May Bank Holidays:ಮೇ ತಿಂಗಳ ಬ್ಯಾಂಕ್ ರಜೆ ಪಟ್ಟಿ: ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು, ಏಪ್ರಿಲ್ 30: ಇನ್ನೇನು ನಾಳೆಯಿಂದಲೇ 2024ರ ಮೇ ತಿಂಗಳು ಆರಂಭವಾಗಲಿದೆ. ಈ ತಿಂಗಳ ವಿಶೇಷವರೆಂದರೆ ತಿಂಗಳ ಮೊದಲ ದಿನವೇ ರಜಾ ದಿನ. ಮೇ 1ರಂದು ಕಾರ್ಮಿಕರ ದಿನದ ನಿಮಿತ್ತ ಸಾಮಾನ್ಯವಾಗಿ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್, ಸರ್ಕಾರಿ ಕಚೇರಿಗಳು ರಜೆ ಇರುತ್ತದೆ.
ಆರ್ಬಿಐ ಕ್ಯಾಲಂಡರ್ ಪ್ರಕಾರ 2024ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ ಇದೆ. ಕರ್ನಾಟಕದಲ್ಲಿ 10 ದಿನ ರಜೆ ಇದೆ. ಮೇ 1ರಂದು ಕಾರ್ಮಿಕರ ದಿನದ ನಿಮಿತ್ತ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಇರಲಿದೆ. ಇನ್ನು ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಮೇ ತಿಂಗಳಲ್ಲಿ ಆರು ಹಂತಗಳ ಮತದಾನದ ನಡೆಯಲಿದ್ದು,ಮೇ 7, 13, 20 ಮತ್ತು 25ರಂದು ವಿವಿಧೆಡೆ ಮತದಾನ ಕಾರಣ ಬ್ಯಾಂಕ್ ರಜೆ ಇರುತ್ತದೆ.

ಮೇ ತಿಂಗಳ ಬ್ಯಾಂಕ್ ರಜೆ ಪಟ್ಟಿ
ಮೇ 1- ಬುಧವಾರ: ವಿಶ್ವ ಕಾರ್ಮಿಕರ ದಿನ/ ಮಹಾರಾಷ್ಟ್ರ ದಿನ (ಮಹಾರಾಷ್ಟ್ರ, ಕರ್ನಾಟಕ ತಮಿಳುನಾಡು, ಅಸ್ಸಾಂ, ಆಂಧ್ರ ಪ್ರದೇಶ, ತೆಲಂಗಾಣ, ಮಣಿಪುರ, ಕೇರಳ, ಪಶ್ಚಿಮ ಬಂಗಾಳ, ಗೋವಾ, ಬಿಹಾರ್ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕ್ ರಜೆ)
ಮೇ 5- ಭಾನುವಾರ(ದೇಶದಾದ್ಯಂತ)
ಮೇ 7- ಮಂಗಳವಾರ: ಲೋಕಸಭಾ ಚುನಾವಣೆ 3ನೇ ಹಂತ (ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಗೋವಾದಲ್ಲಿ ರಜೆ)
ಮೇ 8- ಬುಧವಾರ: ರಬೀಂದ್ರ ಜಯಂತಿ (ಪಶ್ಚಿಮ ಬಂಗಾಳದಲ್ಲಿ ರಜೆ)
ಮೇ 10- ಶುಕ್ರವಾರ: ಬಸವ ಜಯಂತಿ/ ಅಕ್ಷಯ ತೃತೀಯ (ಕರ್ನಾಟಕದಲ್ಲಿ ರಜೆ)
ಮೇ 11- ಎರಡನೇ ಶನಿವಾರ
ಮೇ 12- ಭಾನುವಾರ(ದೇಶದಾದ್ಯಂತ)
ಮೇ 13- ಸೋಮವಾರ: ಲೋಕಸಭಾ ಚುನಾವಣೆ 4ನೇ ಹಂತ (ಜಮ್ಮು ಕಾಶ್ಮೀರದಲ್ಲಿ ರಜೆ)
ಮೇ 16- ಗುರುವಾರ: ಸಿಕ್ಕಿಂ ರಾಜ್ಯ ದಿನ
ಮೇ 19-ಭಾನುವಾರ(ದೇಶದಾದ್ಯಂತ)
ಮೇ 20- ಸೋಮವಾರ (5ನೇ ಹಂತದ ಚುನಾವಣೆ)
ಮೇ 23-ಗುರುವಾರ: ಬುದ್ಧ ಪೂರ್ಣಿಮಾ (ಪ್ರಮುಖ ನಗರಗಳಲ್ಲಿ ರಜೆ)
ಮೇ 25- ನಾಲ್ಕನೇ ಶನಿವಾರ
ಮೇ 26: ಭಾನುವಾರ(ದೇಶದಾದ್ಯಂತ)












Click it and Unblock the Notifications