• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ವಿನಿಮಯ ಮೀಸಲು ದಾಖಲೆಯ ಹೆಚ್ಚಳ:507 ಬಿಲಿಯನ್ ಡಾಲರ್ ಗೆ ಏರಿಕೆ

|
Google Oneindia Kannada News

ನವದೆಹಲಿ, ಜುಲೈ 4: ಭಾರತದ ವಿದೇಶಿ ವಿನಿಮಯ ಮೀಸಲು ದಾಖಲೆಯ ಏರಿಕೆ ಕಂಡಿದ್ದು ಈ ವಾರ 1.27 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ. ಕಳೆದ ವಾರ ತೀವ್ರ ಕುಸಿತ ಕಂಡಿದ್ದ ವಿದೇಶಿ ವಿನಿಮಯ ಮೀಸಲು 506.84 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಆರ್‌ಬಿಐನ ಅಂಕಿಂಶಗಳಿಂದ ತಿಳಿದುಬಂದಿದೆ.

ಜೂನ್ 19ರಂದು ಮುಕ್ತಾಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 2.08 ಬಿಲಿಯನ್ ಡಾಲರ್ ನಷ್ಟು ಇಳಿಕೆಯಾಗಿ 505.57 ಬಿಲಿಯನ್ ಡಾಲರ್ ಗೆ ಕುಸಿದಿತ್ತು. ಆದರೆ ಈ ವಾರ ಭಾರೀ ಏರಿಕೆ ಕಂಡಿದ್ದು, ವಿಶ್ವದ ಐದನೇ ಅತಿದೊಡ್ಡ ವಿದೇಶಿ ವಿನಿಮಯ ಸಂಗ್ರಹವನ್ನು ಭಾರತ ಹೊಂದಿದೆ. 500 ಶತಕೋಟಿಗೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿದೆ.

ತೆರಿಗೆ ಸಂಗ್ರಹ ಇಳಿಕೆ, ವಿತ್ತೀಯ ಕೊರತೆ ಹೆಚ್ಚಳತೆರಿಗೆ ಸಂಗ್ರಹ ಇಳಿಕೆ, ವಿತ್ತೀಯ ಕೊರತೆ ಹೆಚ್ಚಳ

ಚಿನ್ನದ ಮೀಸಲು 707 ಮಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 33.52 ಬಿಲಿಯನ್ ಡಾಲರ್ ನಷ್ಟಾಗಿದೆ. ಐಎಂಎಫ್ ನಿಂದ ವಿಶೇಷವಾಗಿ ಹಿಂತೆಗೆಯಬಹುದಾದ ಹಕ್ಕುಗಳ ಮೊತ್ತ 3 ಮಿಲಿಯನ್ ಡಾಲರ್ ನಷ್ಟು ಕಡಿಮೆ ಮಾಡಲಾಗಿದ್ದು 1.44 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ.

ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲೂ, ಮಾರುಕಟ್ಟೆಯ ಚಂಚಲತೆಗೆ ವಿರುದ್ಧವಾದ ಸಂಗ್ರಹ ಇದಾಗಿದೆ. ವಿದೇಶಿ ಹೂಡಿಕೆದಾರರು ಮತ್ತು ಕ್ರೆಡಿಟ್ ರೇಟಿಂಗ್ ಕಂಪೆನಿಗಳು ಆರ್ಥಿಕ ದೃಷ್ಟಿಕೋನವು ಕ್ಷೀಣಿಸುತ್ತಿದ್ದರೂ, ನಾಲ್ಕು ದಶಕಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಆರ್ಥಿಕತೆಯ ಮೊದಲ ಸಂಕೋಚನದ ಹೊರತಾಗಿಯೂ ಸರ್ಕಾರವು ತನ್ನ ಸಾಲ ಬಾಧ್ಯತೆಗಳನ್ನು ಪೂರೈಸಬಲ್ಲದು ಎಂದು ಸಮಾಧಾನ ನೀಡುತ್ತದೆ.

English summary
India has accumulated the world’s fifth-largest foreign exchange reserves at more than $500 billion, making it a bright spot in an otherwise dismal economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X