ನರೇಂದ್ರ ಆಡಳಿತ ವೈಖರಿ ಹೊಗಳಿದ ಮಹೀಂದ್ರ !
"ಹಸಿರು ವ್ಯಾಪಾರ ಎಂಬ ಆಯ್ಕೆಯು ಲಾಭಾಂಶವನ್ನು ನೀಡಲು ಆರಂಭಿಸಿದ ನಂತರ ಸರಕಾರದ ಸಬ್ಸಿಡಿಯ ಅಗತ್ಯ ಬರುವುದಿಲ್ಲ. ಆದರೆ ಸರಕಾರದಲ್ಲಿರುವ ನಾಯಕರು ಈ ರೀತಿಯ ಪ್ರಯತ್ನವನ್ನು ಬೆಂಬಲಿಸಬೇಕು. ದೇಶ ಸಾಗುವ ಹಾದಿಯ ಬಗ್ಗೆ ಸ್ಪಷ್ಟವಾಗಿ ಸಂವಹನ ನಡೆಸಬೇಕು. ಅದು ಹೇಗೆ ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಸೌರ ಶಕ್ತಿ ಬಗ್ಗೆ ಇರುವ ಬದ್ಧತೆಯನ್ನು ತೋರಿಸಿಕೊಂಡ ರೀತಿಯಲ್ಲಿ ಇರಬೇಕು".
-ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ರೀತಿಗೆ ಮಹೀಂದ್ರ ಅಂಡ್ ಮಹೀಂದ್ರದ ಅಧ್ಯಕ್ಷ ಆನಂದ್ ಮಹೀಂದ್ರ ವ್ಯಕ್ತಪಡಿಸಿರುವ ಅಭಿಪ್ರಾಯವಿದು. ಉದ್ಯಮಿ ರತನ್ ಟಾಟಾ ಕೂಡ ಈಚೆಗೆ ಇದೇ ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಆ ಸಾಲಿಗೆ ಹೊಸ ಸೇರ್ಪಡೆ ಆನಂದ್ ಮಹೀಂದ್ರ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪರಿಸರಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾತನಾಡಿ, ವ್ಯಾಪಾರವು ಸ್ಥಿರತೆಯನ್ನು ನಿರೀಕ್ಷಿಸುತ್ತದೆ. ಜತೆಗೆ ನಿರ್ದಿಷ್ಟ ದಾರಿಯನ್ನು ಬಯಸುತ್ತದೆ. ಆದರೆ ಅವಕಾಶಗಳು ಇದ್ದಾಗ ತುಂಬ ದೊಡ್ಡ ಪ್ರಮಾಣದಲ್ಲಿ ಇವು ಬೇಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅಂಥ ಬಹಳ ಪ್ರಯತ್ನಗಳಿಗೆ ಬೆಂಬಲ ನೀಡುತ್ತಿದ್ದಾರೆ. 2030ರ ವೇಳೆಗೆ ಭಾರತದಲ್ಲಿನ ಎಲ್ಲ ವಾಹನಗಳು ಎಲೆಕ್ಟ್ರಿಸಿಟಿ ಮೂಲಕ ಚಲಿಸಬೇಕು ಎಂಬ ಗುರಿ ಇದೆ. 2030ಕ್ಕೂ ಮೊದಲೇ ಎಲೆಕ್ಟ್ರಿಕ್ ವಾಹನಗಳಿಗೆ ಮಾರುಕಟ್ಟೆ ಸೃಷ್ಟಿಸಲು ನೀಲಿ ನಕಾಶೆ ಸಿದ್ಧಪಡಿಸಿದೆ. ಎಂದು ಅಧಿಕಾರಿಯೊಬ್ಬರು ನವದೆಹಲಿಯಲ್ಲಿ ಬುಧವಾರ ಹೇಳಿದ್ದಾರೆ.
ಅಂದಹಾಗೆ ಸದ್ಯಕ್ಕೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿರುವ ಭಾರತದ ಏಕೈಕ ಕಂಪೆನಿ ಮಹೀಂದ್ರ ಅಂಡ್ ಮಹೀಂದ್ರ. "ಸರಕಾರವು ಉದ್ಯಮಿಗಳ ಪಾಲಿಗೆ ಸಹಾಯಕವಾಗಿದೆ. ಆದರೆ ನಿರ್ಧಾರವು ಹೂಡಿಕೆ ಮಾಡುವ ಕಂಪೆನಿಗಳ ಮೇಲೆ ಆಧಾರ ಪಟ್ಟಿದೆ" ಎಂದು ಅವರು ಹೇಳಿದ್ದಾರೆ.












Click it and Unblock the Notifications