ಯೋಗ ಆಯ್ತು, ಈಗ ಖಾದಿಗೆ ವಿಶ್ವ ಮನ್ನಣೆ ತರಲು ನಿರ್ಧಾರ

Posted By:
Subscribe to Oneindia Kannada

ನವದೆಹಲಿ, ಜುಲೈ 27: ಭಾರತೀಯ ಸಂಸ್ಕೃತಿಯ ಉಡುಗೊರೆಯಾದ ಯೋಗಾಭ್ಯಾಸಕ್ಕೆ ವಿಶ್ವ ಮನ್ನಣೆ ತಂದುಕೊಟ್ಟ ನಂತರ, ಇದೀಗ ಖಾದಿ ವಸ್ತ್ರಗಳಿಗೆ ಅಂತಾರಾಷ್ಟೀಯ ಮಾನ್ಯತೆ ತರುವ ವಿಶಿಷ್ಟ ಬಗೆಯ ತಂತ್ರಗಾರಿಕೆಯನ್ನು ರೂಪಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ವಿಶ್ವ ನಾನಾ ಭಾಗಗಳಲ್ಲಿ ಚದುರಿ ಹೋಗಿರುವ ಭಾರತೀಯ ಮೂಲದ ಜನರಿರುವ ಕಡೆಯಲ್ಲಿ ಈ ಖಾದಿಯ ಉತ್ಸವಗಳನ್ನು ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ರೇಮಂಡ್ಸ್ ಹಾಗೂ ಮುಂತಾದ ಕಂಪನಿಗಳ ಜತೆ ಕೇಂದ್ರ ಸರ್ಕಾರ ಕೈ ಜೋಡಿಸಲಿದೆ.

ದೂರದರ್ಶನದ ಲಾಂಛನ ಬದಲಿಸಲು ಕೇಂದ್ರ ಸರ್ಕಾರದ ನಿರ್ಧಾರ

2017-18ರ ಹಣಕಾಸು ವರ್ಷದಲ್ಲಿ ದೇಶೀಯ ಖಾದಿ ಉದ್ದಿಮೆಯು ಸುಮಾರು 2 ಸಾವಿರ ಕೋಟಿ ರು. ವಹಿವಾಟು ನಡೆಸುವಂತೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರಿಂದಾಗಿ, 1.95 ಉದ್ಯೋಗ ಸೃಷ್ಟಿಗೂ ಗಮನ ನೀಡಲಾಗಿದೆ.

ಸ್ವಾಭಿಮಾನದ ಪ್ರತೀಕ ಹುದಲಿಯ ಖಾದಿ ಉದ್ಯಮ

2014-15ರಲ್ಲಿ ಖಾದಿ ವಹಿವಾಟು 1,170 ಕೋಟಿ ರು. ಇದ್ದು, 2015-16ರಲ್ಲಿ ಇದು 1,510 ಕೋಟಿ ರು. ತಲುಪಿತ್ತಲ್ಲದೆ, ಶೇ. 32.83ರಷ್ಟು ಪ್ರಗತಿಯನ್ನು ಸಾಧಿಸಿತ್ತು. ಹಾಗಾಗಿ, ಖಾದಿ ಉದ್ದಿಮೆಯನ್ನು ಮತ್ತಷ್ಟು ಉತ್ತೇಜಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ.

(ಚಿತ್ರಗಳು: ಸಾಂದರ್ಭಿಕ)

ಖಾದಿ ವೈಶಿಷ್ಟ್ಯತೆ ಸಾರುವ ಪ್ರಯತ್ನ

ಖಾದಿ ವೈಶಿಷ್ಟ್ಯತೆ ಸಾರುವ ಪ್ರಯತ್ನ

ಯೋಜನೆಯ ಮೊದಲ ಹೆಜ್ಜೆಯಾಗಿ, ವಿವಿಧ ದೇಶಗಳ ಭಾರತೀಯ ರಾಯಭಾರಿ ಕಚೇರಿಗಳಲ್ಲಿಯೂ ಖಾದಿ ಪ್ರದರ್ಶನ, ಖಾದಿ ಕುರಿತ ವಿಚಾರ ಸಂಕಿರಣ ಮತ್ತಿತರ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಹೀಗೆ, ಹಂತ ಹಂತವಾಗಿ ಇದರ ಪ್ರಾಮುಖ್ಯತೆ, ಖಾದಿಯ ವೈಶಿಷ್ಟ್ಯಗಳನ್ನು ಸಾರಿ ಹೇಳುತ್ತಾ ಖಾದಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆಯ ಜವಳಿ ಉತ್ಪನ್ನವನ್ನಾಗಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಲಿದೆ.

ವಿದೇಶಿ ಮಾರುಕಟ್ಟೆಗಳ ಕಡೆ ಗುರಿ

ವಿದೇಶಿ ಮಾರುಕಟ್ಟೆಗಳ ಕಡೆ ಗುರಿ

ಇನ್ನು, ಈ ಯೋಜನೆಯ ಎರಡನೇ ಹೆಜ್ಜೆಯಾಗಿ, ವಿಶ್ವ ವಿವಿಧೆಡೆ ಇರುವ ಭಾರತೀಯರ, ಭಾರತೀಯ ಸಂಘ- ಸಂಸ್ಥೆಗಳ ಬೆಂಬಲದೊಂದಿಗೆ ಭಾರತೀಯರಿಗೆ ಖಾದಿ ವಸ್ತ್ರಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆನಂತರ, ಖಾದಿಯು ಹಂತ ಹಂತವಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಲಗ್ಗೆಯಿಡುವಂತೆ ತಂತ್ರಗಾರಿಕೆ ರೂಪಿಸಲಾಗುತ್ತದೆ.

ವಿದೇಶಗಳಲ್ಲೂ ಖಾದಿ ಷೋ ರೂಂ

ವಿದೇಶಗಳಲ್ಲೂ ಖಾದಿ ಷೋ ರೂಂ

ಮೂರನೇ ಹಾಗೂ ಅಂತಿಮ ಹಂತದಲ್ಲಿ, ವಿವಿಧ ದೇಶಗಳ ಹಣಕಾಸು ಇಲಾಖೆಯ ಸಹಯೋಗದೊಂದಿಗೆ ವಿವಿಧ ದೇಶಗಳಲ್ಲಿ ಖಾದಿ ಭಂಡಾರ, ಖಾದಿ ಶೋ ರೂಂಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ರೇಮಂಡ್ ನಂತ ಕಂಪನಿಗಳ ಸಾಥ್

ರೇಮಂಡ್ ನಂತ ಕಂಪನಿಗಳ ಸಾಥ್

ಈಗಾಗಲೇ, ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್ಐಎಫ್ ಟಿ), ಆದಿತ್ಯ ಬಿರ್ಲಾ ಹಾಗೂ ರೇಮಂಡ್ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು ಆ ಕಂಪನಿಗಳೂ ಖಾದಿಯನ್ನು ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಉತ್ತೇಜಿಸಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After yoga, the Narendra Modi government at the Centre is now increasingly looking to promote khadi as an international brand with a special focus on Indian diaspora.
Please Wait while comments are loading...