• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಕೇಶ್ ಅಂಬಾನಿ ಕುಟುಂಬದ ಸಂಪತ್ತು ಏಷ್ಯಾದ 2ನೇ ಶ್ರೀಮಂತ ಕುಟುಂಬಕ್ಕಿಂತ 2 ಪಟ್ಟು ಹೆಚ್ಚಿದೆ

|

ಮುಂಬೈ, ಡಿಸೆಂಬರ್ 01: ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿ. ಜಗತ್ತಿನ ಟಾಪ್ 10 ಶ್ರೀಮಂತ ವ್ಯಕ್ತಿಗಳಲ್ಲಿ ಕೂಡ ಒಬ್ಬರು. ಇದರ ಜೊತೆಗೆ ಇವರದ್ದು ಏಷ್ಯಾದ ಅತ್ಯಂತ ಶ್ರೀಮಂತ ಕುಟುಂಬವಾಗಿದೆ.

ಇದೀಗ ಮತ್ತೊಂದು ವಿಚಾರ ಏನಂದ್ರೆ ಮುಕೇಶ್ ಅಂಬಾನಿ ಕುಟುಂಬದ ಸಂಪತ್ತು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಏಷ್ಯಾದ ಎರಡನೇ ಶ್ರೀಮಂತ ಕುಟುಂಬದ ಸಂಪತ್ತಿಗಿಂತ ಎರಡು ಪಟ್ಟು ಹೆಚ್ಚಿದೆ.

ಜಿಯೋಗೆ 33,737 ಕೋಟಿ ರೂ. ಪಾವತಿ ಮಾಡಿದ ಗೂಗಲ್: ಶೇ. 7.73ರಷ್ಟು ಪಾಲು

ಏಷ್ಯಾದ 20 ಶ್ರೀಮಂತ ರಾಜವಂಶಗಳ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕುಟುಂಬವು ಟಾಪ್ 20 ಶ್ರೀಮಂತ ಕುಟುಂಬಗಳಲ್ಲಿ ಯಾರ ಹತ್ತಿರವೂ ನಿಲುಕದಷ್ಟು ಎತ್ತರದಲ್ಲಿದೆ. ಏಷ್ಯಾದ ಎರಡನೇ ಶ್ರೀಮಂತರಾದ ಹಾಂಕಾಂಗ್‌ನ ಕ್ವಾಕ್ಸ್ಗಿಂತ ಎರಡು ಪಟ್ಟು ಹೆಚ್ಚು ಶ್ರೀಮಂತವಾಗಿದೆ ಎಂದು ಸೂಚಿಸುತ್ತದೆ.

ಇನ್ನು ದಕ್ಷಿಣ ಕೊರಿಯಾದ ಪ್ರಮುಖ ಲೀ ಕುಟುಂಬದ ಮೂರು ಪಟ್ಟು ಸಂಪತ್ತನ್ನು ಹೊಂದಿದೆ ಮತ್ತು ಜಪಾನ್‌ನ ಟೋರಿ ಮತ್ತು ಸಾಜಿ ಕ್ಲಾನ್ ಕುಟುಂಬಗಳಿಗಿಂತ ಐದು ಪಟ್ಟು ಹೆಚ್ಚು ಶ್ರೀಮಂತರಾಗಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಏಷ್ಯಾದ 20 ಶ್ರೀಮಂತ ಕುಟುಂಬಗಳ ಒಟ್ಟು ಸಂಪತ್ತು 463 ಬಿಲಿಯನ್ ಡಾಲರ್ ಆಗಿದ್ದು, ಅದರಲ್ಲಿ ಅಂಬಾನಿ ಕುಟುಂಬವೊಂದೇ ಶೇಕಡಾ 16ರಷ್ಟು ಹಣವನ್ನು ಹೊಂದಿದೆ.

2019 ರಲ್ಲಿ ರ್ಯಾಂಕಿಂಗ್ ಹೊರಬಂದಾಗಿನಿಂದ ಅವರ 76 ಬಿಲಿಯನ್ ಡಾಲರ್ ಸಂಪತ್ತು ಮೊದಲಿಗಿಂತ 25 ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ.

English summary
The cumulative wealth among the top 20 richest families in Asia amounts to $463 billion, with the Ambanis holding about 16% of that amount.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X