ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್ಜಿ ಬದಲಿಗೆ ಬರಲಿದೆ ಫೌಜಿ ಗೇಮ್: ಮೇಡ್ ಇನ್ ಇಂಡಿಯಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 04: ಚೀನಾ ಮೂಲದ ಗೇಮಿಂಗ್ ಆ್ಯಪ್ ಪಬ್ಜಿ ಸೇರಿದಂತೆ 118 ಆ್ಯಪ್‌ಗಳನ್ನು ಐಟಿ ಸಚಿವಾಲಯವು ಇತ್ತೀಚೆಗಷ್ಟೇ ನಿಷೇಧಗೊಳಿಸಿತು. ಆದರೆ ಇದು ನಿರ್ಧಾರ ಹೊರಬಿದ್ದು ಎರಡು ದಿನದಲ್ಲಿ ಪಬ್ಜಿ ರೀತಿಯ ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಸದ್ಯದಲ್ಲೇ ಬರಲಿದೆ ಎಂದು ಸುದ್ದಿಯಾಗಿದೆ.

ಈ ಹೊಸ ಗೇಮಿಂಗ್ ಅಪ್ಲಿಕೇಶನ್ ಕುರಿತು ಸ್ವತಃ ಬಾಲಿವುಡ್ ನಟ ಅಕ್ಷಯ್ ಕುಮಾರ್ ಘೋಷಣೆ ಮಾಡಿದ್ದು, ಅದರ ಹೆಸರು ಫೌಜಿ (FAU-G).

After Pubg Ban Akshay Kumar Unveils Made In India Alternative FAU-G

 ಭಾರತದಲ್ಲಿ ಪಬ್ಜಿ ಬ್ಯಾನ್ : ಟೆನ್ಸೆಂಟ್ ಕಂಪನಿಗೆ 1 ಲಕ್ಷ ಕೋಟಿ ರೂಪಾಯಿ ನಷ್ಟ ಭಾರತದಲ್ಲಿ ಪಬ್ಜಿ ಬ್ಯಾನ್ : ಟೆನ್ಸೆಂಟ್ ಕಂಪನಿಗೆ 1 ಲಕ್ಷ ಕೋಟಿ ರೂಪಾಯಿ ನಷ್ಟ

ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಬರ ಭಾರತ ಅಭಿಯಾನಕ್ಕೆ ಪ್ರೋತ್ಸಾಹ ತುಂಬ ಮತ್ತು ಅದರಿಂದ ಪ್ರೇರೇಪಿತಗೊಂಡು ಫೌಜಿ ಅಪ್ಲಿಕೇಶನ್‌ ಅನ್ನು ಭಾರತದಲ್ಲಿಯೇ ಅಭಿವೃದ್ಧಿ ಪಡಿಸಲಾಗಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ವಿಶೇಷ ಅಂದರೆ ಭಾರತೀಯ ಗೇಮಿಂಗ್ ಉದ್ಯಮದ ಅನುಭವಿ ವಿಶಾಲ್ ಗೊಂಡಾಲ್ ಅವರನ್ನು ಹೂಡಿಕೆದಾರರೆಂದು ಪರಿಗಣಿಸುವ ಬೆಂಗಳೂರು ಮೂಲದ ಎನ್‌ಕೋರ್ ಗೇಮ್ಸ್‌ ಈ ಗೇಮ್ ಅನ್ನು ಸಿದ್ಧಪಡಿಸಿದ್ದು, ಅಕ್ಟೋಬರ್ ವೇಳೆಗೆ ಎಲ್ಲರಿಗೂ ಲಭ್ಯವಾಗಲಿದೆ.

ಫಿಯರ್‌ಲೆಸ್ ಆ್ಯಂಡ್ ಯೂನೈಟೆಡ್‌ ಗಾರ್ಡ್ಸ್ ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಗೇಮಿಂಗ್ ಅಪ್ಲಿಕೇಶನ್ ಹಲವು ವಿಶೇಷತೆಗಳಿಂದ ಕೂಡಿದ್ದು, ಭಾರತೀಯ ಸೈನಿಕರ ತ್ಯಾಗ ಮತ್ತು ಬಲಿದಾನದ ಬಗ್ಗೆಯೂ ಗೇಮ್‌ನಲ್ಲಿ ತಿಳಿಸಲಾಗುತ್ತದೆ ಎನ್ನಲಾಗಿದೆ. ಮತ್ತು ಗೇಮ್‌ ಬಳಕೆಯಿಂದ ಬರುವಂತಹ ನಿವ್ವಳ ಆದಾಯದಲ್ಲಿ ಶೇಕಡಾ 20ರಷ್ಟು ಆದಾಯವು ನೇರವಾಗಿ ಭಾರತ್‌ಕೀ ವೀರ್‌ ಟ್ರಸ್ಟ್‌ಗೆ ಜಮಾವಣೆಯಾಗಲಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

English summary
Two days after the government announced a decision to block PUBG MOBILE, Made India game FAU-G game coming soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X