ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ಬರೆ: ಮೊಸರು, ಲಸ್ಸಿ, ಮಜ್ಜಿಗೆ ದರ ಹೆಚ್ಚಿಸಿದ ಅಮುಲ್

|
Google Oneindia Kannada News

ನವದೆಹಲಿ,ಜುಲೈ. 20: ಭಾರತದ ಅತಿದೊಡ್ಡ ಡೈರಿ ಉತ್ಪನ್ನಗಳ ಸಂಸ್ಥೆ ಅಮುಲ್ ತನ್ನ ಕೆಲವು ಉತ್ಪನ್ನಗಳ ಬೆಲೆಯನ್ನು 1ರಿಂದ 4 ರುಪಾಯಿವರೆಗೆ ಜುಲೈ 19ರಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಿದೆ.

ಆಹಾರ ಧಾನ್ಯಗಳು, ಪ್ಯಾಕ್ ಮಾಡಿದ ಮೊಸರು, ಲಸ್ಸಿ, ಮಜ್ಜಿಗೆ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸುವ ಜಿಎಸ್‌ಟಿ ಕೌನ್ಸಿಲ್‌ನ ನಿರ್ಧಾರವು ಜಾರಿಗೆ ಬಂದ ಮೇಲೆ ಈ ಬೆಲೆ ಏರಿಕೆ ಕ್ರಮವನ್ನು ಅಮುಲ್‌ ಮಾಡಿದೆ.

ಅಮುಲ್ ಬ್ರ್ಯಾಂಡ್ ಹೊಂದಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಆರ್. ಎಸ್. ಸೋಧಿ ಪ್ರಕಾರ, 400 ಎಂಎಲ್‌ ಮೊಸರು ಪೌಚ್ ಬೆಲೆ 30 ರಿಂದ 32 ರೂ.ಗೆ ಮತ್ತು 1 ಲೀಟರ್‌ ಮೊಸರು ಪೌಚ್ 65ರೂ. ನಿಂದ ರೂ 69 ರುಪಾಯಿಗೆ ಏರಿಸಿದೆ. 200 ಎಂಎಲ್‌ ಕಪ್ ಮೊಸರಿನ ಬೆಲೆ 1 ರೂ. ಏರಿಕೆಯಾಗಿದೆ. ಅಂದರೆ ಹಿಂದಿನ 20 ರೂ.ನಿಂದ ಈಗ 21 ರೂ.ಗೆ ಏರಿಕೆ ಕಂಡಿದೆ. ಹಿಂದಿನ 40 ರೂ.ಗೆ ಹೋಲಿಸಿದರೆ 400 ಎಂಎಲ್‌ ಮೊಸರು ಈಗ 42 ರೂ. ಆಗಿದೆ.

Amul increases price of buttermilk, curd, lassi after 5% GST imposition

ಹಾಗೆಯೇ ಮಜ್ಜಿಗೆ (500 ಎಂಎಲ್ ಪೌಚ್) ದರವನ್ನು 15ರಿಂದ 16 ರುಪಾಯಿಗೆ ಹೆಚ್ಚಿಸಲಾಗಿದೆ. ಲಸ್ಸಿ (170 ಎಂಎಲ್ ಪೌಚ್) ಬೆಲೆ 1 ರೂ. ಏರಿಕೆಯಾಗಿದೆ. 200 ಮಿಲಿ ಎಂಎಲ್‌ ಲಸ್ಸಿ ಈ ಹಿಂದೆ ಇದ್ದ 10 ರೂ.ನಿಂದ ಈಗ 11 ರೂ. ಆಗಿದೆ. 85 ಗ್ರಾಂ ಸಾದಾ ಮೊಸರು, 85 ಗ್ರಾಂ ಮಿಷ್ಟಿ ದೋಯಿ ಬೆಲೆ ಬದಲಾಗದೆ ಉಳಿದಿದೆ. ಇದರಿಂದ ಇತರ ಡೈರಿಗಳು ಈ ವಸ್ತುಗಳ ಬೆಲೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಜಿಎಸ್‌ಟಿ ಏರಿಕೆಯು ಡೈರಿ ಕಂಪನಿಗಳ ಹಣಕಾಸಿನ ಮೇಲೆ 2-3% ಪರಿಣಾಮ ಬೀರುತ್ತದೆ ಎಂದು ಈ ಹಿಂದೆ ಬಿಡುಗಡೆಯಾದ ಐಸಿಐಸಿಐ ಸೆಕ್ಯುರಿಟಿಗಳ ಟಿಪ್ಪಣಿ ತಿಳಿಸಿದೆ. ಬ್ರೋಕರೇಜ್ ಸಂಸ್ಥೆಯ ಪ್ರಕಾರ, ಡೈರಿ ಕಂಪನಿಗಳ ಆದಾಯವು 15-25% ಮೊಸರು ಮತ್ತು ಲಸ್ಸಿ ಮಾರಾಟದಿಂದ ಬರುತ್ತದೆ. ತೆರಿಗೆ ಬದಲಾವಣೆಗಳ ಹೊರತಾಗಿಯೂ ಮಾರುಕಟ್ಟೆ ವಲಯದ ಬೆಳವಣಿಗೆಯ ನಿರೀಕ್ಷೆಗಳು ಧನಾತ್ಮಕವಾಗಿ ಉಳಿದಿದೆ ಎನ್ನಲಾಗಿದೆ.

Amul increases price of buttermilk, curd, lassi after 5% GST imposition

ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 18ರ ಸೋಮವಾರದಿಂದ ಪ್ರೀ- ಪ್ಯಾಕೇಜ್ ಮಾಡಿದ ಉತ್ಪನ್ನಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗಿತ್ತು. 25 ಕೆಜಿ ಅಥವಾ ಅದಕ್ಕಿಂತ ಕಡಿಮೆ ಪ್ಯಾಕಿಂಗ್‌ನಲ್ಲಿ ಬ್ರಾಂಡ್ ಮಾಡದ ಉತ್ಪನ್ನಗಳು ವ್ಯಾಪ್ತಿಗೆ ಸೇರಿದ್ದವು. ವಿವಿಧ ಹಿಟ್ಟು, ರವೆ, ಮೈದಾ ಮೇಲೆ ಶೇ 5ರಷ್ಟು ಜಿಎಸ್‌ಟಿ ಹೆಚ್ಚಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ 120 ರೂ.ಗಳ 5 ಕೆಜಿ ಹಿಟ್ಟಿನ ಪ್ಯಾಕೆಟ್ 126 ರೂ., 235 ರೂ.ಗಳ 10 ಕೆಜಿ ಹಿಟ್ಟಿನ ಪ್ಯಾಕೆಟ್ 250 ರೂ. 25 ರೂ.ಗೆ ಇದ್ದ ಒಂದು ಕೆಜಿ ರವೆ, ಮೈದಾ ಪ್ಯಾಕೆಟ್ ಈಗ 26 ರೂ.ಗೆ ಏರಿಕೆಯಾಗಿತ್ತು.

English summary
India's largest dairy products company Amul has hiked the prices of some of its products by Rs 1 to Rs 4 with effect from July 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X