2021ರ ಏಪ್ರಿಲ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ಇರಲಿದೆ?
ನವದೆಹಲಿ, ಮಾರ್ಚ್ 28: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ರಾಮನವಮಿ, ಗುಡ್ ಫ್ರೈಡೇ, ಬಿಹು, ತಮಿಳು ಹೊಸ ವರ್ಷಾಚರಣೆ ಮುಂತಾದ ಹಬ್ಬಗಳು ಸಾಲು ಸಾಲು ರಜೆಗಳನ್ನು ತಂದಿವೆ. ಒಟ್ಟಾರೆ,ಈ ತಿಂಗಳಲ್ಲಿ 9 ದಿನಗಳ ಕಾಲ ರಜೆ ಇರಲಿದೆ.
ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.

ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.
| ಏಪ್ರಿಲ್ 2021ರಲ್ಲಿ ಬ್ಯಾಂಕ್ ರಜಾ ದಿನ | ||
|---|---|---|
| ದಿನಾಂಕ | ದಿನ | ರಜಾದಿನಗಳು |
| ಏಪ್ರಿಲ್ 01, 2021 | ಗುರುವಾರ | ವಾರ್ಷಿಕ ಖಾತೆಗಳ ಮುಕ್ತಾಯ, ಹೊಸ ಆರ್ಥಿಕ ವರ್ಷಾರಂಭ |
| ಏಪ್ರಿಲ್ 02 | ಶುಕ್ರವಾರ | ಗುಡ್ ಫ್ರೈಡೇ |
| ಏಪ್ರಿಲ್ 05 | ಸೋಮವಾರ | ಬಾಬು ಜಗಜೀವನ್ ರಾಮ್ ಹುಟ್ಟುಹಬ್ಬ |
| ಏಪ್ರಿಲ್ 06 | ಮಂಗಳವಾರ | ತಮಿಳುನಾಡು ವಿಧಾನಸಭೆ ಚುನಾವಣೆ |
| ಏಪ್ರಿಲ್ 13 | ಮಂಗಳವಾರ | ಗುಡಿ ಪಡ್ವಾ, ತೆಲುಗು ಹೊಸ ವರ್ಷಾಚರಣೆ, ಉಗಾದಿ, ಬೈಸಾಕಿ |
| ಏಪ್ರಿಲ್ 14 | ಬುಧವಾರ | ಡಾ. ಅಂಬೇಡ್ಕರ್ ಜಯಂತಿ, ತಮಿಳು ಹೊಸ ವರ್ಷಾಚರಣೆ, ವಿಶು, ಬೊಹಾಗ್ ಬಿಹು, ಬಿಜು, ಚೆರೊಬಾ |
| ಏಪ್ರಿಲ್ 15 | ಗುರುವಾರ | ಹಿಮಾಚಲ ದಿನ, ಬೆಂಗಾಳಿ ದಿನಾಚರಣೆ, ಬಿಹು, ಸರ್ಹುಲ್ |
| ಏಪ್ರಿಲ್ 16 | ಶುಕ್ರವಾರ | ಬೊಹಾಂಗ್ ಬಿಹು |
| ಏಪ್ರಿಲ್ 21 | ಬುಧವಾರ | ಶ್ರೀರಾಮನವಮಿ, ಗರಿಯಾ ಪೂಜಾ |
ಬ್ಯಾಂಕ್ ಕಚೇರಿಗಳು ಬಂದ್ ಆಗಿದ್ದರೂ, ಮೊಬೈಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
ಮೇಲ್ಕಂಡ ದಿನಾಂಕಗಳಲ್ಲದೆ, ಏಪ್ರಿಲ್ 4(ಭಾನುವಾರ), ಏಪ್ರಿಲ್ 10 (2ನೇ ಶನಿವಾರ), ಏಪ್ರಿಲ್ 11 (ಭಾನುವಾರ), ಏಪ್ರಿಲ್ 18 (ಭಾನುವಾರ), 24 (4ನೇ ಶನಿವಾರ) ಹಾಗೂ ಏಪ್ರಿಲ್ 25 (ಭಾನುವಾರ) ರಂದು ರಜೆ ಇರಲಿದೆ.












Click it and Unblock the Notifications