Bank Holidays in April 2022: ಏಪ್ರಿಲ್‌ನಲ್ಲಿ 15 ದಿನ ಬ್ಯಾಂಕ್ ರಜೆ
ನವದೆಹಲಿ, ಮಾರ್ಚ್ 23: ಮಾರ್ಚ್ ತಿಂಗಳು ಕೊನೆಯಾಗಲು ಇನ್ನು ಕೆಲವೇ ದಿನಗಳು ಮಾತ್ರ ಇದೆ. ಬಳಿಕ ಹೊಸ ಆರ್ಥಿಕ ವರ್ಷ ಏಪ್ರಿಲ್‌ನಿಂದ ಆರಂಭವಾಗಲಿದೆ. ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಏಪ್ರಿಲ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯಲ್ಲಿ ಪ್ರಕಟ ಮಾಡಿದೆ. ಆರ್‌ಬಿಐ ಹಂಚಿಕೊಂಡ ರಜಾ ಕ್ಯಾಲೆಂಡರ್ ಪ್ರಕಾರ, ಏಪ್ರಿಲ್ ತಿಂಗಳಿನಲ್ಲಿ ಬ್ಯಾಂಕುಗಳು ಹದಿನೈದು ದಿನ ಬಂದ್ ಆಗಲಿದೆ.
ಏಪ್ರಿಲ್‌ನಲ್ಲಿ ಅನೇಕ ಬ್ಯಾಂಕ್ ರಜಾದಿನಗಳು ಇದೆ. ಮುಖ್ಯವಾಗಿ ಯುಗಾದಿ, ಅಂಬೇಡ್ಕರ್ ಜಯಂತಿ ಮೊದಲಾದ ದಿನಗಳಂದು ಬ್ಯಾಂಕ್ ರಜೆ ಇರಲಿದೆ. ಮುಂದಿನ ತಿಂಗಳು ನೀವು ಬ್ಯಾಂಕುಗಳಿಗೆ ತೆರಳುವ ಮುನ್ನ ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇರಲಿದೆ ಎಂದು ನೋಡಿಕೊಳ್ಳಿ. ಆದರೆ ಬ್ಯಾಂಕ್ ರಜೆಗಳು ಆಯಾ ರಾಜ್ಯಗಳಿಗೆ ಅನ್ವಯ ಆಗಲಿದೆ ಎಂಬುವುದು ಗಮನಾರ್ಹವಾಗಿದೆ.
ಏಪ್ರಿಲ್‌ನಲ್ಲಿ ಇರುವ 15 ದಿನಗಳ ಬ್ಯಾಂಕ್ ರಜೆಗಳಲ್ಲಿ ರಾಷ್ಟ್ರೀಯ ರಜಾದಿನಗಳ ಹೊರತಾಗಿ, ಕೆಲವು ರಾಜ್ಯ-ವಾರು ರಜಾದಿನಗಳು ಎಲ್ಲಾ ಭಾನುವಾರಗಳ ರಜೆ, ಎರಡನೇ ನಾಲ್ಕನೇ ಶನಿವಾರ ಇದರಲ್ಲಿ ಸೇರ್ಪಡೆ ಆಗಿದೆ. ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ.

ಬ್ಯಾಂಕ್ ಖಾತೆಗಳ ವಾರ್ಷಿಕ ಮುಕ್ತಾಯವಾದ ಏಪ್ರಿಲ್ 1 ರಿಂದ ಪ್ರಾರಂಭಿಸಿ, ತಿಂಗಳಲ್ಲಿ ಕನಿಷ್ಠ ಎರಡು ದೀರ್ಘ ವಾರಾಂತ್ಯಗಳು ಇರುತ್ತವೆ. ಏಪ್ರಿಲ್ 1 ಶುಕ್ರವಾರದಂದು ಬರುವ ಕಾರಣದಿಂದಾಗಿ ತಿಂಗಳ ಮೊದಲ ಮೂರು ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಹೊಸ ಆರ್ಥಿಕ ವರ್ಷದ ಹಿನ್ನೆಲೆ ಶುಕ್ರವಾರ ಬ್ಯಾಂಕ್ ರಜೆ ಇರಲಿದೆ.
ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕಿಂಗ್ ರಜಾದಿನಗಳು ದೇಶಾದ್ಯಂತ ಏಕಕಾಲದಲ್ಲಿ ನಡೆಯುವುದಿಲ್ಲ. ಅನೇಕ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಅಥವಾ ಆ ರಾಜ್ಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಆಧಾರಿತವಾಗಿರುತ್ತದೆ. ಈ ಎಲ್ಲಾ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ. ಏಪ್ರಿಲ್‌ನಲ್ಲಿ ಎಷ್ಟು ರಜೆಗಳಿವೆ ಮತ್ತು ಅವು ಎಲ್ಲಿ ಅನ್ವಯಿಸುತ್ತವೆ ಎಂಬುದನ್ನು ತಿಳಿಯಲು ಮುಂದೆ ಓದಿ...
ಏಪ್ರಿಲ್ 1: ಆರ್ಥಿಕ ಹಣಕಾಸು ವರ್ಷದ ಅಂತ್ಯ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಿದೆ
ಏಪ್ರಿಲ್ 2: ಯುಗಾದಿ ಹಬ್ಬ/ನವರಾತ್ರಿಯ ಮೊದಲ ದಿನ/ತೆಲುಗು ಹೊಸ ವರ್ಷ/ಸಜಿಬು ನೊಂಗಂಪಾಂಬ (ಚೈರೋಬಾ) ಹಿನ್ನೆಲೆ ಬೇಲಾಪುರ, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲಿದೆ
3 ಏಪ್ರಿಲ್: ಭಾನುವಾರ (ವಾರದ ರಜೆ)
ಏಪ್ರಿಲ್ 4: ಸರಿಹುಲ್ ಕಾರಣ ರಾಂಚಿಯಲ್ಲಿ ಬ್ಯಾಂಕ್ ಬಂದ್
ಏಪ್ರಿಲ್ 5 : ಬಾಬು ಜಗಜೀವನ್ ರಾಮ್ ಅವರ ಜನ್ಮದಿನ, ಹೈದರಾಬಾದ್‌ನಲ್ಲಿ ಬ್ಯಾಂಕುಗಳು ಬಂದ್
9 ಏಪ್ರಿಲ್: ಶನಿವಾರ (ತಿಂಗಳ 2 ನೇ ಶನಿವಾರ)
10 ಏಪ್ರಿಲ್: ಭಾನುವಾರ (ವಾರದ ರಜೆ)
ಏಪ್ರಿಲ್ 14: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ ಮಹಾವೀರ ಜಯಂತಿ/ ಬೈಸಾಖಿ/ ತಮಿಳು ಹೊಸ ವರ್ಷ/ ಚೈರೋಬಾ, ಬಿಜು ಹಬ್ಬ/ ಬೋಹರ್ ಬಿಹು: ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕುಗಳು ಬಂದ್
15 ಏಪ್ರಿಲ್: ಶುಭ ಶುಕ್ರವಾರ/ಬಂಗಾಳಿ ಹೊಸ ವರ್ಷ/ಹಿಮಾಚಲ ದಿನ/ವಿಷು/ಬೋಹಾಗ್ ಬಿಹು: ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕುಗಳು ಮುಚ್ಚಲಿದೆ
16 ಏಪ್ರಿಲ್: ಬೊಹಾಗ್ ಬಿಹು: ಗುವಾಹಟಿಯಲ್ಲಿ ಬ್ಯಾಂಕ್ ಬಂದ್
17 ಏಪ್ರಿಲ್: ಭಾನುವಾರ (ವಾರದ ರಜೆ)
21 ಏಪ್ರಿಲ್: ವಾಹನ ಪೂಜೆ - ಅಗರ್ತಲಾದಲ್ಲಿ ಬ್ಯಾಂಕುಗಳು ಬಂದ್
23 ಏಪ್ರಿಲ್: ಶನಿವಾರ (ತಿಂಗಳ ನಾಲ್ಕನೇ ಶನಿವಾರ)
24 ಏಪ್ರಿಲ್: ಭಾನುವಾರ (ವಾರದ ರಜೆ)
29 ಏಪ್ರಿಲ್: ಶಾಬ್-ಎ-ಕದ್ರ್/ಜುಮಾತ್-ಉಲ್-ವಿದಾ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಬಂದ್












Click it and Unblock the Notifications