ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸಿಸ್ ಬ್ಯಾಂಕ್ ಪರವಾನಗಿ ರದ್ದು ಸುದ್ದಿ ರದ್ದಿ

ಸರಕಾರದ ಹಣ ಬದಲಾವಣೆ ನಿಯಮವನ್ನು ಮುರಿದ ಕಾರಣಕ್ಕಾಗಿ ಕಳೆದ ವಾರ ಆಕ್ಸಿಸ್ ಬ್ಯಾಂಕ್ ಶಾಖೆಯೊಂದರಲ್ಲಿ ಹತ್ತೊಂಬತ್ತು ಸಿಬ್ಬಂದಿಯನ್ನು ಅಮಾನತು ಮಾಡಿದ್ದೇವೆ ಎಂದು ತಿಳಿಸಿತ್ತು. ಇದು ಹಲವಾರು ಊಹಾಪೋಹಗಳಿಗೆ ಕಾರಣವಾಗಿತ್ತು.

|
Google Oneindia Kannada News

ಮುಂಬೈ, ಡಿಸೆಂಬರ್ 12: ಆಕ್ಸಿಸ್ ಬ್ಯಾಂಕ್ ಪರವಾನಗಿಯನ್ನು ರದ್ದುಗೊಳಿಸಲು ರಿಸರ್ವ್ ಬ್ಯಾಂಕ್ ಸಿದ್ಧತೆ ನಡೆಸಿದೆ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯು ಸುಳ್ಳು ಹಾಗೂ ದುರುದ್ದೇಶಪೂರಿತವಾದದ್ದು, ಬ್ಯಾಂಕ್ ನಲ್ಲಿ ಎಲ್ಲವೂ ಹತೋಟಿಯಲ್ಲಿದೆ. ರಿಸರ್ವ್ ಬ್ಯಾಂಕ್ ನ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ನಲ್ಲಿ ಸೋಮವಾರ ಸಂಜೆ ವರದಿ ಮಾಡಿದೆ.

ಆಕ್ಸಿಸ್ ಬ್ಯಾಂಕ್ ಭಾರತದ ಮೂರನೇ ಅತಿ ದೊಡ್ಡ ಖಾಸಗಿ ಬ್ಯಾಂಕ್. ಸರಕಾರದ ಹಣ ಬದಲಾವಣೆ ನಿಯಮವನ್ನು ಮುರಿದ ಕಾರಣಕ್ಕಾಗಿ ಕಳೆದ ವಾರ ಆಕ್ಸಿಸ್ ಬ್ಯಾಂಕ್ ಶಾಖೆಯೊಂದರಲ್ಲಿ ಹತ್ತೊಂಬತ್ತು ಸಿಬ್ಬಂದಿಯನ್ನು ಅಮಾನತು ಮಾಡಿದ್ದೇವೆ ಎಂದು ತಿಳಿಸಿತ್ತು. ಶನಿವಾರ ದೋ ಪಹಾರ್ ಹಿಂದಿ ಪತ್ರಿಕೆಯಲ್ಲಿ ಆಕ್ಸಿಸ್ ಬ್ಯಾಂಕ್ ಪರವಾನಗಿ ರದ್ದು ಆಗುತ್ತದೆ ಎಂದು ವರದಿಯಾಗಿತ್ತು. ಅದಕ್ಕೆ ಬ್ಯಾಂಕ್ ಪ್ರತಿಕ್ರಿಯೆ ನೀಡಿದೆ.[ಚಾಂದಿನಿ ಚೌಕ್ ಶಾಖೆ ಬ್ಯಾಂಕ್ ನಕಲಿ ಖಾತೆಗಳಲ್ಲಿ ಸಿಕ್ಕಿದ್ದು 100 ಕೋಟಿ!]

Axis bank

ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ, ಬ್ಯಾಂಕ್ ಉದ್ಯೋಗಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕಾರಣಕ್ಕೆ ಇಂಥ ಸುದ್ದಿ ಹಬ್ಬಿಸಲಾಗುತ್ತದೆ. ಮತ್ತು ಬ್ಯಾಂಕ್ ನ ಹೆಸರು ಕೆಡಿಸುವ ಉದ್ದೇಶ ಇದೆ ಎಂದು ಷೇರು ಮಾರುಕಟ್ಟೆಗೆ ಮಾಹಿತಿ ನೀಡಲಾಗಿದೆ. ಸೋಮವರ ಮಧ್ಯಾಹ್ನದ ಅವಧಿಯಲ್ಲಿ ಶೇ 2.5ರಷ್ಟು ಇಳಿದ ಆಕ್ಸಿಸ್ ಬ್ಯಾಂಕ್ ಷೇರುಗಳು 445ಕ್ಕೆ ಕುಸಿಯಿತು.[ಬೆಂಗಳೂರಿನ ಕೆನರಾ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮೇಲೆ ದಾಳಿ]

English summary
Axis Bank on Monday slammed a regional newspaper report stating authorities were preparing to revoke the bank's licence as "false and malafide", saying it had strong systems and controls in place as per central bank rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X