ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಎಸ್‌ಬಿಐ ಗ್ರಾಹಕರಿಗೆ ಹಣ ವರ್ಗಾವಣೆ SMS ಕಳುಹಿಸಿದರೂ ಕಾಸಿಲ್ಲ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೊಬೈಲ್ ಫಂಡ್ ವರ್ಗಾವಣೆಯಲ್ಲಿ ಎಸ್‌ಎಂಎಸ್ ಶುಲ್ಕವನ್ನು ಮನ್ನಾ ಮಾಡಿದೆ ಎಂದು ಟ್ವೀಟ್‌ನಲ್ಲಿ ಹೇಳಿದೆ.
ಎಸ್‌ಬಿಐನಿಂದ ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ರಚನೆರಹಿತ ಪೂರಕ ಸೇವಾ ಡೇಟಾ (ಯುಎಸ್ಎಸ್ಡಿ) ಸೇವೆಗಳನ್ನು ಬಳಸಿಕೊಂಡು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಗ್ರಾಹಕರು ಸುಲಭವಾಗಿ ವಹಿವಾಟು ನಡೆಸಬಹುದು ಎಂದು ಎಸ್‌ಬಿಐ ತಿಳಿಸಿದೆ.

SBI Recruitment 2022: 5008ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿSBI Recruitment 2022: 5008ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿ

ಮೊಬೈಲ್ ಮೂಲಕ ಹಣ ವರ್ಗಾವಣೆಯ ಮೇಲೆ ವಿಧಿಸಲಾಗುತ್ತಿದ್ದ SMS ಶುಲ್ಕಗಳನ್ನು ಈಗ ಮನ್ನಾ ಮಾಡಲಾಗಿದೆ. ಬಳಕೆದಾರರು ಈಗ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಅನುಕೂಲಕರವಾಗಿ ವ್ಯವಹಾರ ಮಾಡಬಹುದು. ಕೇವಲ *99# ಅನ್ನು ಡಯಲ್ ಮಾಡುವ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದು. ವಿಶೇಷವಾಗಿ ಫೀಚರ್ ಫೋನ್ ಬಳಕೆದಾರರಿಗೆ ಇದು ಹೆಚ್ಚು ಅನುಕೂಲಕರವಾಗಿರಲಿದೆ ಎಂದು ಎಸ್‌ಬಿಐ ತಿಳಿಸಿದೆ.

ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಬಲಪಡಿಸುವ ಗುರಿ

ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಬಲಪಡಿಸುವ ಗುರಿ

ಕನಿಷ್ಠ ವಹಿವಾಟು ನಡೆಸುವ ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನರು ಸಹ ಮೊಬೈಲ್ ಬ್ಯಾಂಕಿಂಗ್ ಅನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಆಗಬೇಕು. ಇದೊಂದು ಮುಖ್ಯ ಉದ್ದೇಶವನ್ನು ಇಟ್ಟುಕೊಂಡು ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಲಾಗಿದೆ. ಮೊಬೈಲ್ ಮೂಲಕವೇ ಹಣ ವರ್ಗಾವಣೆಗೆ ಅಗತ್ಯವಾದ ಪ್ರೋತ್ಸಾಹಕ್ಕಾಗಿ ಹೆಚ್ಚುವರಿ ಶುಲ್ಕವನ್ನು ತೆಗೆದು ಹಾಕುವುದಕ್ಕೆ ನಿರ್ಧರಿಸಲಾಗಿದೆ.

ಯಾವ ಸೇವೆಗಳ ಮೇಲೆ ಹೆಚ್ಚುವರಿ ಶುಲ್ಕವಿಲ್ಲ?

ಯಾವ ಸೇವೆಗಳ ಮೇಲೆ ಹೆಚ್ಚುವರಿ ಶುಲ್ಕವಿಲ್ಲ?

ಎಸ್‌ಬಿಐ ನೀಡಿರುವ ಮಾಹಿತಿ ಪ್ರಕಾರ, ಹಣವನ್ನು ಕಳುಹಿಸುವುದು, ಹಣಕ್ಕಾಗಿ ವಿನಂತಿಸುವುದು, ಖಾತೆ ಬಾಕಿ ಪರಿಶೀಲಿಸುವುದು, ಮಿನಿ ಸ್ಟೇಟ್ ಮೆಂಟ್ ಪಡೆಯುವುದು ಮತ್ತು ಯುಪಿಐ ಪಿನ್ ಅನ್ನು ಬದಲಾಯಿಸುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. "ಯುಎಸ್ಎಸ್ಡಿ ಸೇವೆಗಳನ್ನು ಬಳಸಿಕೊಂಡು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಬಳಕೆದಾರರು ಈಗ ಅನುಕೂಲಕರವಾಗಿ ವಹಿವಾಟು ನಡೆಸಬಹುದು" ಎಂದು ಎಸ್‌ಬಿಐ ಉಲ್ಲೇಖಿಸಿದೆ.

ಜಿಎಸ್‌ಎಂ ನೆಟ್‌ವರ್ಕ್ ಮೂಲಕ ಮಾಹಿತಿ ರವಾನೆ

ಜಿಎಸ್‌ಎಂ ನೆಟ್‌ವರ್ಕ್ ಮೂಲಕ ಮಾಹಿತಿ ರವಾನೆ

ಯುಎಸ್‌ಎಸ್‌ಡಿ ತಂತ್ರಜ್ಞಾನವೇ ಎಲ್ಲ ಮಾಹಿತಿ ರವಾನೆಗೆ ವೇದಿಕೆಯಾಗಿದೆ. ಇದರ ಮೂಲಕ ಫೋನ್‌ನಲ್ಲಿ ಜಿಎಸ್‌ಎಂ ನೆಟ್‌ವರ್ಕ್ ಮೂಲಕ ಮಾಹಿತಿ ರವಾನಿಸಬಹುದು. SMS ಸೌಲಭ್ಯವಿರುವ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಈ ಮಾಹಿತಿ ಲಭ್ಯವಿರುತ್ತದೆ. ಇದಲ್ಲದೆ, ಯುಎಸ್‌ಎಸ್‌ಡಿ ಮೊಬೈಲ್ ಬ್ಯಾಂಕಿಂಗ್ ಅನ್ನು ನಿಧಿ ವರ್ಗಾವಣೆಗೆ, ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು, ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯುವುದು ಸೇರಿದಂತೆ ಇತರ ಬಳಕೆಗಳಿಗೆ ಬಳಸಬಹುದು ಎಂಬುದನ್ನು ಬಳಕೆದಾರರು ಗಮನಿಸಬೇಕು.

ಯುಎಸ್‌ಎಸ್‌ಡಿ ಸೇವೆಯ ಮುಖ್ಯ ಉದ್ದೇಶವೇನು?

ಯುಎಸ್‌ಎಸ್‌ಡಿ ಸೇವೆಯ ಮುಖ್ಯ ಉದ್ದೇಶವೇನು?

ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಕೆಳಬ್ಯಾಂಕ್‌ಗೆ ಒಳಪಡುವ ಜನರಿಗೆ ಯುಎಸ್‌ಎಸ್‌ಡಿ ಸೇವೆಯ ಮೂಲಕ ಸಂಪೂರ್ಣ ಅವಕಾಶ ನೀಡಲಾಗುವುದು. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಇದೊಂದು ಕ್ರಮದಿಂದ ಭಾರತದಲ್ಲಿ ಮೊಬೈಲ್ ಫೋನ್ ಹೊಂದಿರುವ 1 ಶತಕೋಟಿ ಬಳಕೆದಾರರಲ್ಲಿ ಶೇ.65ಕ್ಕಿಂತ ಹೆಚ್ಚು ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

English summary
Bank Customers Alert: State Bank of India Waives Off SMS Charges On Mobile Fund Transfers. Here read to know How to Use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X