ಬೆಂಗಳೂರಿನಿಂದ ವಿಶಾಖಪಟ್ಟಣ ಆಕಾಶ ಏರ್‌ನಿಂದ ನೇರ ವಿಮಾನಯಾನ
ಬೆಂಗಳೂರು, ನವೆಂಬರ್ 20: ಡಿಸೆಂಬರ್ 10ರಿಂದ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ವಿಮಾನ ಸೇವೆಯನ್ನು ದೇಶಿಯ ವಿಮಾನ ಸಂಸ್ಥೆ ಆಕಾಶ್ ಏರ್ ಘೋಷಿಸಿದೆ. ಇದು ಈ ವರ್ಷದ ಆಗಸ್ಟ್‌ನಲ್ಲಿ ಪ್ರಾರಂಭವಾದಾಗಿನಿಂದ ಏರ್‌ಲೈನ್‌ನ 10ನೇ ತಾಣವಾಗಿದೆ.
ಆಕಾಶ್ ವಿಮಾನಯಾನ ಸಂಸ್ಥೆಯು ಇತ್ತೀಚೆಗೆ ನವೆಂಬರ್ 26ರಿಂದ ಪುಣೆ ಮತ್ತು ಬೆಂಗಳೂರನ್ನು ಎರಡು ದೈನಂದಿನ ವಿಮಾನ ಸೇವೆಗಳನ್ನು ಪ್ರಾರಂಭಿಸಿತ್ತು. ಈ ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ವಿಮಾನ ಸೇವೆ ಆರಂಭಿಸುವುದಾಗಿ ಕೇಳಿತ್ತು. ನಾಗರಿಕರ ಬೇಡಿಕೆ ಹೆಚ್ಚಾದ ಕಾರಣ ಡಿಸೆಂಬರ್ 17ರಿಂದ ಪ್ರಾರಂಭವಾಗುವುದ ಬೆಂಗಳೂರಿನಿಂದ ಅಹಮದಾಬಾದ್‌ಗೆ ವಿಮಾನಸೇವೆ ಆರಂಭಿಸುವುದಾಗಿ ಆಕಾಶ್ ಏರ್ ತಿಳಿಸಿದೆ.
ಆಕಾಶ ಏರ್ ಬೆಂಗಳೂರು ಹಾಗೂ ವಿಶಾಖಪಟ್ಟಣಂ ಮಾರ್ಗದಲ್ಲಿ ಎರಡು ದೈನಂದಿನ ವಿಮಾನಗಳನ್ನು ಪ್ರಾರಂಭಿಸಲಿದ್ದು, ಮೊದಲ ಆವರ್ತನವು ಡಿಸೆಂಬರ್ 10 ರಿಂದ ಮತ್ತು ಎರಡನೇ ಆವರ್ತನವು ಡಿಸೆಂಬರ್ 12 ರಿಂದ ಪ್ರಾರಂಭವಾಗುತ್ತದೆ ಎಂದು ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಈ ಸೇವೆಯೊಂದಿಗೆ ಮುಂಬೈ, ಅಹಮದಾಬಾದ್, ದೆಹಲಿ, ಚೆನ್ನೈ, ಕೊಚ್ಚಿ, ಗುವಾಹಟಿ ಪುಣೆ ಹಾಗೂ ವಿಶಾಖಪಟ್ಟಣಂ ಎಂಬ ಎಂಟು ನಗರಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಆಕಾಶ್ ಏರ್ ಈಗ 24 ಗಂಟೆಗಳ ತಡೆರಹಿತ ವಿಮಾನಗಳ ಸೇವೆಗಳನ್ನು ನೀಡುತ್ತಿದೆ. 10 ಸ್ಥಳಗಳಲ್ಲಿ ಎಂಟು ಬೆಂಗಳೂರಿನೊಂದಿಗೆ ಸಂಪರ್ಕ ಹೊಂದಿವೆ ಎಂದು ಅದು ಹೇಳಿದೆ.

ಅಕಾಶ್ ತನ್ನ ಕಾರ್ಯಾಚರಣೆಯನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದೆ. ಡಿಸೆಂಬರ್ ಮಧ್ಯದ ವೇಳೆಗೆ 10 ನಗರಗಳಲ್ಲಿ ಒಟ್ಟು ಹದಿನಾಲ್ಕು ಮಾರ್ಗಗಳಲ್ಲಿ 450 ವೀಕ್ಲಿ ವಿಮಾನಗಳ ಸೇವೆಯನ್ನು ನೀಡುವ ನಿರೀಕ್ಷೆಯಿದೆ. ನಾವು ವಿಶಾಖಪಟ್ಟಣಂಗೆ ನಮ್ಮ ಸೇವೆಯನ್ನು ವಿಸ್ತರಿಸುತ್ತಿದ್ದು, ನಾಲ್ಕನೇ ಪ್ರಮುಖ ತಾಣವಾಗಿ ಪ್ರತಿದಿನ ಎರಡನೆ ಬಾರಿ ವಿಶಾಖಪಟ್ಟಣಂ ಹಾಗೂ ಬೆಂಗಳೂರು ನಡುವೆ ವಿಮಾನ ಸೇವೆ ಆರಂಭಿಸುತ್ತಿದ್ದೇವೆ.

ನಮ್ಮ ವಿಮಾನ ಸೇವೆಗಳ ಹೆಚ್ಚಳಕ್ಕೆ ವಿಶಾಖಪಟ್ಟಣಂಗೆ 2 ಬಾರಿ ವಿಮಾನ ಸೇವೆ ಪ್ರಾರಂಭಿಸುತ್ತಿದ್ದೇವೆ. ಇದರೊಂದಿಗೆ ಹೆಚ್ಚು ಬೇಡಿಕೆ ಇರುವ ಬೆಂಗಳೂರು ಅಹಮದಾಬಾದ್ ಹಾಗೂ ಬೆಂಗಳೂರು ಪುಣೆ ಮಾರ್ಗವಾಗಿ ತಲಾ ಒಂದು ವಿಮಾನಗಳನ್ನು ಆರಂಭಿಸಲಾಗುತ್ತಿದೆ ಎಂದು ಆಕಾಶ್ ಏರ್‌ನ ಸಹ ಸಂಸ್ಥಾಪಕ ಪ್ರವೀಣ್ ಅಯ್ಯರ್ ತಿಳಿಸಿದ್ದಾರೆ.












Click it and Unblock the Notifications