ಐಟಿ ಸಿಟಿಗೆ ಮತ್ತೊಂದು ಗರಿಮೆ: ಆಪಲ್ ಐಒಎಸ್ ಘಟಕ

Written By:
Subscribe to Oneindia Kannada

ಬೆಂಗಳೂರು, ಮೇ. 18: ಐಟಿ ಸಿಟಿ ಬೆಂಗಳೂರಿಗೆ ಮತ್ತೊಂದು ಗರಿಮೆ ಸಿಕ್ಕಿದೆ. ಮೊಬೈಲ್ ದಿಗ್ಗಜ ಆಪಲ್ ಬೆಂಗಳೂರಿನಲ್ಲಿ ಐಒಎಸ್ ಡೆವಲಪರ್ ಘಟಕ ಸ್ಥಾಪನೆಗೆ ಮುಂದಾಗಿದೆ.

ಕಂಪನಿ ಬೆಂಗಳೂರಿನಲ್ಲಿ ಡಿಸೈನ್ ಮತ್ತು ಡಿವಲಪ್ ಮೆಂಟ್ ಅಕ್ಸಲೇಟರ್ ಸ್ಥಾಪನೆ ಮಾಡಲಿದೆ. ಈ ಬಗ್ಗೆ ಕಂಪನಿ ಮುಂಬೈನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಹೊಸ ಅಪ್ಲಿಕೇಶನ್ ಮತ್ತು ಟೂಲ್ಸ್ ಬಳಕೆಗೆ ಈ ಡಿವಲಪರ್ ನೆರವಾಗಲಿದೆ. ನಿಗದಿಯಂತೆ 2017 ರ ಆರಂಭದಲ್ಲಿ ಕಂಪನಿ ಘಟಕ ಕೆಲಸ ಆರಂಭಮಾಡಲಿದೆ.[60 ಸೆಕೆಂಡ್ಸ್ ಅಪ್ಲಿಕೇಷನ್ ಐಒಸ್ ನಲ್ಲೂ ಈಗ ಲಭ್ಯ]

apple

ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ಕರೆಸಿಕೊಂಡಿರುವ ಬೆಂಗಳೂರಿಗೆ ಮತ್ತೊಂದು ಕೊಡುಗೆ ಸಿಕ್ಕಂತೆ ಆಗಲಿದೆ. ಇಂಜಿನಿಯರಿಂಗ್ ಮುಗಿಸಿದ ನವತರುಣರಿಗೆ ಇದೊಂದು ಅತ್ಯುತ್ತಮ ಉದ್ಯೋಗವಕಾಶ ನೀಡುವ ಕಂಪನಿಯಾಗಿ ಕಾಣಿಸಿಕೊಳ್ಳಲಿದೆ.[ಸ್ಟೀವ್ ಜಾಬ್ಸ್ ನಮೋಸಗಾರನಾ?]

ಬೆಂಗಳೂರು ಮತ್ತು ಭಾರತದ ಮಾರುಕಟ್ಟೆಯಲ್ಲೂ ಹೊಸ ಬೆಳವಣಿಗೆ ಬದಲಾವಣೆ ತರಲಿದ್ದು ಅಪಾರ ಪ್ರಮಾಣದ ಜನರಿಗೆ ಉದ್ಯೋಗ ಕಲ್ಪಿಸಿಕೊಡುವುದರಲ್ಲಿ ಅನುಮಾನವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
US tech giant Apple Inc on Wednesday announced setting up a software laboratory in Bengaluru to support startups and developers working on the company's iOS platform as its Chief Executive Tim Cook began his maiden visit to India. Cook, who arrived in Mumbai late last night, is also slated to unveil a development center for maps in Hyderabad tomorrow. His four-day tour of India may also feature a meeting with Prime Minister Narendra Modi on Saturday.
Please Wait while comments are loading...