ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಆಫ್ ಇಂಡಿಯಾ ತ್ರೈಮಾಸಿಕ ಲಾಭ ಮೂರು ಪಟ್ಟು ಏರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್‌ 03: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ (Boi) ಸೋಮವಾರ ತನ್ನ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಮೂರು ಪಟ್ಟು ಏರಿಕೆಯಾಗಿ 843.60 ಕೋಟಿಗೆ ಏರಿಕೆಯಾಗಿದೆ ಎಂದು ವರದಿ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ 242.62 ಕೋಟಿ ರೂಪಾಯಿ ನಿವ್ವಳ ಲಾಭವನ್ನು ವರದಿ ಮಾಡಿತ್ತು.

ನಿವ್ವಳ ಬಡ್ಡಿ ಆದಾಯ, ಅಥವಾ ಸಾಲಗಳ ಮೇಲೆ ಗಳಿಸಿದ ಬಡ್ಡಿ ಮತ್ತು ಠೇವಣಿಗಳ ಮೇಲೆ ಪಾವತಿಸುವ ಬಡ್ಡಿ ನಡುವಿನ ವ್ಯತ್ಯಾಸವು ತ್ರೈಮಾಸಿಕದಲ್ಲಿ ಶೇ. 0.12 ರಷ್ಟು ಕುಸಿದು 3,481.14 ಕೋಟಿಗೆ ತಲುಪಿದೆ.

ಎಸ್‌ಬಿಐ ತ್ರೈಮಾಸಿಕ ಲಾಭ ಶೇ. 81ರಷ್ಟು ಏರಿಕೆ: 4,189.4 ಕೋಟಿ ದಾಖಲುಎಸ್‌ಬಿಐ ತ್ರೈಮಾಸಿಕ ಲಾಭ ಶೇ. 81ರಷ್ಟು ಏರಿಕೆ: 4,189.4 ಕೋಟಿ ದಾಖಲು

ಕೋರ್ ಶುಲ್ಕದ ಆದಾಯವನ್ನು ಒಳಗೊಂಡಿರುವ ಇತರ ಆದಾಯವು ಪರಿಶೀಲನೆಯ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 42.9ರಷ್ಟು ಏರಿಕೆ ಕಂಡು 1707.28 ಕೋಟಿಗೆ ತಲುಪಿದೆ.

Bank Of India Reported Over Three-Fold Rise In June Quarter Net Profit

ಒಟ್ಟು ಎನ್‌ಪಿಎಗಳು, ಒಟ್ಟು ಪ್ರಗತಿಯ ಶೇಕಡಾವಾರು, ಶೇ. 13.91ರಷ್ಟಿದ್ದರೆ, ಜೂನ್ 2019 ರ ವೇಳೆಗೆ ಶೇ. 16.50 ರಷ್ಟು ಮತ್ತು ಮಾರ್ಚ್ 2020 ರ ವೇಳೆಗೆ ಶೇ. 14.78ರಷ್ಟಿದೆ.

ನಿಬಂಧನೆಗಳ ನಂತರ, ನಿವ್ವಳ ಎನ್‌ಪಿಎ ಅನುಪಾತವು ಜನವರಿ-ಮಾರ್ಚ್ ಅವಧಿಯಲ್ಲಿ ಶೇ. 3.88ರಷ್ಟು ಮತ್ತು ಶೇ. 3.57ರಷ್ಟಿತ್ತು ಮತ್ತು ವರ್ಷದ ಹಿಂದಿನ ತ್ರೈಮಾಸಿಕದಲ್ಲಿ ಶೇ. 5.79 ರಷ್ಟಿತ್ತು.

ಬ್ಯಾಂಕ್ ಆಫ್ ಇಂಡಿಯಾದ ಷೇರುಗಳು ಇಂದು ಬಿಎಸ್‌ಇಯಲ್ಲಿ ಶೇ. 2.2ರಷ್ಟು ಹೆಚ್ಚಳವಾಗಿ 48.05 ಕ್ಕೆ ತಲುಪಿದ್ದರೆ, ಎನ್‌ಎಸ್‌ಇನಲ್ಲಿ ಶೇ. 2.34ರಷ್ಟು ಏರಿಕೆಗೊಂಡು 48.15 ರೂಪಾಯಿಗೆ ವಹಿವಾಟು ಕೊನೆಗೊಂಡಿದೆ.

English summary
State-owned Bank of India (BoI) on Monday reported an over three-fold rise in its June quarter net profit to ₹843.60 crores, led by higher other income and lower provisions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X