ಚೀನಾ ಮೊಬೈಲ್ ಫೋನ್ ಮೇಲೆ ಸುಂಕ ಹೆಚ್ಚಳ!
ನವದೆಹಲಿ, ಏಪ್ರಿಲ್ 28: ಚೀನಾದ ಮೊಬೈಲ್ ಉತ್ಪಾದಕ ಕಂಪನಿಗಳಾದ ಹುವೈ, ಝುಡ್ಟಿಇ ಮತ್ತು ಅಲ್ಕಾಟೆಲ್ ಲ್ಯುಸೆಂಟ್ಗಳ ಉತ್ಪನ್ನಗಳ ಆಮದಿನ ಮೇಲೆ ಕೇಂದ್ರ ಸರ್ಕಾರಟಿ ಆಂಟಿ ಡಂಪಿಂಗ್ ಸುಂಕ ಹಾಕುತ್ತಿದೆ.
'Synchronous Digital Hierarchy Transmission Equipment (SDHTE) ಗಳ ಮೇಲೆ ಶೇ. 9.42ರಿಂದ 86.59ರವರೆಗೆ Anti dumping ತೆರಿಗೆ ವಿಧಿಸಲಾಗುತ್ತದೆ. ಚೀನಾ ಕಂಪನಿಗಳಿಂದ ದೇಶೀಯ ಉದ್ಯಮವನ್ನು ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅತಿ ಕಡಿಮೆ ಬೆಲೆಗೆ ಆಮದಾಗುವ ಚೀನಾ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಡಂಪಿಂಗ್ ತೆರಿಗೆ ವಿಧಿಸಲಾಗುತ್ತಿದೆ.

ಸುವುದರಿಂದ ಅವುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಆ ಕಂಪನಿಗಳಿಗೆ ಕಷ್ಟವಾಗಲಿದೆ. ಇದು ಭಾರತದ ಕಂಪನಿಗಳಿಗೆ ವರದಾನವಾಗಲಿದೆ.
ಝುಡ್ಟಿಇ ಗ್ರೂಪ್ ಉತ್ಪನ್ನಗಳ ಮೇಲೆ ಶೇ. 48.42, ಅಲ್ಸಟೆಲ್ ಲ್ಯುಸೆಂಟ್ ಉತ್ಪನ್ನಗಳ ಮೇಲೆ ಶೇ. 54.09 ಮತ್ತು ಹುವೈ ಉತ್ಪನ್ನಗಳ ಮೇಲೆ ಶೇ. 37.73 ಆಂಟಿ ಡಂಪಿಂಗ್ ತೆರಿಗೆ ವಿಧಿಸಲಾಗಿದೆ. ಚೀನಾ, ಇಸ್ರೇಲ್ನಿಂದ ಆಮದು ಮಾಡುವ ಉತ್ಪನ್ನಗಳ ಮೇಲೆ 2010ರಲ್ಲಿ ಐದು ವರ್ಷಗಳ ಅವಧಿಗೆ ಆಂಟಿ ಡಂಪಿಂಗ್ ತೆರಿಗೆ(ಶೇ 266%) ವಿಧಿಸಲಾಗಿತ್ತು. ಈಗ ಆಂಟಿ ಡಂಪಿಂಗ್ ಕ್ರಮವನ್ನು ಏಪ್ರಿಲ್ 25, 2021ರ ತನಕ ಮುಂದುವರೆಸಲಾಗುತ್ತದೆ.












Click it and Unblock the Notifications