊಂಡಿದ್ದಾರೆ. ಅದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ಹೆಸರೂ ಇದೆ. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾಬೀತುಪಡಿಸಬಹುದಾದಷ್ಟು ಸಾಕ್ಷ್ಯಾಧಾರ ಒಟ್ಟು ಮಾಡಿರುವುದಾಗಿ ಸಿಬಿಐ ಹೇಳಿದೆ.

ವಿತ್ತ ಸಚಿವಾಲಯದ ಪಾತ್ರದ ಬಗ್ಗೆ ತನಿಖೆ

ವಿತ್ತ ಸಚಿವಾಲಯದ ಪಾತ್ರದ ಬಗ್ಗೆ ತನಿಖೆ

ವಿಜಯ್ ಮಲ್ಯ, ಕಿಂಗ್ ಫಿಷರ್ ಏರ್ ಲೈನ್ಸ್ ನ ಸಿಎಫ್ ಒ ರಂಗನಾಥನ್, ಮತ್ತೊಬ್ಬ ಮಾಜಿ ಹಿರಿಯ ಅಧಿಕಾರಿಯನ್ನು ಈ ಪ್ರಕರಣದ ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಇನ್ನು ಬ್ಯಾಂಕ್ ಗಳು ಸಾಲ ನೀಡಲು ಆರ್ಥಿಕ ಸಚಿವಾಲಯದಿಂದ ಪ್ರಭಾವ ಬೀರಲಾಗಿತ್ತೆ ಎಂಬ ವಿಚಾರದ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.

ಮಲ್ಯ ಆಸ್ತಿ ಮಾರಲು ಯುಕೆ ಕೋರ್ಟ್ ಸಮ್ಮತಿ, ಭಾರತದ ಬ್ಯಾಂಕ್ ಗಳು ನಿರಾಳ

ಸಾಲ ಪಡೆದ ಉದ್ದೇಶದ ಬದಲು ಬೇರೆಯದಕ್ಕೆ ಹಣ ಬಳಕೆ

ಸಾಲ ಪಡೆದ ಉದ್ದೇಶದ ಬದಲು ಬೇರೆಯದಕ್ಕೆ ಹಣ ಬಳಕೆ

ಯಾವ ಉದ್ದೇಶಕ್ಕಾಗಿ ಸಾಲ ಪಡೆದಿದ್ದರೋ ಅದನ್ನು ಬೇರೆ ಕಡೆಗೆ ವಿಜಯ್ ಮಲ್ಯ ತಿರುಗಿಸಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ಸಿಬಿಐ ಒಟ್ಟು ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಸಾಲ ನೀಡಿದ ಬ್ಯಾಂಕ್ ಗಳ ಒಕ್ಕೂಟವು 2005ರಿಂದ 2010ರ ಮಧ್ಯೆ ನಾನಾ ಸಾಲ ಸೌಲಭ್ಯ ಒದಗಿಸಿದೆ ಎಂದು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.

ಯಾವ ಬ್ಯಾಂಕ್ ಗಳು ಎಷ್ಟು ಸಾಲ ನೀಡಿದ್ದವು?

ಯಾವ ಬ್ಯಾಂಕ್ ಗಳು ಎಷ್ಟು ಸಾಲ ನೀಡಿದ್ದವು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1600 ಕೋಟಿ ರುಪಾಯಿಯನ್ನು ಏರ್ ಲೈನ್ಸ್ ಗಾಗಿ ನೀಡಿತ್ತು. ಅದರಲ್ಲಿ ಯುಬಿ ಕಂಪೆನಿಯ ಅಡವಿಟ್ಟಿದ್ದ ಷೇರು ಮಾರಾಟ ಮೂಲಕ 1100 ಕೋಟಿ ರುಪಾಯಿ ಮಾತ್ರ ವಸೂಲು ಮಾಡಲು ಸಾಧ್ಯವಾಯಿತು. ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ 800 ಕೋಟಿ, ಐಡಿಬಿಐ ಬ್ಯಾಂಕ್ 800 ಕೋಟಿ, ಬ್ಯಾಂಕ್ ಆಫ್ ಇಂಡಿಯಾ 650 ಕೋಟಿ, ಬ್ಯಾಂಕ್ ಆಫ್ ಬರೋಡಾ 550 ಕೋಟಿ ಹಾಗೂ ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 410 ಕೋಟಿ ಸಾಲ ನೀಡಿವೆ.

ಅರುಣ್ ಜೇಟ್ಲಿ ಭೇಟಿ ಹೇಳಿಕೆ: ವರಸೆ ಬದಲಿಸಿದ ವಿಜಯ್‌ ಮಲ್ಯ

English summary
Many senior bank officials who had dealt with loans given to liquor baron Vijay Mallya's Kingfisher Airlines may be named as accused in a CBI charge sheet which is likely to be filed within a month, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X